ಕರ್ನಾಟಕ

karnataka

ETV Bharat / state

ದಾವಣಗೆರೆ: ರಾಗಿ ಬೇರ್ಪಡಿಸುವ ಯಂತ್ರ ಪಲ್ಟಿ, ಇಬ್ಬರು ಕಾರ್ಮಿಕರು ಸಾವು - MILLET MACHINE OVERTURN

ರಾಗಿ ಯಂತ್ರ ಮತ್ತು ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ರಾಗಿ ಬೇರ್ಪಡಿಸುವ ಯಂತ್ರ ಪಲ್ಟಿ Millet Machine overturn Davanagere
ರಾಗಿ ಬೇರ್ಪಡಿಸುವ ಯಂತ್ರ ಪಲ್ಟಿ (ETV Bharat)

By ETV Bharat Karnataka Team

Published : Nov 26, 2024, 8:38 AM IST

ದಾವಣಗೆರೆ: ರಾಗಿ ಬೇರ್ಪಡಿಸುವ ಯಂತ್ರ ಟ್ರ್ಯಾಕ್ಟರ್‌ಸಮೇತ ಪಲ್ಟಿಯಾಗಿ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ
ಭೈರನಾಯಕನಹಳ್ಳಿ ಗ್ರಾಮದ ಸಮೀಪ ಸೋಮವಾರ ರಾತ್ರಿ ಸಂಭವಿಸಿದೆ. ಬಂಗರಕ್ಕನಗುಡ್ಡ ಗ್ರಾಮದ ಕಾರ್ಮಿಕರಾದ ಮಹೇಶ್ (30) ಮತ್ತು ರಾಧಮ್ಮ (45) ಮೃತಪಟ್ಟಿದ್ದಾರೆ.

ಟ್ರ್ಯಾಕ್ಟರ್​ಗೆ ರಾಗಿ ಬೇರ್ಪಡಿಸುವ ಯಂತ್ರವನ್ನು ಜೋಡಿಸಲಾಗಿತ್ತು. ಟ್ರ್ಯಾಕ್ಟರ್ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಯಂತ್ರ ಪಲ್ಟಿಯಾಗಿದೆ. ಇಬ್ಬರು ಕಾರ್ಮಿಕರು ಕೆಳಗಡೆ ಸಿಲುಕಿಕೊಂಡಿದ್ದರು. ಭೈರನಾಯಕನ ಹಳ್ಳಿ ಗ್ರಾಮದಲ್ಲಿ ರಾಗಿ ಕಟಾವು ಮಾಡಿದ ಹುಲ್ಲನ್ನು ಬೇರ್ಪಡಿಸಿ ವಾಪಸ್ ಬಂಗಾರಕ್ಕನಗುಡ್ಡ ಗ್ರಾಮಕ್ಕೆ ಕಾರ್ಮಿಕರು ಬರುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಇದನ್ನೂ ಓದಿ:'ಕಾಂತಾರ' ನೃತ್ಯ ಕಲಾವಿದರಿದ್ದ ಮಿನಿ ಬಸ್ ಪಲ್ಟಿ; ಶೂಟಿಂಗ್​ ಬಗ್ಗೆ ನಿರ್ಮಾಪಕರು ಹೇಳಿದ್ದೇನು?

ಇದನ್ನೂ ಓದಿ:ಆಟೋಗೆ ಸರ್ಕಾರಿ ಬಸ್​ ಡಿಕ್ಕಿ: 7 ಮಂದಿ ಕೂಲಿ ಕಾರ್ಮಿಕರು ಸಾವು, ₹5 ಲಕ್ಷ ಪರಿಹಾರ ಘೋಷಣೆ

ABOUT THE AUTHOR

...view details