ಬೆಂಗಳೂರು:"ಉದ್ಯಮಿಮೋಹನ್ ದಾಸ್ ಪೈ ಸುಮ್ಮನೆ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ರಾಜ್ಯಸಭೆ ಸದಸ್ಯ ಸ್ಥಾನ ಬೇಕಾಗಿರಬೇಕು. ಅದಕ್ಕೆ ಈ ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ" ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ವಿಕಾಸಸೌಧದಲ್ಲಿಂದು ಮಾತನಾಡಿದ ಅವರು, "ಅವರಿಗೆ ಕೇಂದ್ರದಲ್ಲಿ ಉನ್ನತ ಹುದ್ದೆ ಬೇಕಾಗಿರಬೇಕು. ಅದಕ್ಕೆ ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಹಿಂದೆ ಇವರು ತಾನೇ ಬೇರೆ ಬೇರೆ ಹುದ್ದೆಯಲ್ಲಿ ಇದ್ದವರು. ಸರ್ಕಾರ ಬದಲಾವಣೆ ಆದ ಮೇಲೆ ಇವರ ವರಸೆ ಬದಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ಅವರಿಗೆ ಟಾರ್ಗೆಟ್ ಆಗಿದ್ದಾರೆ. ಏನೋ ಒಂದು ಆಗಬೇಕಿದೆ. ಅದಕ್ಕೆ ಸೋಷಿಯಲ್ ಮಿಡಿಯಾ ವಾರಿಯರ್ಸ್ ಆಗಿದ್ದಾರೆ. ಆಗ ತಿಂಗಳಿಗೆ ಒಮ್ಮೆ ಮಾತನಾಡುತ್ತಿದ್ದರು. ಈಗ ವಾರವೂ ಮಾತನಾಡುತ್ತಿದ್ದಾರೆ" ಎಂದರು.