ಕರ್ನಾಟಕ

karnataka

ETV Bharat / state

ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಹೆಚ್.‌ ವಿಶ್ವನಾಥ್‌ ಆಗ್ರಹ - Muda Case

ಲೋಕಾಯುಕ್ತದಲ್ಲಿ ಮುಡಾ ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತದೆ ಎಂಬ ನಂಬಿಕೆ ಇಲ್ಲ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಎಂಎಲ್​ಸಿ ಹೆಚ್.‌ ವಿಶ್ವನಾಥ್‌ ಒತ್ತಾಯಿಸಿದ್ದಾರೆ.

ಹೆಚ್.‌ ವಿಶ್ವನಾಥ್‌
ಹೆಚ್.‌ ವಿಶ್ವನಾಥ್‌ (ETV Bharat)

By ETV Bharat Karnataka Team

Published : Sep 30, 2024, 3:45 PM IST

Updated : Sep 30, 2024, 5:35 PM IST

ಮೈಸೂರು:ಮುಡಾ ಪ್ರಕರಣವನ್ನು ಸಿಬಿಐ ಸ್ವಯಂ ಪ್ರೇರಿತವಾಗಿ ಕೇಸ್​ ದಾಖಲಿಸಿಕೊಂಡು ತನಿಖೆ ಮಾಡಬೇಕು. ಮುಡಾದ ಎಲ್ಲ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್.‌ ವಿಶ್ವನಾಥ್‌ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ಕು ತಂಡಗಳಿಂದ ಮುಡಾ ಪ್ರಕರಣದ ತನಿಖೆ ಆರಂಭವಾಗಿದೆ. ನಾನು, ಸಿದ್ದರಾಮಯ್ಯ ಕಾಲೇಜು ದಿನಗಳಲ್ಲಿ ಒಟ್ಟಿಗೆ ಇದ್ದವರು. ಸಿದ್ದರಾಮಯ್ಯ ಈ ದುಃಸ್ಥಿತಿ ನೋಡಿ ನನಗೆ ಬೇಸರವಾಗಿದೆ, ಮನಸ್ಸಿಗೆ ನೋವಾಗಿದೆ. ಪ್ರಜಾಪ್ರಭುತ್ವದಲ್ಲಿ ಸಿಎಂ ಸ್ಥಾನ ದೊಡ್ಡ ಅವಕಾಶ ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಈ ಸ್ಥಿತಿ ಬರಬಾರದಿತ್ತು ಎಂದರು.

ಹೆಚ್.‌ ವಿಶ್ವನಾಥ್‌ (ETV Bharat)

14 ಸೈಟ್​ಗಳನ್ನು ವಾಪಸ್​ ಕೊಟ್ಟು ಮುಡಾದ ಎಲ್ಲ ಪ್ರಕರಣಗಳನ್ನು ತನಿಖೆ ಮಾಡಿಸಿ ಎಂದು ನಾನು ಹಿಂದೆಯೇ ಹೇಳಿದ್ದೆ. ಆದರೆ ಇಂದು ಈ ಪ್ರಕರಣ ಲೋಕಾಯುಕ್ತಕ್ಕೆ ಬಂದಿದೆ. ಲೋಕಾಯುಕ್ತದಲ್ಲಿ ಈ ತನಿಖೆ ಸರಿಯಾಗಿ ನಡೆಯುತ್ತದೆ ಎಂಬ ನಂಬಿಕೆ ಇಲ್ಲ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಪೊನ್ನಣ್ಣ, ಮರಿಗೌಡ ಎಲ್ಲರೂ ಸೇರಿ ನಿಮ್ಮ ದಿಕ್ಕು ತಪ್ಪಿಸಿದ್ದಾರೆ. ಇವರೆಲ್ಲಾ ಸೇರಿ ನಿಮ್ಮ ಕುಟುಂಬವನ್ನು ಕಷ್ಟಕ್ಕೆ ತಳ್ಳಿದ್ದಾರೆ. ನೀವು ಈ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಲೋಕಾಯುಕ್ತವನ್ನೇ ತೆಗೆದು ಎಸಿಬಿ ತಂದ ನೀವು ಯಾವ ಸೀಮೆ ಸತ್ಯವಂತರು. ಕೆಂಪಣ್ಣ ವರದಿ ಹೊರಗೆ ತರಬೇಕು. ಒಬ್ಬ ಜನ ನಾಯಕನಿಗಿರುವ ಗುಣ ನಿಮ್ಮಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಒಬ್ಬ ಸಾಮಾನ್ಯ ವ್ಯಕ್ತಿಗೂ ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸುವ ಶಕ್ತಿ ಕೊಟ್ಟವರು ಬಾಬಾ ಸಾಹೇಬ್‌ ಅಂಬೇಡ್ಕರ್‌. ಸ್ನೇಹಮಯಿ ಕೃಷ್ಣ ನೀನು ಹೆದರಬೇಡ ನಿಮ್ಮ ಜತೆ ನಾವಿದ್ದೇವೆ, ಬಿಜೆಪಿ ಪಕ್ಷದ ಬೆಂಬಲವಿದೆ ಎಂದರು.

ಮಹದೇವಪ್ಪ ಹಣ ಲೂಟಿ ಹೊಡೆಯಲು ಹೊರಟಿದ್ದಾರೆ:ಈ ಬಾರಿ ದಸರಾ ಮಹೋತ್ಸವಕ್ಕೆ 45 ಕೋಟಿ ಬಿಡುಗಡೆ ಮಾಡಿದ್ದಾರೆ. ಇದರ ಜತೆ ಪ್ರಾಯೋಜಕತ್ವದ ಹಣ ಕೂಡ ಬರುತ್ತದೆ. ನಾನು ಸಹಾ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ನೀವು ಯುವ ದಸರಾದಲ್ಲಿ ಇಳಯರಾಜನಿಗೆ 5 ಕೋಟಿ ಕೊಟ್ಟು ಏನು ಮಾಡುತ್ತೀರಿ?. ಒಬ್ಬೊಬ್ಬ ಕಲಾವಿದನಿಗೆ 1 ಕೋಟಿ, 2 ಕೋಟಿ, 5 ಕೋಟಿ , ಎಲ್ಲಿಂದ ತರುತ್ತೀರಿ?. ಸಾರ್ವಜನಿಕರ ಹಣ ಲೂಟಿ ಹೊಡೆಯಲು ಮಹದೇವಪ್ಪ ಹೊರಟ್ಟಿದ್ದೀರಿ ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಕಿಡಿಕಾರಿದರು.

ಇದನ್ನೂ ಓದಿ:'ಲೋಕಾಯುಕ್ತ ಎಸ್​ಐಟಿ ಕೆಲಸಕ್ಕೆ ಅಡ್ಡಿಪಡಿಸಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ' - Home Minister Parameshwar

Last Updated : Sep 30, 2024, 5:35 PM IST

ABOUT THE AUTHOR

...view details