ಕರ್ನಾಟಕ

karnataka

ರೈತರಿಗೆ ಅನುಕೂಲವಾಗುವುದು ವಿಪಕ್ಷಗಳಿಗೆ ಇಷ್ಟವಿಲ್ಲ, ಅನ್ನದಾತರಿಗೆ ಸಹಾಯ ಮಾಡಲು ಹಾಲಿನ ದರ ಏರಿಕೆ: ಸಿಎಂ - CM ON MILK PRICE HIKE

By ETV Bharat Karnataka Team

Published : Jul 2, 2024, 4:33 PM IST

ರೈತರಿಗೆ ಅನುಕೂಲವಾಗುವುದು ವಿಪಕ್ಷಗಳಿಗೆ ಇಷ್ಟವಿಲ್ಲವಂತೆ ಕಾಣುತ್ತಿದೆ. ರೈತರಿಗೆ ಸಹಾಯ ಮಾಡಲು ಹಾಲಿನ ದರ ಏರಿಕೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

PRICE HIKE TO HELP FARMERS  MILK PRICE ISSUE  CRORE MILK COLLECTION  BENGALURU
ರೈತರಿಗೆ ಸಹಾಯ ಮಾಡಲು ಹಾಲಿನ ದರ ಏರಿಕೆ (ETV Bharat)

ಬೆಂಗಳೂರು:ರೈತರಿಗೆ ಅನುಕೂಲವಾಗೋದು ವಿಪಕ್ಷಗಳಿಗೆ ಇಷ್ಟವಿಲ್ಲ. ನಾವು ರೈತರಿಗೆ ಸಹಾಯ ಮಾಡಲು ಹಾಲಿನ ಪ್ರಮಾಣ ಹೆಚ್ಚಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ KMF ನಿಂದ ದಾಖಲೆಯ 1 ಕೋಟಿ ಹಾಲಿನ‌ ಸಂಗ್ರಹವಾದ ಹಿನ್ನೆಲೆ ಸಂಭ್ರಮಾಚರಣೆ ನಡೆಸಿ ಬಳಿಕ ಮಾತನಾಡಿದ ಸಿಎಂ ಅವರು, ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಇದೇ ಸಮಯಲ್ಲಿ 90 ಲಕ್ಷ ಲೀಟರ್ ಇತ್ತು. ಈಗ ಒಂದು ದಿನಕ್ಕೆ 1 ಕೋಟಿ ಲೀಟರ್ ಹಾಲನ್ನ ತಲುಪಿದ್ದೇವೆ. ಬಹುಶಃ ಇದೊಂದು ಮೈಲಿಗಲ್ಲು. ನಾನು ಸ್ವಲ್ಪ ದಿನದ ಮಟ್ಟಿಗೆ ಹಿಂದೆ ಪಶುಸಂಗೋಪನೆ ಸಚಿವನಾಗಿದ್ದೆ. ಆಗ ಮಿಲ್ಕ್ ಯೂನಿಯನ್ ಮತ್ತು ಡೈರಿ ಸಪರೇಟ್ ಆಗಿತ್ತು‌. ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗ್ತಿರೋದ್ರಿಂದ 50 ml ಲೀಟರ್ ಹೆಚ್ಚು ಮಾಡಬೇಕಾಯ್ತು ಎಂದರು.

ರೈತರಿಂದ ಹಾಲು ತೆಗೆದುಕೊಳ್ಳಲ್ಲ ಎಂದು ಹೇಳೋಕೆ ಆಗಲ್ಲ. ಅದಕ್ಕೋಸ್ಕರ ಹಾಲಿನ ಪ್ರಮಾಣವನ್ನು ಹೆಚ್ಚು ಮಾಡಿದ್ದೇವೆ. ಹೆಚ್ಚಾಗಿರೋ 50 ಎಂಎಲ್ ಗೆ 2 ರೂಪಾಯಿ ಹೆಚ್ಚಿಗೆ ಮಾಡಿದ್ದೇವೆ ಅಷ್ಟೇ. ಇದು ಹಾಲಿನ ಬೆಲೆ ಏರಿಕೆ ಅಲ್ಲ. ಆದ್ರೆ ಇದನ್ನ ವಿಪಕ್ಷಗಳು ಆರ್ಥ ಮಾಡಿಕೊಂಡಿಲ್ಲ. ವಿಪಕ್ಷಗಳಿಗೆ ರೈತರಿಗೆ ಅನುಕೂಲವಾಗೋದು ಇಷ್ಟವಿಲ್ಲ. ನಾವು ರೈತರಿಗೆ ಸಹಾಯ ಮಾಡಲು ಮಾಡ್ತಿದ್ದೇವೆ. 2 ರೂಪಾಯಿ ಸಹಾಯಧನ ಇದದ್ದನ್ನು 5 ರೂಪಾಯಿಗೆ ಹೆಚ್ಚಿಗೆ ಮಾಡಿದ್ದು ನಾವು. ಈ ಅಶೋಕ್​ಗೆ ಗೊತ್ತಿಲ್ಲದೆ ಏನು ಏನೋ ಮಾತನಾಡ್ತಾನೆ ಎಂದು ಕಿಡಿಕಾರಿದರು.

