ಸರ್ಕಾರಿ ಶಾಲೆಯ ಗ್ರಂಥಾಲಯ ಉದ್ಘಾಟಿಸಿದ ಸಂಸದ ಯದುವೀರ್ (ETV Bharat) ಮೈಸೂರು:ಕುಂಬಾರು ಕೊಪ್ಪಲುವಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಬೆಳಗ್ಗೆ ಭೇಟಿ ನೀಡಿದ ಸಂಸದ ಯದುವೀರ್ ಒಡೆಯರ್, ಗ್ರಂಥಾಲಯ ಉದ್ಘಾಟಿಸಿದರು. ಬಳಿಕ ಡಿಜಿಟಲ್ ಬೋರ್ಡ್ ಮೂಲಕ ಮಕ್ಕಳಿಗೆ ನೀತಿ ಪಾಠ ಹೇಳಿ, ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ರಾಜವಂಶಸ್ಥ ಯದುವೀರ್ ಸಂಸದರಾಗುವ ಮುಂಚೆಯೂ ಎನ್ಜಿಒಗಳ ಜೊತೆ ಸೇರಿ ಹಲವು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದರು. ಸರ್ಕಾರಿ ಶಾಲೆಗಳಿಗೆ ಗ್ರಂಥಾಲಯ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದು, ಇದು 100ನೇ ಗ್ರಂಥಾಲಯವಾಗಿದೆ.
ಈ ಸಂದರ್ಭದಲ್ಲಿ ಚಾಮುಂಡಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, "ಸರ್ಕಾರ ಚಾಮುಂಡಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೋರ್ಟ್ ಆದೇಶದಂತೆ ನಡೆದುಕೊಳ್ಳಲಿ" ಎಂದರು.
ಬಳಿಕ, ಹುಣಸೂರು ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಕುರಿತು ಪ್ರತಿಕ್ರಿಯಿಸಿ, "ನಾನು ಸಂಸದನಾದ ಮೇಲೆ ಮೊದಲ ಬಾರಿಗೆ ಮತ ಚಲಾಯಿಸಲಿದ್ದೇನೆ. ಇಲ್ಲೂ ಎನ್ಡಿಎಗೆ ಗೆಲುವು ಸಿಗಲಿದೆ" ಎಂದು ಹೇಳಿದರು.
ಇದನ್ನೂ ಓದಿ:ಸದ್ಯದ ಪರಿಸ್ಥಿತಿಯಲ್ಲಿ ಭಕ್ತಿಯೊಂದಿಗೆ ಜ್ಞಾನದ ಅನಿವಾರ್ಯತೆ ಎದುರಾಗಿದೆ : ಸಂಸದ ಯದುವೀರ್ - MP Yaduveer Wadiyar