ಬೆಂಗಳೂರು:ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರೇ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ. ಹಲವರ ವಿರುದ್ಧ ದೂರು ಇದ್ದರೂ ಔಟ್ ಆಫ್ ದಿ ವೇ ಹೋಗಿ ಸಿದ್ದರಾಮಯ್ಯ ವಿಚಾರದಲ್ಲಿ ಮಾತ್ರ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರು ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೇಳಿ ಇಂದು ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಮೊದಲು ಬಿಎಸ್ವೈ ರಾಜೀನಾಮೆ ಕೊಡಬೇಕು. ವಿಜಯೇಂದ್ರರದ್ದು ಸುಪ್ರೀಂ ಕೋರ್ಟ್ನಲ್ಲಿ ಡಿಎ (Disproportionate Asset Case) ಇದ್ಯೋ ಇಲ್ವೋ?. ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ಇದ್ಯೋ ಇಲ್ವೋ?. ನಿಜವಾಗಲೂ ನೈತಿಕತೆ ಇದ್ದರೆ ಇವರಿಬ್ಬರೂ ರಾಜೀನಾಮೆ ಕೊಡಬೇಕು. ಇವರಿಬ್ಬರ ರಾಜೀನಾಮೆ ನಂತರ ರಾಜ್ಯಪಾಲರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಸಂವಿಧಾನವನ್ನು ಗಾಳಿಗೆ ತೂರಿ ರಾಜಭವನವನ್ನ ಜಗನ್ನಾಥ ಭವನ ಮಾಡಿಕೊಂಡಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ. ಮೊದಲು ಅವರು ರಾಜೀನಾಮೆ ಕೊಡಲಿ. ವಿಜಯೇಂದ್ರ ಮತ್ತು ಬಿಜೆಪಿಯವರು ಮೊದಲು ಪೋಕ್ಸೋ ಕೇಸ್ ಬಗ್ಗೆ ಮಾತಾಡಲಿ. ಸಾಬೀತಾಗಿದೆ ಅಲ್ವಾ?. ಯಾವ ಎವಿಡೆನ್ಸ್ ಇದೆ. ರಾಜ್ಯಪಾಲರು ಯಾವುದಾದರೂ ಪುರಾವೆ ಕೊಟ್ಟಿದಾರಾ? ಸೆಕ್ಷನ್ 17A ಪ್ರೊಸೀಜರ್ ಫಾಲೋ ಮಾಡಿದಾರಾ?. ಇದೆಲ್ಲಾ ಸಾಕ್ಷಿ ಬಿಟ್ಟು ರಾಜೀನಾಮೆ ಕೇಳಲಿ. ಪೋಕ್ಸೋ ಕೇಸ್ ಸಾಬೀತಾಗಿದೆ. ವಿಜಯೇಂದ್ರ ವಿರುದ್ಧ ಡಿಎ ಕೇಸ್ ಪ್ರೊವ್ ಆಗಿದೆ. ಇವರಿಬ್ಬರೂ ಬೇಲ್ ಮೇಲೆ ಓಡಾಡ್ತಿದಾರೆ .ಇವರಿಗೆ ನೈತಿಕತೆ ಇದ್ಯಾ ರಾಜೀನಾಮೆ ಕೇಳೋಕೆ? ಎಂದು ಪ್ರಶ್ನಿಸಿದರು.