ಸಂಭ್ರಮಾಚರಣೆ ವೇಳೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್, ಸಚಿವರಾದ ಕೆ.ಎನ್.ರಾಜಣ್ಣ , ಜಮೀರ್ ಅಹಮದ್ ಖಾನ್, ಚಲುವರಾಯ ಸ್ವಾಮಿ, ಬೈರತಿ ಸುರೇಶ್, ಕೆ.ವೆಂಕಟೇಶ್ ಉಪಸ್ಥಿತರಿದ್ದರು.

ಡಿ.ಕೆ.ಸುರೇಶ್- ಸಚಿವ ರಾಜಣ್ಣ ಮುಖಾಮುಖಿ: ಕೆಎಂಎಫ್ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಕೆ.ಎನ್.ರಾಜಣ್ಣ ಮುಖಾಮುಖಿಯಾದರು. ಆದರೂ ಉಭಯ ನಾಯಕರು ಪರಸ್ಪರ ಮಾತನಾಡಿಲ್ಲ.

ಸಚಿವ ಕೆ.ಎನ್.ರಾಜಣ್ಣ ಡಿಸಿಎಂ ಸ್ಥಾನದ ಬಗ್ಗೆ ಪದೆ ಪದೇ ಹೇಳಿಕೆ ನೀಡುತ್ತಿದ್ದಾರೆ. ಸಿಎಂ, ಡಿಸಿಎಂ ಸ್ಥಾನದ ಕುರಿತು ಡಿ.ಕೆ.ಸುರೇಶ್ ಹಾಗೂ ಸಚಿವ ಕೆ.ಎನ್. ರಾಜಣ್ಣ ನಡುವೆ ಅಸಮಾಧಾನ ಉಂಟಾಗಿದೆ. ಕೆಎಂಎಫ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಗೃಹ ಕಚೇರಿ ಕೃಷ್ಣಾಗೆ ಸಚಿವ ಕೆ.ಎನ್.ರಾಜಣ್ಣ ಬಂದಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಭೇಟಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಆಗಮಿಸಿದ್ದರು.

ಸಿಎಂ ಆಗಮನಕ್ಕೂ ಮುನ್ನ ರಾಜಣ್ಣ ಎದುರೇ ಡಿ.ಕೆ.ಸುರೇಶ್ ನಿಂತಿದ್ದರು. ಇಬ್ಬರೂ ನಾಯಕರು ಅಂತರ ಕಾಯ್ದುಕೊಂಡರು. ಸಿಎಂ ಆಗಮನದ ಬಳಿಕ ಮಾಜಿ ಸಂಸದ ಡಿ.ಕೆ. ಸುರೇಶ್ ಅವರನ್ನು ಭೇಟಿ ಮಾಡಿ ತೆರಳಿದರು.

ಗೋ ಪೂಜೆ ನೆರವೇರಿಸಿದ ಸಿಎಂ:ಕೆಎಂಎಫ್‌ ಮೊಟ್ಟ ಮೊದಲ ಬಾರಿಗೆ ಒಂದು ಕೋಟಿ ಲೀಟರ್‌ ಹಾಲನ್ನು ಸಂಗ್ರಹಿಸಿ ನಾಡಿನ ಹೈನುಗಾರಿಕೆಯಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದೆ. ಈ ಐತಿಹಾಸಿಕ ಸಾಧನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎಂ ಸಿದ್ದರಾಮಯ್ಯ ಗೋಪೂಜೆ ಸಲ್ಲಿಸಿದರು. ಇದೇ ವೇಳೆ ಸಾಧನೆಯ ಹಿಂದಿನ ಶಕ್ತಿಯಾಗಿರುವ ನಾಡಿನ ರೈತಾಪಿ ವರ್ಗಕ್ಕೆ ಧನ್ಯವಾದ ಸಲ್ಲಿಸಿದರು.

ಓದಿ:ತಮ್ಮ‌ ಪತ್ನಿಗೆ ಅಕ್ರಮವಾಗಿ ಮುಡಾ ನಿವೇಶನ ವರ್ಗಾವಣೆ ಆರೋಪ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? - Alleged transfer of Muda site

ABOUT THE AUTHOR

...view details