ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪಾರ್ಸಲ್ ಕಚೇರಿಯಲ್ಲಿದ್ದ ದಾಖಲೆ ಇಲ್ಲದ 480 ಮಿಕ್ಸರ್ ವಶಕ್ಕೆ - Mixers seize - MIXERS SEIZE

ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪಾರ್ಸಲ್ ಆಫೀಸ್​ನಲ್ಲಿ ದಾಖಲೆ ಇಲ್ಲದ 480 ಮಿಕ್ಸರ್​ಗಳನ್ನು ಪೊಲೀಸರು, ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಿಕ್ಸರ್ ವಶಕ್ಕೆ
ಮಿಕ್ಸರ್ ವಶಕ್ಕೆ

By ETV Bharat Karnataka Team

Published : Mar 23, 2024, 9:27 AM IST

Updated : Mar 23, 2024, 1:29 PM IST

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಅಕ್ರಮ ಮತ್ತು ದಾಖಲೆ ಇಲ್ಲದ ವಸ್ತುಗಳು, ಹಣದ ಮೇಲೆ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ನಿಗಾ ಇರಿಸಿದ್ದಾರೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪಾರ್ಸಲ್ ಆಫೀಸ್​ನಲ್ಲಿ ಸ್ವೀಕೃತವಾಗಿದ್ದ ದಾಖಲೆ ಇಲ್ಲದ 8 ಲಕ್ಷ ರೂ. ಮೌಲ್ಯದ 480 ಮಿಕ್ಸರ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಹುಬ್ಬಳ್ಳಿಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹುಬ್ಬಳ್ಳಿ (ಪೂರ್ವ) ವಿಧಾನಸಭಾ ವ್ಯಾಪ್ತಿಯಲ್ಲಿನ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ರೈಲ್ವೆ ಪಾರ್ಸಲ್ ಆಫೀಸ್​ನಲ್ಲಿ ಅನಧಿಕೃತವಾಗಿ ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಎಲೆಕ್ಟ್ರಾನಿಕ್ ವಸ್ತುಗಳು ಸ್ವೀಕೃತವಾಗಿವೆ ಎಂಬ ದೂರು ಬಂದಿತ್ತು. ಚುನಾವಣಾ ಕರ್ತವ್ಯದಲ್ಲಿದ್ದ ವಾಣಿಜ್ಯ ತೆರಿಗೆ ಅಧಿಕಾರಿಗಳು ಮತ್ತು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಿಗೆ ಈ ಮಾಹಿತಿ ಬಂದ ತಕ್ಷಣ ಶುಕ್ರವಾರ ಸಂಜೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾದ ಬಸವರಾಜ ಚಿತ್ತರಗಿ ಅವರು ಸ್ಥಳಕ್ಕೆ ತೆರಳಿ, ಪರಿಶೀಲಿಸಿದರು.

drop media here..

ಈ ವೇಳೆ ಒಟ್ಟು 24 ರಟ್ಟಿನ ಬಾಕ್ಸ್​ಗಳಲ್ಲಿ ಸುಮಾರು 8 ಲಕ್ಷ ರೂ. ಮೌಲ್ಯದ 480 ಮಿಕ್ಸರ್​ಗಳು ಸ್ವೀಕೃತವಾಗಿದ್ದು, ಅವುಗಳಿಗೆ ಯಾವುದೇ ಸೂಕ್ತ ದಾಖಲೆಗಳು ಇಲ್ಲದಿರುವುದು ಕಂಡುಬಂದಿರುತ್ತದೆ. ಈ ವಸ್ತುಗಳನ್ನು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಮತದಾರರಿಗೆ ಉಚಿತವಾಗಿ ಹಂಚುವ ಸಲುವಾಗಿ ತರಸಿರುವ ಅನುಮಾನದ ಮೇಲೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ವಸ್ತುಗಳನ್ನು ಯಾರು ತರಿಸಿದ್ದರು ಎಂಬ ಕುರಿತು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ತುಮಕೂರು: ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್​​ ಚುನಾವಣಾ ಅಧಿಕಾರಿಗಳ ವಶಕ್ಕೆ​​ - LOK SABHA ELECTION

ಗುರುವಾರ ರಾತ್ರಿ ಧಾರವಾಡದ ತೇಗೂರು ಚೆಕ್ ಪೋಸ್ಟ್​​ನಲ್ಲಿ ತಪಾಸಣೆ ವೇಳೆ ಸಾರಿಗೆ (ನಿಪ್ಪಾಣಿ-ಗಂಗಾವತಿ) ಬಸ್​​ನಲ್ಲಿ ಸರಿಯಾದ ದಾಖಲೆ ಇಲ್ಲದ 38,50,000 ರೂ ಮೌಲ್ಯದ ಬಂಗಾರದ ಆಭರಣಗಳು ಪತ್ತೆಯಾಗಿವೆ. ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ಎಫ್‍ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಮಾ. 21 ರಂದು ರಾತ್ರಿ 11:35 ಗಂಟೆಗೆ ತೇಗೂರ ಚೆಕ್ ಪೋಸ್ಟ್​​ನಲ್ಲಿ ಕೊಲ್ಲಾಪುರ ಮೂಲದ ಪ್ರಕಾಶ್​ ಕುಮಾರ (47) ಎಂಬಾತ 778 ಗ್ರಾಂ ತೂಕದ ಬೋರಮಾಳ ಸರ, ಗುಂಡುಗಳು, ಲಾಕೇಟ್​ ಇರುವ ಅಂದಾಜು 38.50 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಕೊಲ್ಲಾಪುರದಿಂದ ಸಿಂದನೂರು ಕಡೆಗೆ ತೆಗೆದುಕೊಂಡು ಹೋಗುತ್ತಿದ್ದ. ಜಪ್ತಿ ವೇಳೆ ಬಿಲ್​​ನಲ್ಲಿರುವ ಬಂಗಾರದ ಆಭರಣಗಳ ತೂಕಕ್ಕೂ ಹಾಗೂ ತಪಾಸಣೆಯಲ್ಲಿ ಸಿಕ್ಕ ಬಂಗಾರದ ಆಭರಣಗಳ ತೂಕಕ್ಕೂ ವ್ಯತ್ಯಾಸ ಕಂಡು ಬಂದಿದೆ. ಹಾಗಾಗಿ ಜಪ್ತಿ ಮಾಡಿ ಆರೋಪಿ ವಿರುದ್ಧ ಗರಗ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ನೀಡಿದ್ದಾರೆ.

ಇದನ್ನೂ ಓದಿ:₹25 ಕೋಟಿ ಮೊತ್ತದ ಮದ್ಯ, ಉಡುಗೊರೆ, ನಗದು ಜಪ್ತಿ

Last Updated : Mar 23, 2024, 1:29 PM IST

ABOUT THE AUTHOR

...view details