ಕರ್ನಾಟಕ

karnataka

ETV Bharat / state

ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾದ ನಂಜುಂಡೇಶ್ವರ, ಹುಂಡಿಯಲ್ಲಿ 1.78 ಕೋಟಿ ಸಂಗ್ರಹ‌ - Nanjundeshwara - NANJUNDESHWARA

ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಒಂದು ತಿಂಗಳಲ್ಲಿ 1.78 ಕೋಟಿ ರೂ. ಸಂಗ್ರಹ‌ವಾಗಿದೆ.

ನಂಜಜಗೂಡಿನ ಶ್ರೀಕಂಠೇಶ್ವರ ದೇವಸ್ಥಾನ
ನಂಜಜಗೂಡಿನ ಶ್ರೀಕಂಠೇಶ್ವರ ದೇವಸ್ಥಾನ

By ETV Bharat Karnataka Team

Published : Mar 30, 2024, 7:27 AM IST

Updated : Mar 30, 2024, 12:28 PM IST

ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾದ ನಂಜುಂಡೇಶ್ವರ

ಮೈಸೂರು : ದಕ್ಷಿಣ ಕಾಶಿ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯವನ್ನು ನಡೆಸಲಾಗಿದ್ದು, ಮತ್ತೆ ಶ್ರೀಕಂಠೇಶ್ವರ ಸ್ವಾಮಿ ಕೋಟ್ಯಾಧಿಪತಿಯಾಗಿರುವುದು ವಿಶೇಷವಾಗಿದೆ. ಸುಮಾರು 1.78 ಕೋಟಿ ರೂ. ಹಣ ಸಂಗ್ರಹವಾಗಿದೆ.

ದೇವಾಲಯದ ದಾಸೋಹ ಭವನದಲ್ಲಿ ಸುಮಾರು 34 ಹುಂಡಿಗಳ ಎಣಿಕೆ ಕಾರ್ಯವನ್ನು ನಡೆಸಲಾಗಿದ್ದು, ಈ ಬಾರಿ ಶ್ರೀಕಂಠೇಶ್ವರ ಸ್ವಾಮಿಯ ಗೌತಮ ಪಂಚ ಮಹಾ ರಥೋತ್ಸವ ಹಾಗೂ ಹುಣ್ಣಿಮೆಯಲ್ಲಿ ಅತಿ ಹೆಚ್ಚಾಗಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿದ ಈ ಹಿನ್ನೆಲೆ 1,78,29, 667 ರೂ. ಸಂಗ್ರಹವಾಗಿದೆ. ಇದರ ಜೊತೆಗೆ 123 ಗ್ರಾಂ 800 ಮಿಲಿ ಗ್ರಾಂ ಚಿನ್ನ, 4 ಕೆಜಿ 600 ಗ್ರಾಂ ಬೆಳ್ಳಿ, 26 ವಿದೇಶಿ ಕರೆನ್ಸಿಗಳು ನಂಜುಂಡೇಶ್ವರನಿಗೆ ಕಾಣಿಕೆಯಾಗಿ ಬಂದಿವೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್, ಎಇಒ ಸತೀಶ್, ಇಒ ಕೃಷ್ಣ, ಕೆನರಾ ಬ್ಯಾಂಕ್ ಮ್ಯಾನೇಜರ್ ಲಕ್ಷ್ಮಿ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ :ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಂಜನಗೂಡು ಪಂಚ ಮಹಾರಥೋತ್ಸವ ವೈಭವ: ವಿಡಿಯೋ - Pancha Maha Rathotsava

Last Updated : Mar 30, 2024, 12:28 PM IST

ABOUT THE AUTHOR

...view details