ಕರ್ನಾಟಕ

karnataka

ಸಿಎಂ ಚೇರ್ ಖಾಲಿ ಇಲ್ಲ, ಕಾಂಗ್ರೆಸ್​ನಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ - Minister Lakshmi Hebbalkar

By ETV Bharat Karnataka Team

Published : Sep 3, 2024, 8:30 PM IST

Updated : Sep 3, 2024, 8:45 PM IST

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಎಂ ಚೇರ್​ ಬಗ್ಗೆ ಮಾತನಾಡಿದ್ದಾರೆ. ಸಿಎಂ ಚೇರ್​ ಖಾಲಿ ಇಲ್ಲ, ಹಿಂದುಳಿದ ವರ್ಗಗಳ ನಾಯಕರಾದ ಸಿಎಂ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

minister-lakshmi-hebbalkar
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ETV Bharat)

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ETV Bharat)

ತುಮಕೂರು : ಸಿಎಂ ಚೇರ್ ಖಾಲಿ ಇಲ್ಲ, ಕಾಂಗ್ರೆಸ್ ಶಿಸ್ತಿನ ಪಕ್ಷ, ಹೈಕಮಾಂಡ್ ತೀರ್ಮಾನವೇ ಅಂತಿಮ. ಹಿಂದುಳಿದ ವರ್ಗಗಳ ನಾಯಕರಾದ ಸಿಎಂ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡ್ತಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಖಾತೆಗಳು ಡಿಲೀಟ್ ಆಗಿವೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಂದೂ ಕೂಡ ಡಿಲೀಟ್ ಆಗಿಲ್ಲ, ಡಿಲೀಟ್ ಆಗಿರೊದು ತೋರಿಸಿ. ಯಾರು ಜಿಎಸ್​ಟಿ, ಇನ್​ಕಮ್ ಟ್ಯಾಕ್ಸ್ ಪೇ ಮಾಡ್ತಾರೆ ಅಂತವರದ್ದು ಆಗಿರಬಹುದು ಎಂದರು.

ಅದು ಕೂಡ ಅವರು ಅಪ್​ಲೋಡ್ ಮಾಡಿದಾಗಲೇ ಡಿಲೀಟ್ ಮಾಡಿದ್ದೇವೆ. ಅದು ರಿಜಿಸ್ಟ್ರೇಷನ್ ಆಗಿ ಹಣ ತೆಗೆದುಕೊಂಡ ಬಳಿಕ ನಾವು ಡಿಲೀಟ್ ಮಾಡಿಲ್ಲ. ಎಲ್ಲ ಜಿಲ್ಲೆಗಳಿಗೂ 11ನೇ ಕಂತು ಹಣ ಬಿಡುಗಡೆ ಆಗಿದೆ. 12-13ನೇ ಕಂತಿನ ಹಣ ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.

ಗೃಹಲಕ್ಷ್ಮಿ ಶುರುವಾಗಿ ಒಂದು ವರ್ಷದ ಸಂಭ್ರಮದಲ್ಲಿದ್ದು, ತುಮಕೂರು ಜಿಲ್ಲೆಯಲ್ಲಿ ಇಲಾಖೆಯ ಪರಿಶೀಲನಾ ಸಭೆ ನಡೆಸಲು ಬಂದಿದ್ದೇನೆ. ಜೊತೆಗೆ ಇಲಾಖೆ ವತಿಯಿಂದ ವಿವಿಧ ಸವಲತ್ತುಗಳನ್ನು ವಿತರಣೆ ಮಾಡಲು ಬಂದಿದ್ದೇನೆ. ಸರ್ಕಾರ ಮಹಿಳಾ ಸಬಲೀಕರಣಕ್ಕೆ ಕೈಗೊಂಡ ಸೌಲಭ್ಯಗಳು ಯಾವ ರೀತಿಯಾಗಿ ಲಾಭ ಆಗ್ತಿದೆ, ಜಿಲ್ಲಾಡಳಿತ ಮತ್ತು ನಮ್ಮ ಇಲಾಖೆ ಸಹಯೋಗದಲ್ಲಿ ಹೇಗೆ ಕೆಲಸ ನಡೀತಾ ಇದೆ ಅನ್ನೋದನ್ನ ನೋಡಲು ಬಂದಿದ್ದೇನೆ ಎಂದರು.

