ETV Bharat / state

ಮುಡಾ ಹಗರಣ ಆರೋಪ: ನಿವೃತ್ತ ಅಧಿಕಾರಿ ಹೇಳಿದ್ದೇನು? - MUDA Scam

ಕಳೆದ 25 ವರ್ಷಗಳಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ(ಮುಡಾ) ನಡೆದಿರುವ ಎಲ್ಲಾ ಅವ್ಯವಹಾರಗಳ ಕುರಿತು ತನಿಖೆ ಮಾಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ದೂರು ನೀಡಿ ಒತ್ತಾಯಿಸಿರುವ ಮುಡಾದ ನಿವೃತ್ತ ಸಹಾಯಕ ನಿರ್ದೇಶಕ ನಟರಾಜ್ ಮಾತನಾಡಿದ್ದಾರೆ.

author img

By ETV Bharat Karnataka Team

Published : Jul 7, 2024, 12:05 PM IST

Updated : Jul 7, 2024, 2:15 PM IST

Mysuru Urban Development Authority  Mysuru  muda scam  50 50 ratio plot sharing
ನಿವೃತ್ತ ಸಹಾಯಕ ನಿರ್ದೇಶಕ ನಟರಾಜ್ (ETV Bharat)

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎಂದು ಆರೋಪಿಸಲಾದ ಹಗರಣಗಳ ಕುರಿತು ಮುಡಾದಲ್ಲಿ 35 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿರುವ ಪಿ.ಎಸ್.ನಟರಾಜ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

50:50 ಅನುಪಾತದ ನಿವೇಶನ ಹಂಚಿಕೆ ಎಂದರೇನು?: ಮುಡಾ ಬಡಾವಣೆಗಳನ್ನು ಅಭಿವೃದ್ಧಿಪಡಿಸಲು ರೈತರಿಂದ ಜಮೀನು ಭೂಸ್ವಾಧೀನ ಪ್ರಕ್ರಿಯೆ ಮಾಡುತ್ತಿತ್ತು. ಈ ಸಂದರ್ಭದಲ್ಲಿ ರೈತರಿಗೆ ಜಮೀನು ಕೊಡಲು ಇಷ್ಟವಿರಲೀ, ಇಲ್ಲದೇ ಇರಲೀ ಭೂ ಸ್ವಾಧೀನ ಪ್ರಕ್ರಿಯೆಯನ್ನು ಬಲವಂತಾಗಿ ನಡೆಸುತ್ತಿತ್ತು. ಈ ಬಗ್ಗೆ ಅಂದಿನ ಕೇಂದ್ರ ಸರ್ಕಾರ 2002ರಲ್ಲಿ ಒಂದು ಕಾನೂನು ಜಾರಿಗೆ ತಂದಿತು. ಈ ಕಾನೂನಿನ ಪ್ರಕಾರ, ಬಡಾವಣೆ ಅಭಿವೃದ್ಧಿಗೆ ರೈತರ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಬಾರದು. ಇದರ ಬದಲು ಸಂಬಂಧಪಟ್ಟ ಪ್ರಾಧಿಕಾರ ಜಮೀನು ಅಭಿವೃದ್ಧಿಪಡಿಸಿದ ಬಳಿಕ ಈ ಅಭಿವೃದ್ಧಿ ಮಾಡಿದ ಜಮೀನಿನಲ್ಲಿ 60:40ರಷ್ಟು ಅನುಪಾತದ ಭೂಮಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿತ್ತು. ಆದರೆ, 2015ರಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರ 50:50 ಅನುಪಾತವನ್ನು ಜಾರಿಗೆ ತಂದಿತು. ಅದರಂತೆ ವಶಪಡಿಸಿಕೊಂಡ ಭೂಮಿಯನ್ನು ಮುಡಾ ಅಭಿವೃದ್ಧಿಪಡಿಸಿ ಅದರಲ್ಲಿ 50 ಮುಡಾ, ಉಳಿದ 50 ಅನ್ನು ರೈತರಿಗೆ ನೀಡಬೇಕಿರುತ್ತದೆ. ರೈತರು ಅಭಿವೃದ್ಧಿಪಡಿಸಿದ ಭೂಮಿ ಬೇಡವೆಂದರೆ ಅದಕ್ಕೆ ಬದಲಾಗಿ ಹಣ ಪಡೆಯಬಹುದು. ಇದೇ 50:50 ಅನುಪಾತದ ನಿಯಮ ಎಂದು ಪಿ.ಎಸ್.ನಟರಾಜ್ ಅವರು ಹೇಳಿದರು.

