ಕರ್ನಾಟಕ

karnataka

ETV Bharat / state

MMB legacy ಎರಡನೇ ವಾರ್ಷಿಕೋತ್ಸವ: ಚಿತ್ರರಂಗದ ಕಾರ್ಯಕ್ರಮಗಳಿಗಾಗಿಯೇ ನಿರ್ಮಾಣವಾದ ಸಭಾಂಗಣ - MMB LEGACY SECOND ANNIVERSARY

ಕಾರ್ಯಕ್ರಮದಲ್ಲಿ ಮಾತನಾಡಿದ ರ‍್ಯಾಪರ್ ಹಾಗೂ​ ನಟ ಚಂದನ್ ಶೆಟ್ಟಿ MMB legacy ತಮ್ಮ ಪಾಲಿಗೆ ಅದೃಷ್ಟದ ಜಾಗ ಎಂದು ಹೇಳಿದ್ದಾರೆ.

Celebrating the second anniversary of MMB legacy
MMB legacy ಎರಡನೇ ವಾರ್ಷಿಕೋತ್ಸವ ಆಚರಣೆ (ETV Bharat)

By ETV Bharat Entertainment Team

Published : Oct 29, 2024, 7:21 AM IST

Updated : Oct 29, 2024, 8:10 AM IST

ನಟ, ನಿರ್ಮಾಪಕ, ನಿರ್ದೇಶಕ ನವರಸನ್ ಅವರ MMB legacy ಎಂಬ ಸುಸಜ್ಜಿತ ಸಭಾಂಗಣ ಇತ್ತೀಚೆಗೆ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಕಾರ್ಯಕ್ರಮದಲ್ಲಿ ಚಿತ್ರರಂಗದ ನಟರಿಂದ ಹಿಡಿದು, ನಿರ್ದೇಶಕರು, ನಿರ್ಮಾಪಕರು, ಸಂಗೀತ ಸಂಯೋಜಕರು ಸೇರಿದಂತೆ ಹಲವು ಭಾಗಿಯಾದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ನಟರಾದ ಚಂದನ್ ಶೆಟ್ಟಿ, ಶ್ರೇಯಸ್ ಮಂಜು, ನಿರ್ಮಾಪಕರಾದ ಕೃಷ್ಣ ಸಾರ್ಥಕ್, ಗೋವಿಂದರಾಜು, ಚೇತನ್ ಗೌಡ, ರಾಜೇಶ್, ಜಿ.ಟಿ.ಮಾಲ್​ನ ಮಾಲೀಕ ಆನಂದ್, ಜಾಲಿವುಡ್ ಸ್ಟುಡಿಯೋಸ್​ನ ಬಶೀರ್ ಹಾಗೂ ಸಿನಿಮಾ ಪ್ರಚಾರಕರ್ತರಾದ ಸುಧೀಂದ್ರ ವೆಂಕಟೇಶ್, ನಾಗೇಂದ್ರ, ವಿಜಯ್ ಕುಮಾರ್, ಕಲ್ಲೇಶ್ ಮುಂತಾದವರು ಸಮಾರಂಭದಲ್ಲಿ ಕೇಕ್ ಕತ್ತರಿಸಿ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿದರು.

MMB legacy ಎರಡನೇ ವಾರ್ಷಿಕೋತ್ಸವ ಆಚರಣೆ (ETV Bharat)

