ಕರ್ನಾಟಕ

karnataka

ETV Bharat / state

ಪಾದಯಾತ್ರೆ ಹೊರಟಿರುವ ಬಿಜೆಪಿಗರಿಗೆ ನಾಚಿಕೆಯಾಗಬೇಕು; ಸಚಿವ ಮಧು ಬಂಗಾರಪ್ಪ - bjp padayatra

ಬಿಜೆಪಿಗರ ಪಾದಯಾತ್ರೆ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿದ್ದಾರೆ. ಬಿಜೆಪಿಯವರು ಪಾದಯಾತ್ರೆ ಮಾಡಿದರೆ, ಅವರದೇ ಹಗರಣಗಳು ಬೇಕಾದಷ್ಟಿವೆ, ಇದರಿಂದ ಅವರ ಹಗರಣಗಳೇ ಹೊರಬರಲಿವೆ ಎಂದು ತಿಳಿಸಿದ್ದಾರೆ.

minister-madhu-bangarappa
ತುಂಗಾ ಅಣೆಕಟ್ಟೆಗೆ ಬಾಗಿನ ಅರ್ಪಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ (ETV Bharat)

By ETV Bharat Karnataka Team

Published : Jul 28, 2024, 7:59 PM IST

ಶಿಕ್ಷಣ ಸಚಿವ ಮಧು ಬಂಗಾರಪ್ಪ (ETV Bharat)

ಶಿವಮೊಗ್ಗ:ಮೈಸೂರಿನಲ್ಲಿ ನಡೆದಿರುವ ಮುಡಾ ಹಗರಣ ಖಂಡಿಸಿ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆಗೆ ನಿರ್ಧರಿಸಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.

ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದ ತುಂಗಾ ಅಣೆಕಟ್ಟೆಗೆ ಭೇಟಿ ನೀಡಿ ಬಾಗಿನ ಅರ್ಪಿಸಿ, ನಂತರ ಶಿವಮೊಗ್ಗದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ನಂತರ ನಡೆದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು.

ಬಿಜೆಪಿಯವರು ಪಾದಯಾತ್ರೆ ಮಾಡಿದರೆ, ಅವರದೇ ಹಗರಣಗಳು ಬೇಕಾದಷ್ಟಿವೆ. ಇದರಿಂದ ಅವರ ಹಗರಣಗಳೇ ಹೊರಬರುತ್ತವೆ. ಸದನದಲ್ಲಿ ಬಿಲ್​ಪಾಸ್ ಮಾಡುವ ವೇಳೆ ಬಿಜೆಪಿ ಶಾಸಕರು ಕೂಗಿಕೊಳ್ಳುತ್ತಿರುತ್ತಾರೆ. ಅವರಿಗೆ ಸದನದಲ್ಲಿ ಹೇಗಿರಬೇಕೆಂಬುದೇ ಗೊತ್ತಿಲ್ಲ ಎಂದು ಟೀಕಿಸಿದರು.

ತುಂಗಾ ಅಣೆಕಟ್ಟೆ ಹೂಳು ತೆಗೆಯುವುದು ಕಷ್ಟಕರ : ತುಂಗಾ ಜಲಾಶಯದಲ್ಲಿ ಹೂಳು ತೆಗೆಯಲು ಅಸಾಧ್ಯವಾಗಿದೆ. ಅಧಿಕಾರಿಗಳ ಬಳಿ ಕೇಳ್ದೆ ಹೂಳು ತೆಗೆಯಬಹುದಾ ಅಂತಾ?. ಅಧಿಕಾರಿಗಳು ಇದು ಅಸಾಧ್ಯ ಅಂತ ತಿಳಿಸಿದ್ದಾರೆ. ಸದ್ಯಕ್ಕೆ ಜಲಾಶಯದ ಸಣ್ಣಪುಟ್ಟ ರಿಪೇರಿ ಕಾರ್ಯ ಇದೆ. ಅದನ್ನು ಮಾಡಬೇಕಿದೆ, ಸುಮ್ಮನೆ ಹೂಳು ತೆಗೆಯೋ ಬಗ್ಗೆ ಮಾತಾನಾಡೋದು ಸರಿಯಲ್ಲ ಎಂದರು‌. ಜಲಾಶಯ ನಿರ್ಮಾಣ ಮಾಡಿದ್ದು ಬಂಗಾರಪ್ಪನವರು, ಅವತ್ತು ತುಂಗಾ ಜಲಾಶಯ ಮಾಡದೇ ಇದ್ದಿದ್ರೆ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಇರುತ್ತಿರಲಿಲ್ಲ ಎಂದರು.‌

