ಕರ್ನಾಟಕ

karnataka

ETV Bharat / state

'ಸಿ.ಟಿ.ರವಿ ಚಾಲೆಂಜ್ ಮಾಡೋದಾದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದಂತೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ' - MINISTER CHALUVARAYASWAMY

ಎಂಎಲ್​ಸಿ ಸಿ.ಟಿ.ರವಿ ಅವರ ಆಕ್ಷೇಪಾರ್ಹ ಪದ ಬಳಕೆಯ ಕುರಿತಾಗಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದರು.

minister-chaluvarayaswamy
ಸಚಿವ ಚಲುವರಾಯಸ್ವಾಮಿ (ETV Bharat)

By ETV Bharat Karnataka Team

Published : 24 hours ago

ಮಂಡ್ಯ:"ಸಿ.ಟಿ.ರವಿ ಚಾಲೆಂಜ್ ಮಾಡೋದಾದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದಂತೆ ಧರ್ಮಸ್ಥಳದಲ್ಲಿ ಬಂದು ಪ್ರಮಾಣ ಮಾಡಲಿ" ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಒಬ್ಬ ಸೀನಿಯರ್ ಲೀಡರ್ ಆಗಿ ಆ ರೀತಿ ಮಾತನಾಡಿರೋದೇ ಮಹಾ ಅಪರಾಧ. ಅಲ್ಲಿಯೇ ಕ್ಷಮೆ ಕೇಳಿದ್ದಿದ್ದರೆ ಅವರ ಗೌರವ ಉಳಿಯುತ್ತಿತ್ತು. ಅವರು ವಾದಿಸಲು ನಿಂತಿದ್ದಾರೆ. ಇಂತಹ ಪದ ಬಳಕೆ ಮಾಡೋದು ಗೌರವವಲ್ಲ" ಎಂದರು.

ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ (ETV Bharat)

ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಕುರಿತು ಮಾತನಾಡಿ, "ಕಾಂಗ್ರೆಸ್ ಅಧಿವೇಶನ ನಡೆದ 100 ವರ್ಷದ ನೆನಪಿಗಾಗಿ ಬೆಳಗಾವಿಯಲ್ಲಿ ಅಧಿವೇಶನ ಮಾಡುತ್ತಿದ್ದೇವೆ. ರಾಷ್ಟ್ರೀಯ ನಾಯಕರು ಪಾಲ್ಗೊಳ್ಳುತ್ತಾರೆ. ರಾಷ್ಟ್ರದ ಎಲ್ಲಾ ರಾಜ್ಯದ ನಾಯಕರುಗಳು ಬರುತ್ತಿದ್ದಾರೆ. ಇಡೀ ಜಿಲ್ಲೆಯ ಕಾಂಗ್ರೆಸ್​ ಮುಖಂಡರು ಬರುತ್ತಿದ್ದಾರೆ. ಕಾರ್ಯಕ್ರಮವನ್ನು ಬಹಳ ಯಶಸ್ವಿಯಾಗಿ ಮಾಡುತ್ತೇವೆ" ಎಂದು ಹೇಳಿದರು.

ಸರ್ಕಾರಿ ದುಡ್ಡಿನಲ್ಲಿ ಅಧಿವೇಶನ ಮಾಡುವ ಅವಶ್ಯಕತೆ ಏನಿತ್ತು ಎಂಬ ಜೋಶಿ ಪ್ರಶ್ನೆಗೆ, "ಸರ್ಕಾರದ ದುಡ್ಡಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಜೋಶಿ ಅವರಿಗೆ ಅಕೌಂಟ್ ಕೊಟ್ಟವರು ಯಾರು?. ನಾವು ಸರ್ಕಾರಿ ದುಡ್ಡಿನಲ್ಲಿ ಮಾಡುತ್ತಿಲ್ಲ, ಪಕ್ಷದ ದುಡ್ಡಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಪಕ್ಷ‌ ಇನ್ನೂ ಸದೃಢವಾಗಿದೆ" ಎಂದರು.

ಅವತ್ತಿನ ಕಾಂಗ್ರೆಸ್​ ಬೇರೆ, ಇವತ್ತಿನ ಕಾಂಗ್ರೆಸ್​ ಬೇರೆ ಎಂಬ ಜೋಶಿ ಮಾತಿಗೆ ಪ್ರತಿಕ್ರಿಯಿಸಿ, "ವಾಜಪೇಯಿ, ಅಡ್ವಾಣಿ, ಮೋದಿ ಬಿಜೆಪಿ ಬೇರೆ ಬೇರೆ ಅಂತಾ ಅವರೇ ಹೇಳುತ್ತಾರೆ" ಎಂದು ಟಾಂಗ್‌ ಕೊಟ್ಟರು.

ಕಾಂಗ್ರೆಸ್​ ಅಧಿವೇಶನದ ಬಳಿಕ ಸರ್ಕಾರ ಹಾಗೂ ಪಕ್ಷದಲ್ಲಿ ಬದಲಾವಣೆ ಆಗುತ್ತಾ? ಎಂಬುದಕ್ಕೆ, "ಅದೆಲ್ಲಾ ಯಾವುದೂ ಈಗ ನಮ್ಮ ಮುಂದಿಲ್ಲ. ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸುಮ್ಮನೆ ಕೆಲವರು ಚರ್ಚೆ ಮಾಡುತ್ತಾರೆ" ಎಂದು ತಿಳಿಸಿದರು.

ಇದನ್ನೂ ಓದಿ:ಕೆಲವು ಬಾರಿ ಸರ್ಕಾರಕ್ಕೆ ಮುಜುಗರ: ಗೃಹ ಸಚಿವ ಪರಮೇಶ್ವರ್ - C T RAVI CASE

ABOUT THE AUTHOR

...view details