ಈ ಖುಷಿಯ ಸಂಭ್ರಮಕ್ಕೆ ಸಾಕ್ಷಿಯಾದ ನಟ ಹಾಗೂ ಸಂಗೀತ ನಿರ್ದೇಶಕ್ಕೆ ಚಂದನ್‌ ಶೆಟ್ಟಿ ಮಾತನಾಡಿ, "ಈ MMB legacy ನನಗೆ ಅದೃಷ್ಟದ ಜಾಗ. ಯಾಕೆಂದರೆ ನಾನು ಈ ವೇದಿಕೆಯಲ್ಲಿ MMB legacy ಮುಖ್ಯಸ್ಥ ನವರಸನ್ ಅವರು 'ಸೂತ್ರಧಾರಿ' ಸಿನಿಮಾದಲ್ಲಿ ಹೀರೋ ಆದೆ. ಈ ಚಿತ್ರದ ಡ್ಯಾಷ್ ಹಾಡು ಕೂಡ ಈ ಸ್ಥಳದಲ್ಲಿ ಲಾಂಚ್ ಮಾಡಿದ್ದು, ಆ ಹಾಡು ಸೂಪರ್ ಹಿಟ್ ಆಗಿದೆ" ಎಂದು ಚಂದನ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸೀಮಿತ ಬಜೆಟ್​ನಲ್ಲಿ ಸುಸಜ್ಜಿತ ಸಭಾಂಗಣದ ಅವಶ್ಯಕತೆ ಇದೆ;ಮುಖ್ಯಸ್ಥ ನವರಸನ್ ಮಾತನಾಡಿ, "ಕೆಲವು ವರ್ಷಗಳ ಹಿಂದೆ ಚಿತ್ರರಂಗದ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, ಚಲನಚಿತ್ರಗಳ ಕುರಿತಾದ ಸಮಾರಂಭಗಳನ್ನು ನಡೆಸಲು ಸೀಮಿತ ಬಜೆಟ್​ನಲ್ಲಿ ಸುಸಜ್ಜಿತ ಸಭಾಂಗಣದ ಅವಶ್ಯಕತೆ ಇದೆ‌. ಅದು ನಿರ್ಮಾಪಕರಿಗೆ ಅನುಕೂಲವಾಗುವಂತಹದು ಆಗಿರಬೇಕು ಎನ್ನುವ ಮಾತು ಕೇಳಿ ಬಂದಿತ್ತು. ಆ ಕೂಡಲೆ ನಾನು ಈ ವಿಷಯದ ಕುರಿತು ಯೋಚಿಸತೊಡಗಿದೆ. ಜಿ.ಟಿ.ಮಾಲ್​ನ ನಾಲ್ಕನೇ ಅಂತಸ್ತಿನಲ್ಲಿ ವಿಶಾಲವಾದ ಸ್ಥಳವಿತ್ತು. ಇದರ ಮಾಲೀಕ ಆನಂದ್ ಅವರ ಬಳಿ ಈ ಬಗ್ಗೆ ಮಾತನಾಡಿದೆ. ಅವರು ಜಾಗ ನೀಡಿದರು. ಕೆಲವೇ ತಿಂಗಳಲ್ಲಿ ಸಿನಿಮಾಗಳ ಟೀಸರ್, ಟ್ರೇಲರ್, ಹಾಡು ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿಗಳನ್ನು ನಡೆಸುವಂತಹ ಸುಸಜ್ಜಿತ MMB legacy ಸಭಾಂಗಣ ಸಿದ್ಧವಾಯಿತು." ಎಂದರು.

MMB legacy ಎರಡನೇ ವಾರ್ಷಿಕೋತ್ಸವ ಆಚರಣೆ (ETV Bharat)

"ನಿರ್ಮಾಪಕರಿಗೆ ಆರ್ಥಿಕವಾಗಿ ಹೆಚ್ಚು ಹೊರೆ ಆಗದಂತಹ ದರವನ್ನು ನಿಗದಿಪಡಿಸಲಾಯಿತು‌‌. ಎರಡು ವರ್ಷಗಳಲ್ಲಿ ಚಲನಚಿತ್ರಕ್ಕೆ ಸಂಬಂಧಿಸಿದ ಸುಮಾರು 300 ಸಮಾರಂಭಗಳು ಇಲ್ಲಿ ನಡೆದಿವೆ. ಹಾಗಂತ ಇದರಿಂದ ನನಗೆ ಆರ್ಥಿಕವಾಗಿ ತುಂಬಾ ಲಾಭ ಅಂತ ಇಲ್ಲ. ಕೆಲವೊಮ್ಮೆ ನಾನೇ ಕೈಯಿಂದ ಬಾಡಿಗೆ ಕಟ್ಟಿದ್ದೂ ಇದೆ. ಆದರೆ, ಚಿತ್ರರಂಗಕ್ಕೆ ಅದರಲ್ಲೂ ವಿಶೇಷವಾಗಿ ನಿರ್ಮಾಪಕರಿಗಾಗಿ ಈ ಜಾಗವನ್ನು ಶುರು ಮಾಡಿದೆ" ಎಂದು ತಿಳಿಸಿದರು.

