ಬೆಂಗಳೂರು:ಗುತ್ತಿಗೆದಾರನಿಗೆ ಬೆದರಿಕೆ, ಜಾತಿನಿಂದನೆ ಹಾಗೂ ಅತ್ಯಾಚಾರದ ಆರೋಪ ಎದುರಿಸುತ್ತಿರುವ ಶಾಸಕ ಮುನಿರತ್ನ ಅವರ ನಿವಾಸ ಸೇರಿದಂತೆ ವಿವಿಧೆಡೆ ಎಸ್ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಶಾಸಕ ಮುನಿರತ್ನ ನಿವಾಸ, ಕಚೇರಿಗಳಲ್ಲಿ ಎಸ್ಐಟಿಯಿಂದ ಪರಿಶೀಲನೆ - SIT officers raid - SIT OFFICERS RAID
ವೈಯಾಲಿಕಾವಲ್‌ನಲ್ಲಿರುವ ಶಾಸಕ ಮುನಿರತ್ನ ನಿವಾಸ ಸೇರಿ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಎಸ್ಐಟಿ ಅಧಿಕಾರಿಗಳಿಂದ ತೀವ್ರ ಶೋಧ ನಡೆದಿದೆ.
Published : Sep 28, 2024, 10:53 AM IST
ವೈಯಾಲಿಕಾವಲ್‌ನಲ್ಲಿರುವ ಮುನಿರತ್ನ ಅವರ ನಿವಾಸಕ್ಕೆ ಭೇಟಿ ನೀಡಿರುವ ಎಸ್ಐಟಿ ತನಿಖಾಧಿಕಾರಿ ಕವಿತಾ ನೇತೃತ್ವದ ತಂಡ ಶೋಧ ನಡೆಸುತ್ತಿದೆ. ಸದ್ಯ ಮೂರೂ ಪ್ರಕರಣಗಳ ಸಂಬಂಧ ಎಸ್ಐಟಿ ತನಿಖೆ ನಡೆಸುತ್ತಿದ್ದು, ಮುನಿರತ್ನ ಅವರನ್ನು ವಿಚಾರಣೆಗೊಳಪಡಿಸಿದೆ. ಇಂದು ಮುಂಜಾನೆ ವೈಯಾಲಿಕಾವಲ್‌ನಲ್ಲಿರುವ ಮುನಿರತ್ನ ಅವರ ನಿವಾಸ, ಕಚೇರಿ ಸೇರಿದಂತೆ ವಿವಿಧೆಡೆ ಎಫ್ಎಸ್ಎಲ್ ತಂಡದೊಂದಿಗೆ ತೆರಳಿ ಎಸ್ಐಟಿ ಅಧಿಕಾರಿಗಳು ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ. ಪರಿಶೀಲನೆ ಮುಂದುವರೆದಿದೆ.
ಇದನ್ನೂ ಓದಿ:12 ದಿನಗಳ ಕಾಲ ಶಾಸಕ ಮುನಿರತ್ನ ಎಸ್ಐಟಿ ವಶಕ್ಕೆ - MLA Munirathna Case