ಬೆಂಗಳೂರು : ಬಿಜೆಪಿಯವರು ಹೇಳಿದ ಕೂಡಲೇ ನಾನ್ಯಾಕೆ ರಾಜೀನಾಮೆ ಕೊಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಕ್ಷಿ, ಪುರಾವೆ ಕೊಡಬೇಕಲ್ವಾ.? ಗುತ್ತಿಗೆದಾರ ಸಚಿನ್ ಆರೋಪ ಮಾಡಿರುವವರು ನನಗೆ ಆಪ್ತರು ಅನ್ನೋದು ಇರಬಹುದು. ಐದು ಜನರ ಹೆಸರಿದೆ, ತನಿಖೆ ಆಗಲಿ. ಬಿಜೆಪಿಯವರು ಹೆಣ ಬಿದ್ದಾಗ ರಾಜಕೀಯ ಮಾಡೋದನ್ನ ಮೊದಲು ಬಿಡಬೇಕು ಎಂದರು.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆ ಎಸ್ ಈಶ್ವರಪ್ಪ ಮಾದರಿಯಲ್ಲಿ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೆ ನೈತಿಕತೆ ಇರೋದಕ್ಕೆ ನಿಮ್ಮ ಮುಂದೆ ಕುಳಿತಿದ್ದೇನೆ. ಪ್ರಕರಣ ತನಿಖೆ ಆಗಲಿ ಅಂತ ಹೇಳಿದ್ದೇನೆ. ಸತ್ಯಶೋಧನೆ ಅಂತ ಎಲ್ಲೆಡೆ ಓಡಾಡ್ತಿದ್ದಾರೆ. ಬಿಜೆಪಿಯವರು ಇಂಡಿಪೆಂಡೆಂಟ್ ತನಿಖೆ ಸಂಸ್ಥೆ ಮಾಡ್ತಿದ್ದಾರಾ.? ಇಲ್ಲಿಯವರೆಗೂ ಪ್ರೂವ್ ಮಾಡಿದ್ದಾರಾ?. ಬಿಜೆಪಿಯವರಿಗೆ ಸಲಹೆ ಕೊಡ್ತೀನಿ. ನಿಮ್ಮ ಕಲ್ಬುರ್ಗಿ ನಾಯಕರ ಬಗ್ಗೆ ಮೊದಲು ತಿಳಿದುಕೊಂಡು ಬನ್ನಿ. ಇಲ್ಲದಿದ್ರೆ ನಿಮ್ಮ ಕುರ್ಚಿಗೆ ಗೌರವ ಇಲ್ಲ. ನೀವು ರಾಜ್ಯಾಧ್ಯಕ್ಷ ಇದ್ದೀರಿ. ಇಲ್ಲದಿದ್ರೆ ಜನ ನಿಮಗೆ ಗೌರವಿಸೋದಿಲ್ಲ. ಒಂದು ರೂಪಾಯಿ ಭ್ರಷ್ಟಾಚಾರ ನನ್ನ ಅವಧಿಯಲ್ಲಿ ಮಾಡಿಲ್ಲ. ಮೂರು ಬಾರಿ ನಾನು ಸಚಿವ ಆಗಿದ್ದೇನೆ ಎಂದರು.