ಹಾಸನ: ಮದುವೆ ಛತ್ರಕ್ಕೆ ಬಂದ ಕೋತಿಯೊಂದು ವಧು- ವರರ ಆಸನದಲ್ಲಿ ಕುಳಿತು ಕಾಟ ಕೊಟ್ಟಿದ್ದಲ್ಲದೇ, ಮದುವೆಗೆ ಬಂದಿದ್ದ 8 ಜನರ ಮೇಲೆ ದಾಳಿ ಮಾಡಿದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ.
ಮದುವೆ ಮನೆಗೆ ನುಗ್ಗಿ ಕಾಟ ಕೊಟ್ಟ ಮಂಗ: 8 ಮಂದಿಗೆ ಕಚ್ಚಿ ಕೋತಿಯ ರಂಪಾಟ! (ETV Bharat) ಹಿರಿಸಾವೆಯ ನುಗ್ಗೆಹಳ್ಳ ರಸ್ತೆಯಲ್ಲಿನ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಮದುವೆ ಸಮಾರಂಭದಲ್ಲಿ ಕೋತಿ ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದೆ. ಅಲ್ಲದೇ, ಊಟದ ಹಾಲ್ಗೆ ತೆರಳಿ ಊಟ ಮಾಡುತ್ತಿದ್ದವರಿಗೆ ತೊಂದರೆ ಕೊಟ್ಟಿದೆ. ಮದುವೆಗೆ ಬಂದಿದ್ದ ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ, ಗಿರಿಜಮ್ಮ, ತಿಮ್ಮೇಗೌಡ, ಗಿರಿಗೌಡ ಸೇರಿದಂತೆ 8 ಮಂದಿಗೆ ಕಚ್ಚಿದೆ.
ಮದುವೆ ಮನೆಗೆ ನುಗ್ಗಿ ಕಾಟ ಕೊಟ್ಟ ಮಂಗ: 8 ಮಂದಿಗೆ ಕಚ್ಚಿ ಕೋತಿಯ ರಂಪಾಟ! (ETV Bharat) ಗಾಯಾಳುಗಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಮದುವೆ ಮನೆಯಲ್ಲಿ ಮಂಗನಾಟಕ್ಕೆ ಜನರು ಹೈರಾಣಾಗಿದ್ದಾರೆ. ಈ ಕೋತಿ ಹಳ್ಳಿಯ ಜನರಿಗೆ ಆಗಾಗ್ಗೆ ಕಾಟ ಕೊಡುತ್ತಿದ್ದು, ಇದೀಗ ಮದುವೆ ಮನೆಗೆ ಬಂದವರಿಗೂ ಕಾಟ ಕೊಟ್ಟಿದೆ. ಹೀಗಾಗಿ ಕೋತಿಯನ್ನು ಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ನಕಲಿ ಎಕೆ47, ಮೈತುಂಬಾ ಚಿನ್ನ, ಚೆಲುವೆಯರ ಜೊತೆ ಬಿಲ್ಡಪ್! ಭೀತಿ ಹುಟ್ಟಿಸಿದ 'ರೀಲ್ಸ್ ಸ್ಟಾರ್' ಅರೆಸ್ಟ್ - Reels Star Arrest