ಕಾರವಾರ(ಉತ್ತರ ಕನ್ನಡ):ಸಚಿವ ಮಂಕಾಳ ವೈದ್ಯ ತಾವೇ ಖುದ್ದಾಗಿ ಬೋಟ್ ಚಲಾಯಿಸಿಕೊಂಡು ಹೋಗಿ ಬಾಗಿನ ಅರ್ಪಿಸಿದ್ದಾರೆ. ತೀವ್ರ ಮತ್ಸ್ಯಕ್ಷಾಮದಿಂದ ಬಳಲುತ್ತಿರುವ ಮೀನುಗಾರಿಕೆ ಚೇತರಿಸಿಕ್ಕೊಳ್ಳುವ ನಿಟ್ಟಿನಲ್ಲಿ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರು ಭಟ್ಕಳದ ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಬಳಿಕ ಸ್ವತಃ ತಾವೇ ಮೀನುಗಾರಿಕಾ ಬೋಟನ್ನು ಸಮುದ್ರದಲ್ಲಿ ಚಲಾಯಿಸಿಕೊಂಡು ಹೋಗಿ ಸಮುದ್ರಕ್ಕೆ ಬಾಗಿನ ಅರ್ಪಿಸಿ ಉತ್ತಮ ಮೀನುಗಾರಿಕೆಗೆ ಪ್ರಾರ್ಥಿಸಿದ್ದಾರೆ.
ಸ್ವತಃ ಬೋಟ್ ಚಲಾಯಿಸಿಕೊಂಡು ಹೋಗಿ ಸಮುದ್ರಕ್ಕೆ ಬಾಗಿನ ಅರ್ಪಿಸಿದ ಸಚಿವ ವೈದ್ಯ - Bagina To Arabian Sea - BAGINA TO ARABIAN SEA
ಮೀನುಗಾರಿಕೆ ಮತ್ತು ಬಂದರು ಒಳನಾಡು ಸಚಿವ ಮಂಕಾಳ ವೈದ್ಯ ಅವರು ಖುದ್ದು ಬೋಟ್ ಚಲಾಯಿಸಿಕೊಂಡು ಹೋಗಿ ಅರಬ್ಬಿ ಸಮುದ್ರಕ್ಕೆ ಬಾಗಿನ ಅರ್ಪಿಸಿದ್ದಾರೆ.

Published : Sep 8, 2024, 9:39 PM IST
|Updated : Sep 8, 2024, 11:02 PM IST
ಆಗಸ್ಟ್‌ನಿಂದ ಮೀನುಗಾರಿಕೆ ಆರಂಭವಾಗಿದ್ದರೂ ಕೂಡ ಇನ್ನು ಕೂಡ ಜಿಲ್ಲೆಯ ಕರಾವಳಿಯಲ್ಲಿ ಸರಿಯಾಗಿ ಮೀನುಗಾರಿಕೆ ಆಗಿಲ್ಲ. ಮೀನುಗಾರಿಕೆಗೆ ತೆರಳಿದ ಬೋಟ್ಗಳು ಮೀನುಗಾರಿಕೆಗೆ ತೆರಳಿದರೂ ಬರಿಗೈಯಲ್ಲಿ ವಾಪಸ್ ಆಗುತ್ತಿವೆ. ಅಲ್ಲದೆ ಪದೇ ಪದೆ ಹವಾಮಾನ ವೈಪರಿತ್ಯದಿಂದಾಗಿ ಅದೇಷ್ಟೋ ಬೋಟ್ಗಳು ಇನ್ನು ಕೂಡ ಮೀನುಗಾರಿಕೆ ನಡೆಸಲಾಗದೆ ದಡದಲ್ಲಿ ಲಂಗರು ಹಾಕಿವೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಇನ್ನು ಮುಂದಾದರೂ ಚೇತರಿಕೆ ಕಾಣುವಂತಾಗಲಿ ಎಂದು ಭಟ್ಕಳದ ಪ್ರಸಿದ್ಧ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಸಚಿವ ಮಂಕಾಳ ವೈದ್ಯ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ:ಗಣೇಶ ಚತುರ್ಥಿ ಖರ್ಚಿನ ವಿಚಾರವಾಗಿ ಸಹೋದರರ ಗಲಾಟೆ, ಓರ್ವನ ಕೊಲೆ - Karwar Murder Case