ರಾಜ್ಯ ಸರ್ಕಾರ ಶರಾವತಿ ಸಂತ್ರಸ್ತರ ಪರವಾಗಿದೆ : ರಾಜ್ಯ ಸರ್ಕಾರ ಶರಾವತಿ ಸಂತ್ರಸ್ತರ ಪರವಾಗಿದೆ. ಈ ಹಿಂದೆ ಮಾಡಿರುವ ಯೋಜನೆಗಳಲ್ಲಿ ಕೆಲವು ಕಾನೂನು ತೊಡಕುಗಳಿವೆ. ಶರಾವತಿ ಸಂತ್ರಸ್ತರಿಗೆ ಸಹಕಾರ ನೀಡುವ ಕೆಲಸ ರಾಜ್ಯ ಸರ್ಕಾರದಿಂದ ಆಗುತ್ತದೆ. ಸುಪ್ರೀಂ ಕೋರ್ಟ್​ನಲ್ಲಿ ಸಂತ್ರಸ್ತರಿಗೆ ಅನ್ಯಾಯ ಆಗಿರುವ ಬಗ್ಗೆ ಸರ್ಕಾರ ಕೇಸ್ ನಡೆಸಲಿದೆ ಎಂದು ಹೇಳಿದರು.

ಸಚಿವ ಈಶ್ವರ್ ಖಂಡ್ರೆಯವರು ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಹೊಸ ಬಿಲ್ ಪಾಸ್ ಮಾಡಿದ್ದಾರೆ. ವಿರೋಧ ಪಕ್ಷದವರು ನೀರಿಲ್ಲದ ಬಾವಿಗೆ ಬಂದು ಬೀಳೋದು ಸರಿಯಲ್ಲ. ವಿಧಾನಸಭೆಯಲ್ಲಿ ಕಲಾಪ ನಡೆಯಲು ವಿರೋಧ ಪಕ್ಷದವರು ಬಿಟ್ಟಿಲ್ಲ. ಪದೇ ಪದೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಅವರ ನಡೆ ಸರಿಯಲ್ಲ. ಇನ್ಮೇಲೆ ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಹೇಳಿದರು.

ಮಳೆಹಾನಿ ಪ್ರದೇಶಕ್ಕೆ ಭೇಟಿ :ಕಳೆದ ವಾರ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದೆ, ಇಂದು ಕೂಡ ಮಳೆ ಹಾನಿಯ ಕೆಲ ಭಾಗಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದೇನೆ. ವಿರೋಧ ಪಕ್ಷದವರು ಹೇಳುವ ಮಾತಿಗೆ ಬಾಯಿ ಮುಚ್ಚುವ ಕೆಲಸ ಆಗಿದೆ.
ಕಾಂಗ್ರೆಸ್ ಬಂದ್ರೆ ಬರಗಾಲ ಬರುತ್ತದೆ ಎನ್ನುತ್ತಿದ್ದರು. ಆದರೆ ಈಗ ಉತ್ತಮ ಮಳೆಯಾಗಿದೆ. ಈಗ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಕುಡಿಯುವ ನೀರಿನ ಬಳಕೆಗೆ ಶರಾವತಿ ಜಲಾಶಯದ ನೀರು ಬಳಸಬಹುದು. ಸೊರಬ ತಾಲೂಕಿಗೆ ಈ ಸಲ ಹೊಸ ಯೋಜನೆ ತಂದು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.

ಈ ವರ್ಷ ಒಳ್ಳೆಯ ಬೆಳೆ ಆಗುತ್ತದೆ. ಶಾಶ್ವತ ಪರಿಹಾರಕ್ಕೆ ಕೆಲ ಯೋಜನೆ ರೂಪಿಸಬೇಕಿದೆ. ಜನರ ಸುರಕ್ಷತೆಗೆ ಬೇಕಾದ ಕ್ರಮ ಆಗಬೇಕಿದೆ. ಕೆಲವು ಕಡೆ ಮನೆ ಹಾನಿಯಾಗಿದೆ. ಶಿವಮೊಗ್ಗ ತಾಲೂಕಿನಲ್ಲೇ 100 ಕ್ಕೂ ಹೆಚ್ಚು ಮನೆ ಹಾನಿಯಾಗಿವೆ. ಜಿಲ್ಲೆಯ ಎಲ್ಲಾ ಭಾಗದ ಜನರ ಬೆಳೆ ವಿಮೆ ಕಟ್ಟಬೇಕು. ಸರ್ಕಾರದ ಪರಿಹಾರದ ಜೊತೆ ಬೆಳೆ ವಿಮೆ ಪಡೆದುಕೊಳ್ಳಬಹುದು ಎಂದು ಹೇಳಿದರು.

ಇದನ್ನೂ ಓದಿ :ಸಿಎಂ ಪ್ರಸ್ತಾಪಿಸಿರುವ ಬಿಜೆಪಿ ಹಗರಣಗಳನ್ನು ನಿತ್ಯ ಒಂದರಂತೆ ಬಯಲು ಮಾಡುತ್ತೇವೆ : ಡಿಸಿಎಂ ಡಿ ಕೆ ಶಿವಕುಮಾರ್ - DKS ON BJP SCAMS

ABOUT THE AUTHOR

...view details