ಕರ್ನಾಟಕ

karnataka

ETV Bharat / state

ಮಳೆರಾಯನ ಕೃಪೆಯಿಂದ ಬೆಳಗಾವಿಯ ಸಪ್ತನದಿಗಳಲ್ಲಿ ಜೀವಕಳೆ: ಅರ್ಧ ಭರ್ತಿಯತ್ತ ಹಿಡಕಲ್ ಡ್ಯಾಂ - Belagavi Rain Report - BELAGAVI RAIN REPORT

ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿದ್ದು, ಬೆಳಗಾವಿಯ ಸಪ್ತನದಿಗಳು, ಜಲಾಶಯಗಳು ತುಂಬಿದ್ದು ಜಲಪಾತಗಳಿಗೆ ಜೀವಕಳೆ ಬಂದಿದೆ.

ಬೆಳಗಾವಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಗೆ ತುಂಬಿದ ಡ್ಯಾಂ
ಬೆಳಗಾವಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಗೆ ತುಂಬಿದ ಡ್ಯಾಂ (ETV Bharat)

By ETV Bharat Karnataka Team

Published : Jul 9, 2024, 2:18 PM IST

Updated : Jul 9, 2024, 3:13 PM IST

ಮಳೆರಾಯನ ಕೃಪೆಯಿಂದ ನದಿಗಳಲ್ಲಿ ಜೀವಕಳೆ (ETV Bharat)

ಬೆಳಗಾವಿ:ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಬೆಳಗಾವಿ ಜಿಲ್ಲೆಯ ಸಪ್ತನದಿಗಳು, ಜಲಾಶಯಗಳು, ಜಲಪಾತಗಳಿಗೆ ಜೀವಕಳೆ ಬಂದಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕಳೆದ ವರ್ಷ ಭೀಕರ ಬರಗಾಲದಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತರಿಗೆ ಈ ಬಾರಿ ವರುಣರಾಯ ಕೃಪೆ ತೋರಿದ್ದಾನೆ. ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆ ಆಗುತ್ತಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂದಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಉತ್ತಮ ಮಳೆ:ಜೂನ್​ 1ರಿಂದ ಈವರೆಗೆ ವಾಡಿಕೆಯಂತೆ 201 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ವಾಡಿಕೆಗಿಂತ 266 ಮಿ.ಮೀ. ಮಳೆ ದಾಖಲಾಗಿದ್ದು, ಶೇ.33ರಷ್ಟು ಏರಿಕೆಯಾಗಿದೆ. ಜು.1ರಿಂದ ಜುಲೈ 9 ರವರಗೆ 55 ಮಿ.ಮೀ. ಮಳೆಯಾಗಬೇಕಿತ್ತು. 78 ಮಿ.ಮೀ ಮಳೆಯಾಗಿದ್ದು, ಶೇ.43ರಷ್ಟು ಹೆಚ್ಚು ಮಳೆ ದಾಖಲಾಗಿದೆ. ಮುಂಗಾರು ಕೈಹಿಡಿದಿದ್ದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ.

ಅರ್ಧ ಭರ್ತಿಯತ್ತ ಹಿಡಕಲ್ ಡ್ಯಾಂ:51 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಹಿಡಕಲ್​​ ಜಲಾಶಯದಲ್ಲಿ ಜುಲೈ 9ರಂದು 21.105 ಟಿಎಂಸಿ ನೀರು ಸಂಗ್ರಹವಿದ್ದರೆ, 25,677 ಕ್ಯೂಸೆಕ್ ಒಳಹರಿವು, 3,007 ಕ್ಯೂಸೆಕ್ ಹೊರ ಹರಿವಿದೆ. ಹಿಂದಿನ ವರ್ಷ ಈ ದಿನಕ್ಕೆ 4.479 ಟಿಎಂಸಿ ನೀರು ಸಂಗ್ರಹವಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 16.626 ಟಿಎಂಸಿ ನೀರು ಹೆಚ್ಚಿಗೆ ಸಂಗ್ರಹವಾಗಿದೆ. ಒಂದೇ ವಾರದಲ್ಲಿ 10 ಟಿಎಂಸಿ ನೀರು ಏರಿಕೆಯಾಗಿದೆ.

ಖಾನಾಪುರ ತಾಲೂಕಿನಾದ್ಯಂತ ಬಿಟ್ಟುಬಿಡದೇ ಮಳೆ ಸುರಿಯುತ್ತಿದ್ದು, ಮಲಪ್ರಭಾ ನದಿಯ ನವೀಲುತೀರ್ಥ ಜಲಾಶಯದ ನೀರಿನ ಮಟ್ಟ ಕೂಡ ಏರಿಕೆಯಾಗಿದೆ. ಇದರ ಗರಿಷ್ಠ ಸಾಮರ್ಥ್ಯ-37.731 ಟಿಎಂಸಿ, ಇಂದಿನ ಸಂಗ್ರಹ-10.936 ಟಿಎಂಸಿ, ಗರಿಷ್ಠ ಮಟ್ಟ-2079.50, ಇಂದಿನ ಮಟ್ಟ-2052.00, ಒಳ ಹರಿವು- 8504 ಕ್ಯೂಸೆಕ್, ಹೊರ ಹರಿವು 194 ಕ್ಯೂಸೆಕ್ ಇದೆ. ಕಳೆದ ವರ್ಷ ಈ ದಿವಸ 6.838 ಟಿಎಂಸಿ ನೀರು ಸಂಗ್ರಹವಾಗಿತ್ತು. ಹಾಗಾಗಿ, ಈ ವರ್ಷ 4 ಟಿಎಂಸಿ ನೀರು ಹೆಚ್ಚು ಸಂಗ್ರಹವಾಗಿದೆ.

ಮತ್ತೆ ಮುಳುಗಿದ ವಿಠಲ‌ ಮಂದಿರ:ಹಿಡಕಲ್‌ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಹುಕ್ಕೇರಿ ತಾಲೂಕಿನ ಹುಣ್ಣೂರು ಗ್ರಾಮದಲ್ಲಿರುವ ವಿಠಲ ಮಂದಿರ ಮತ್ತೆ ಮುಳುಗಡೆಯಾಗಿದೆ. ಸಂಪೂರ್ಣ ದೇವಸ್ಥಾನ ನೀರಲ್ಲಿ ಮುಳುಗಿದ್ದು ಗೋಪುರ ಮಾತ್ರ ಕಾಣುತ್ತಿದೆ. ಇನ್ನು ನಾಲ್ಕು ಅಡಿ ನೀರು ಜಾಸ್ತಿಯಾದರೆ ಮಂದಿರ ಸಂಪೂರ್ಣ ಮುಳುಗಡೆಯಾಗಲಿದೆ. ಕಳೆದ ವರ್ಷ ಭೀಕರ ಬರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ವಿಠಲ ಮಂದಿರ ಸುದ್ದಿಯಾಗಿತ್ತು. ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದರು.

ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಒಂದು ವಾರದಲ್ಲಿ ದಾಖಲೆಯ 96 ಇಂಚು ಮಳೆ: ಮಂಗಗಳಿಗೂ ಸಂಕಷ್ಟ - Chikkamagaluru Rain

Last Updated : Jul 9, 2024, 3:13 PM IST

ABOUT THE AUTHOR

...view details