ಸರ್ಕಾರದ ಅನುದಾನದಲ್ಲಿ ಸಂಬಳ ಕೊಡ್ತಿದ್ದೇವೆ:ಕೋಲಾರ, ಕೊಪ್ಪಳ, ಯಾದಗಿರಿ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಆಗದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಸಂಬಳ ಕೊಡಲಾಗುತ್ತೆ. ಈ ರೀತಿಯ ಸಮಸ್ಯೆ ಇದೇ ಮೊದಲ ಬಾರಿ ಆಗಿಲ್ಲ ಎಂದು ತಿಳಿಸಿದರು.

ಕೇಂದ್ರ‌ ಸರ್ಕಾರ ವಿಳಂಬ ಮಾಡಿದಾಗ, ನಾವು ರಾಜ್ಯ ಸರ್ಕಾರ ಮ್ಯಾಚಿಂಗ್ ಮೊತ್ತ ಸೇರಿಸಿ ಸಂಬಳ ನೀಡಬೇಕಾಗುತ್ತದೆ.
ಕೇಂದ್ರದಿಂದ ಹಣ ಇನ್ನೂ ಬಂದಿಲ್ಲ. ನಾವು ಮೂರು ನಾಲ್ಕು ಬಾರಿ ಪತ್ರ ಬರೆದಿದ್ದೇವೆ ಎಂದರು. ನಮ್ಮ ಇಲಾಖೆ ನಿರ್ದೇಶಕರು ಮೊನ್ನೆಯಷ್ಟೇ ದೆಹಲಿಗೆ ಹೋಗಿ ಬಂದಿದ್ದಾರೆ. ಎಲ್ಲಾ ಜಿಲ್ಲೆಗೂ ಸಂಬಳ ನೀಡಲಾಗಿದೆ. ಈ ಮೂರು ಜಿಲ್ಲೆಗೆ ಆದಷ್ಟು ಬೇಗ ಕೊಡ್ತಿವಿ ಎಂದು ಹೇಳಿದರು.

ಗಣಪತಿ ಹಬ್ಬದ ಒಳಗೆ ಸಂಬಳ ನೀಡುವ ಪ್ರಯತ್ನ ಮಾಡ್ತಿವಿ. ಯಾವುದೇ ಸರ್ಕಾರದ ಮೇಲೂ ನಾನು ಆರೋಪ ಮಾಡೋಕೆ ಹೋಗಲ್ಲ. ನಮ್ಮ ಇಲಾಖೆಯಲ್ಲಿ ಬಹಳಷ್ಟು ಯೋಜನೆಗಳಿಗೆ ಎರಡೂ ಸರ್ಕಾರದ ಅನುದಾನ ಬಳಕೆ ಆಗುತ್ತೆ ಎಂದರು.

ಮೊಟ್ಟೆಗೆ, ಹಾಲಿನ ಪೌಡರ್​ಗೆ ಯಾವುದೇ ಸಮಸ್ಯೆ ಇಲ್ಲ: ವಿಳಂಬ ಮೊದಲಿನಿಂದಲೂ ಆಗಿದೆ. ಇನ್ನು ಆಗದ ರೀತಿ ಪ್ರಯತ್ನ ಮಾಡಲಾಗುವುದು. ಮೊಟ್ಟೆಗೆ, ಹಾಲಿನ ಪೌಡರ್​ಗೆ ಯಾವುದೇ ಸಮಸ್ಯೆ ಇಲ್ಲ. ಕ್ವಾಟರ್ಲಿ ಪೇಮಂಟ್ ಅಂತಾ ಇರುತ್ತೆ‌ ಎಂದು ಹೇಳಿದರು. ಪ್ರತಿ ಮೂರು ತಿಂಗಳಿಗೆ ಪೇಮೆಂಟ್ ಆಗುತ್ತೆ. ಬಾಲವಿಕಾಸ ಸಮಿತಿ ಅಂತಾ ಇರುತ್ತೆ, ಅವರು ಮೊಟ್ಟೆ ಖರೀದಿ ಮಾಡ್ತಾರೆ. ಅವರಿಗೆ ಮೊಟ್ಟೆಯ ಹಣವನ್ನ ಹಾಕಿದ್ದೀವಿ ಎಂದು ತಿಳಿಸಿದರು.

ಇದನ್ನೂ ಓದಿ :ನಾನು ಸಿಎಂ ಕುರ್ಚಿ ರೇಸ್​ನಲ್ಲಿ ಓಡುವ ಕುದುರೆಯೂ ಅಲ್ಲ, ಕತ್ತೆಯೂ ಅಲ್ಲ: ಬಿ.ಕೆ.ಹರಿಪ್ರಸಾದ್ - B K Hariprasad reaction on cm post

Last Updated : Sep 3, 2024, 8:45 PM IST

ABOUT THE AUTHOR

...view details