ETV Bharat / state

ಕೆಆರ್​ಎಸ್​ ಅಚ್ಚುಕಟ್ಟಿನ ವಿ.ಸಿ. ನಾಲೆಗೆ ಜು.8 ರಿಂದ ನೀರು ಬಿಡಲು ತೀರ್ಮಾನ: ಸಚಿವ ಚಲುವರಾಯಸ್ವಾಮಿ - CHALUVARAYA SWAMY

ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ನಡೆದಿದ್ದು, ಕೆಆರ್​ಎಸ್​​ ಅಚ್ಚುಕಟ್ಟಿನ ವಿ.ಸಿ.ನಾಲೆಗೆ ನೀರು ಬಿಡಲು ತೀರ್ಮಾನಿಸಲಾಗಿದೆ.‌

author img

By ETV Bharat Karnataka Team

Published : Jul 7, 2024, 11:22 AM IST

ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ
ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ (ETV Bharat)

ಬೆಂಗಳೂರು: ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೆಆರ್​ಎಸ್​​ ಅಚ್ಚುಕಟ್ಟಿನ ವಿ.ಸಿ.ನಾಲೆಗೆ ನೀರು ಬಿಡಲು ತೀರ್ಮಾನಿಸಲಾಗಿದೆ.‌

ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, "15 ದಿ‌ನಗಳಿಂದ ಕೆಆರ್​ಎಸ್​ ಅಚ್ಚುಕಟ್ಟಿನಲ್ಲಿ ವಿ.ಸಿ. ನಾಲೆಗೆ ನೀರು ಬಿಡಬೇಕು ಎಂದು ಒತ್ತಾಯ ಇತ್ತು. ಇದೀಗ ಕೆಆರ್​​ಎಸ್​ನಲ್ಲಿ ನೀರಿನ ಮಟ್ಟ 100 ಅಡಿ ದಾಟಿದೆ. ಸಾಮಾನ್ಯವಾಗಿ ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ನೀರು ಬಿಡುವುದು ಆರಂಭವಾಗುತ್ತದೆ. ಈ ಬಾರಿ ಮಾರ್ಚ್-ಏಪ್ರಿಲ್​ನಲ್ಲಿ ನೀರು ಬಿಡಲು ಸಾಧ್ಯವಾಗದ ಕಾರಣ ಕೆರೆಗಳು ಬತ್ತಿ ಹೋಗಿದ್ದವು. ಹೀಗಾಗಿ ಕೆರೆಗಳಿಗೆ ನೀರು ತುಂಬಿಸಲು ಶಾಸಕರು ಒತ್ತಡ ತಂದಿದ್ದರು".

"ಜು. 8ರ ಸಾಯಂಕಾಲದಿಂದ 15 ದಿನ ನೀರು ಬಿಡುಗಡೆ ಮಾಡಲು ತೀರ್ಮಾನ ಮಾಡಲಾಗಿದೆ. ಟೇಲ್ ಎಂಡ್​ಗೆ ಹೋಗಬೇಕು. ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರ ಒತ್ತಡದ ಹಿನ್ನೆಲೆ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. 10 ದಿನ ಆದ ಮೇಲೆ ಮತ್ತೆ ನೀರು ಬಿಡುಗಡೆ ಸಂಬಂಧ ತೀರ್ಮಾನ ಮಾಡುತ್ತೇವೆ. ಈ ನೀರನ್ನು ಕುಡಿಯುವ ನೀರು, ಕೆರೆ ಕಟ್ಟೆ ತುಂಬಿಸಲು ಮಾತ್ರ ಬಳಕೆ ಮಾಡಲಾಗುತ್ತದೆ. ಯಾವುದೇ ಕೃಷಿ ಚಟುವಟಿಕೆಗಳಿಗೆ ಬಳಸುವಂತಿಲ್ಲ. ಜುಲೈ ವೇಳೆಗೆ ನೀರು ಬಿಡಲು ಮತ್ತೆ ನಿರ್ಧಾರ ಮಾಡುತ್ತೇವೆ" ಎಂದು ಸಚಿವರು ತಿಳಿಸಿದ್ದಾರೆ.