ಸಿನಿಮಾ ಸುದ್ದಿಗೋಷ್ಠಿ ಮಾಡಲು ಅದ್ಧೂರಿ ಸ್ಟೇಜ್:15 ವರ್ಷಗಳ ಹಿಂದೆ ಕನ್ನಡ ಸಿನಿಮಾರಂಗದಲ್ಲಿ ಸಿನಿಮಾದ ಟ್ರೈಲರ್, ಹಾಡುಗಳ ಬಿಡುಗಡೆ ಜೊತೆ ಸಿನಿಮಾ ಸುದ್ದಿಗೋಷ್ಠಿ ಮಾಡಲು ಅದ್ಧೂರಿ ಸ್ಟೇಜ್ ಅಥವಾ ಅತ್ಯಾಧುನಿಕ ಟೆಕ್ನಾಲಜಿ ಇಲ್ಲದೆ ಕೆಲ ನಿರ್ಮಾಪಕರು ಐಶಾರಾಮಿ ಹೋಟೆಲ್​ಗಳಲ್ಲಿ ಮಾಡಬೇಕಾಗುತ್ತಿತ್ತು‌. ಆ ಹೋಟೆಲ್ ಜಾಗ ಹಾಗು ದೊಡ್ಡ ಪರದೆಯ ಎಲ್​ಇಡಿ ಸ್ಕ್ರೀನ್ ಸೇರಿ ಎರಡರಿಂದ ಮೂರು ಲಕ್ಷ ರೂಪಾಯಿ ಖರ್ಚು ಆಗುತ್ತಿತ್ತು. ಇದು ಒಂದೆಡೆಯಾದರೆ ಸಣ್ಣ ಬಜೆಟ್ ಸಿನಿಮಾಗಳು ಗ್ರೀನ್ ಹೌಸ್ ಹಾಗು ರೇಣುಕಾಂಬ ಥಿಯೇಟರ್ ಬಿಟ್ಟರೆ ಹೋಟೆಲ್​ಗಳಲ್ಲಿ ಸಿನಿಮಾದ ಕಾರ್ಯಕ್ರಮ ಮಾಡುವುದು ಕಷ್ಟ ಆಗುತ್ತಿತ್ತು. ಇಂಥ ಸಮಯದಲ್ಲಿ ನಟ, ನಿರ್ಮಾಪಕ, ನಿರ್ದೇಶಕ ನವರಸನ್ ದೊಡ್ಡ ಸಿನಿಮಾ ಬಜೆಟ್ ನಿರ್ಮಾಪಕರಿಂದ ಹಿಡಿದು ಚಿಕ್ಕ ಬಜೆಟ್ ಚಿತ್ರದ ನಿರ್ಮಾಪಕರಿಗೆ ಕಡಿಮೆ ಬಜೆಟ್​ನಲ್ಲಿ ಸಿನಿಮಾ ಕಾರ್ಯಕ್ರಮ ನಡೆಸಲು ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್​ನಲ್ಲಿ ಸುಸಜ್ಜಿತ ಸ್ಟೇಜ್ ಜೊತೆಗೆ ದೊಡ್ಡ ಪರದೆಯ ಎಲ್​ಇಡಿ ಸ್ಕ್ರೀನ್​ ಹೊಂದಿರುವ MMB legacy ಎಂಬ ಸುಸಜ್ಜಿತ ಸಭಾಂಗಣ ನಿರ್ಮಾಣ ಮಾಡಿದರು. ಇದೀಗ ಸಭಾಂಗಣ ಎರಡು ವರ್ಷಗಳನ್ನು ಪೂರೈಸಿದೆ.

ಇದನ್ನೂ ಓದಿ:ಹೇಳಿಕೊಂಡಿದ್ದು ವಿರಳ, ಮಾಡಿದ್ದು ಬಹಳ: ಪುನೀತ್ ರಾಜ್​​​ಕುಮಾರ್ ಸಮಾಜಸೇವೆ ಹೇಗಿತ್ತು ಗೊತ್ತಾ?

Last Updated : Oct 29, 2024, 8:10 AM IST

ABOUT THE AUTHOR

...view details