ಕರ್ನಾಟಕ

karnataka

ETV Bharat / state

ಜಾತಿಗಣತಿ ಜಾರಿ ಬಗ್ಗೆ ಬಿ.ಕೆ.ಹರಿಪ್ರಸಾದ್ ಹೇಳಿಕೆ ಸರಿ: ಸಚಿವ ಸತೀಶ್ ಜಾರಕಿಹೊಳಿ - SATISH JARAKIHOLI

ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ ಅವರು ಜಾತಿಗಣತಿ ವರದಿ ಜಾರಿ ಬಗ್ಗೆ ಹೇಳಿದ್ದು ಸರಿ ಇದೆ. ಈ ವಿಷಯ ಸದನಕ್ಕೆ ಬಂದರೆ ಮುಕ್ತವಾಗಿ ಚರ್ಚಿಸಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಸಚಿವ ಸತೀಶ್ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ (ETV Bharat)

By ETV Bharat Karnataka Team

Published : Oct 7, 2024, 5:52 PM IST

ಬೆಂಗಳೂರು: ಜಾತಿಗಣತಿ ವರದಿ ಜಾರಿ ಬಗ್ಗೆ ಬಿ.ಕೆ.ಹರಿಪ್ರಸಾದ್ ಅವರು ಹೇಳಿದ್ದು ಸರಿಯಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ನಾವು ಪ್ರಣಾಳಿಕೆಯಲ್ಲೂ ಹೇಳಿದ್ದೆವು. ರಾಹುಲ್ ಗಾಂಧಿಯವರೂ ಹೇಳ್ತಾನೇ ಇದ್ದಾರೆ. ಈ ವಿಷಯ ಸದನಕ್ಕೆ ಬಂದರೆ ಮುಕ್ತವಾಗಿ ಚರ್ಚಿಸಬಹುದು. ನಮ್ಮ ಸಂಖ್ಯೆ ಕಡಿಮೆ ಅನ್ನೋ ಕಾರಣಕ್ಕೆ ವಿರೋಧ ಇರಬಹುದು‌. ಇನ್ನೂ ಈ ವಿಚಾರ ಸದನದಲ್ಲಿ ಚರ್ಚೆಗೇ ಬಂದಿಲ್ಲವಲ್ಲ. ಚರ್ಚೆಯಾದ ಬಳಿಕ ಅಂತಿಮ ರೂಪ ಕೊಡಬೇಕು ಎಂದರು.

ವಿಜಯೇಂದ್ರ ಭೇಟಿ: ಬಿ.ವೈ.ವಿಜಯೇಂದ್ರ ನನ್ನನ್ನು ಭೇಟಿ‌ ಮಾಡಿದ್ದರು. ಶಿಕಾರಿಪುರದ ರಸ್ತೆ ಬಗ್ಗೆ ಮಾತುಕತೆ ನಡೆಸಿದರು. ಕ್ಷೇತ್ರದ ಏನಾದರೂ ಸಮಸ್ಯೆಗಳು ಇರುತ್ತವೆ. ಅದಕ್ಕೆ ಅವರು ಬಂದಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ತಿಳಿಸಿದರು.

ಪದೇ ಪದೆ ದಲಿತ ಸಚಿವರ ಭೇಟಿ ವಿಚಾರವಾಗಿ ಹೈಕಮಾಂಡ್​ಗೆ ಮಾಹಿತಿ ಹೋಗುತ್ತೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷದ ವಿರುದ್ಧವಾಗಿ ನಾವೇನು ನಡೆದುಕೊಳ್ಳಲ್ಲ. ನಾವ್ಯಾಕೆ ಭಯಪಡೋಣ?. ನಡೆದಿದ್ದರೆ ಬೇಕಾದರೆ ಮಾತನಾಡಲಿ ಎಂದು ಹೇಳಿದರು.

ಇದನ್ನೂ ಓದಿ:ಜಾತಿ ಸಮೀಕ್ಷೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ: ಸಿಎಂ ಸಿದ್ದರಾಮಯ್ಯ - Caste Census

ABOUT THE AUTHOR

...view details