ಬದಲಿ ನಿವೇಶನ ಅಂದರೇನು?: 1991ರಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಒಂದು ನಿಯಮ ಜಾರಿಗೆ ತಂದರು. ಇದರನ್ವಯ ರೈತರು ಜಮೀನು ಕಳೆದುಕೊಂಡಾಗ ಅವರಿಗೆ ಒಂದು ಮನೆ ಕಟ್ಟಿಕೊಡಲು ಬದಲಿ ನಿವೇಶನ ಕೊಡಬೇಕು. 40:60ರ ಅನುಪಾತದಲ್ಲಿ ಸೈಟ್ ನೀಡಿ ಮನೆ ಕಟ್ಟಿಕೊಡಲು ಸಹಾಯ ಮಾಡಲು ಈ ನಿರ್ಧಾರ ಮಾಡಿದ್ದು, ಉಳಿದ ಭೂಮಿಯ ಸ್ವಾಧೀನಕ್ಕೆ ಹಣ ತೆಗೆದುಕೊಳ್ಳುವುದು ರೈತನಿಗಿರುವ ಹಕ್ಕು. ಇದು ಮೂಲ ಜಮೀನಿನ ಮಾಲೀಕನಿಗೆ ಮಾತ್ರ ಅನ್ವಯ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿಯೂ ತಿಳಿಸಿದೆ. ಅದರಂತೆ ಬದಲಿ ನಿವೇಶನ ಅಂದರೆ, ತಾವು ನೀಡುವ ಭೂಮಿಗೆ ಪ್ರಾಧಿಕಾರದಿಂದ ಹಣ ಪಡೆದು ಬಳಿಕ ಮನೆ ಕಟ್ಟಿಕೊಳ್ಳಲು ಬೇರೆ ಕಡೆ ನಿವೇಶನ ಪಡೆಯುವ ಪ್ರಕ್ರಿಯೆ ನಡೆಸಲಾಗಿತ್ತು. ಬದಲಿ ನಿವೇಶನದ ಹೆಸರಿನಲ್ಲಿ ಮುಡಾದಲ್ಲಿ ದೊಡ್ಡ ಹಗರಣವೇ ನಡೆದಿದೆ. ಇದಕ್ಕೆ ಬೇಕಾದ ಎಲ್ಲಾ ದಾಖಲಾತಿಗಳು ನನ್ನ ಬಳಿ ಇವೆ ಎಂದು ಪಿ.ಎಸ್.ನಟರಾಜ್ ತಿಳಿಸಿದರು.

ತನಿಖೆಯನ್ನು ಸಿಬಿಐಗೆ ಏಕೆ ವಹಿಸಬೇಕು?: ಕಮಿಟಿಗಳನ್ನು ರಚಸಿ ತನಿಖೆ ನಡೆಸಿದರೆ ಏನೂ ಪ್ರಯೋಜನವಿಲ್ಲ. ಈಗಾಗಲೇ ಮೂರು ಕಮಿಟಿಗಳು ತನಿಖೆ ಮಾಡಿ ವರದಿ ಕೊಟ್ಟಿವೆ. ಆದರೆ, ಆ ವರದಿಗಳು ಅನುಷ್ಠಾನಕ್ಕೆ ಬಂದಿಲ್ಲ. ನಾನು 2023ರ ಆಗಸ್ಟ್​ನಲ್ಲಿ ಮುಡಾ ಹಗರಣಗಳ ಬಗ್ಗೆ ಸರ್ಕಾರಕ್ಕೆ ದೂರು ಕೊಟ್ಟೆ. ‌ಅದರ ಆಧಾರದ ಮೇಲೆ ನವೆಂಬರ್​ನಲ್ಲಿ ವರದಿ ಕೊಟ್ಟಿದ್ದಾರೆ. ಆದರೆ, ಆ ವರದಿಯ ಆಧಾರದ ಮೇಲೆ ಯಾವುದೇ ಕ್ರಮ ಆಗಿಲ್ಲ. ಆ ಕ್ರಮ ಆಗಿದ್ದರೆ ಕಳೆದ ಹತ್ತು ತಿಂಗಳಲ್ಲಿ ಮುಡಾಕ್ಕೆ ಕೋಟ್ಯಂತರ ಬೆಲೆ ಬಾಳುವ 3,000 ಸೈಟ್ ಉಳಿಯುತ್ತಿದ್ದವು. ಮುಡಾ ಹಗರಣದಲ್ಲಿ ಮುಂದೆ ಮತ್ತು ಹಿಂದೆ ದೊಡ್ಡ ದೊಡ್ಡ ಕೈಗಳಿವೆ. ಆದ್ದರಿಂದ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪಿ.ಎಸ್.ನಟರಾಜ್ ಆಗ್ರಹಿಸಿದರು.

ಇದನ್ನೂ ಓದಿ: ಮುಡಾ ಹಗರಣ ಸಿಬಿಐಗೆ ವಹಿಸಿದರೆ ಮಾತ್ರ ನಿಷ್ಪಕ್ಷಪಾತ ತನಿಖೆ: ಪ್ರಲ್ಹಾದ್​ ಜೋಶಿ - Pralhad Joshi

Last Updated : Jul 7, 2024, 2:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.