"ನಾಲೆಯಲ್ಲಿ ಸುಮಾರು 30 ಕಿ.ಮೀ ಕಾಮಗಾರಿ ಪೂರ್ಣ ಆಗಿದೆ. 16 ಕಿ.ಮೀ. ಕಾಮಗಾರಿ ಬಾಕಿ ಇದೆ. ನಾಲೆಗಳಿಗೆ ನೀರು ಹರಿಸಲು ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗಿದೆ. ಅದನ್ನು ನೋಡಿಕೊಂಡು ನೀರು ಬಿಡಲು ನಿರ್ಧರಿಸಲಾಗಿದೆ. ಸುಮಾರು 3000 ಕ್ಯೂಸೆಕ್ಸ್​​ ನೀರು ಬಿಡುಗಡೆಗೆ ತೀರ್ಮಾನಿಸಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಹೆಚ್​ಡಿಕೆ ರಾಜಕಾರಣ ಮಾಡುವುದು ಬಿಡಲಿ ಎಂದ ಸಚಿವರು: ಮಂಡ್ಯದಲ್ಲಿ ಹೆಚ್​ಡಿಕೆ ಜನತಾ ದರ್ಶನ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ 'ರಾಷ್ಟ್ರದಲ್ಲಿ ಕೈತುಂಬಾ ಕೆಲಸ ಇವೆ, ಅದನ್ನು ಮಾಡಲಿ ರಾಜಕಾರಣ ಮಾಡೋದು ಬಿಡಲಿ' ಎಂದು ತಿರುಗೇಟು ನೀಡಿದ್ದಾರೆ. ನನ್ನ ಜೊತೆಯೂ ಅಧಿಕಾರಿಗಳು ನಿಂತುಕೊಳ್ಳಬೇಕು ಎಂದು ಹೆಚ್​​ಡಿಕೆ ಅಂದುಕೊಳ್ಳುವುದು ಸರಿಯಲ್ಲ. ರಾಜಕಾರಣ ಮಾಡುವುದು ನನಗೂ ಗೊತ್ತಿದೆ. ರಾಷ್ಟ್ರ ತುಂಬಾ ಕೆಲಸ ಕೊಟ್ಟಿದ್ದರೂ ರಾಜ್ಯದಲ್ಲಿ ಯಾಕೆ ರಾಜಕಾರಣ ಮಾಡುತ್ತಿದ್ದಾರೆ ಅಂತಾ ಗೊತ್ತಿಲ್ಲ. ಮೈಸೂರು ಹಾಗೂ ರಾಮನಗರ ಜಿಲ್ಲೆಯಿಂದಲೂ ಜನ ಬಂದಿದ್ದರು. ತಪ್ಪೇನಿಲ್ಲ ನಾಯಕರು ಜನತಾದರ್ಶನ ಮಾಡುವಾಗ ಜನ ಬರುತ್ತಾರೆ. ಕೇಂದ್ರದಿಂದ ಬರಬೇಕಾದ ಯೋಜನೆಗಳನ್ನು ಕೊಡಿಸಲಿ. ಶಾಸಕರು ಹಾಗೂ ಸಿಎಂ ಮಾಡುವ ಕೆಲಸವನ್ನು ಹೆಚ್​ಡಿಕೆ ಯಾಕೆ ಮಾಡುತ್ತಾರೆ?. ಲೋಕಸಭೆ ಸದಸ್ಯರಿಗೆ ಆಸಕ್ತಿ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸಭೆ ನಡೆಸಿ ಮಾಹಿತಿ ಪಡೆಯಲಿ" ಎಂದು ತಿಳಿಸಿದ್ದಾರೆ.

'ರಾಜಕಾರಣ ಇಷ್ಟೊಂದು ಮಾಡೋದು ಬೇಡ. ಅವರ ಜೊತೆ ಕೂಡ ಕೆಲಸ ಮಾಡಿದ್ದೇನೆ. ನನಗೆ ಟಾಂಗ್ ಕೊಡಲು ಏನು ಬೇಕಾದರೂ ಮಾಡಲಿ.‌ ನಮ್ಮಪ್ಪ ಮಾಜಿ ಪ್ರಧಾನಿ ಅಲ್ಲವಲ್ಲ. ಅವರು ಕೇವಲ ಮಂಡ್ಯಗೆ ಮಾತ್ರ ಸೀಮಿತವಲ್ಲ. ಇಡೀ ದೇಶಕ್ಕೆ ಅವರು ಸಚಿವರಾಗಿದ್ದಾರೆ. ಕಾವೇರಿ ವಿಚಾರದಲ್ಲಿ ಕರೆದರೆ, ನಮ್ಮಿಂದ‌ ಮಾಹಿತಿ ಬೇಕು ಅಂದರೆ ನಾವು ಕೊಡುತ್ತೇವೆ. ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಿ. ಕಾವೇರಿ ವಿಚಾರದಲ್ಲಿ ಯಾವಾಗ ಕರೀತಾರೆ ಅವಾಗ ನಾನು ಹೋಗುತ್ತೇನೆ".

'ಶಾಸಕರು, ಸಚಿವರು ಸರಿಯಾಗಿ ಕೆಲಸ ಮಾಡಿದರೆ ನಾನ್ಯಾಕೆ ಜನಸಂಪರ್ಕ ಸಭೆ ಮಾಡಬೇಕಿತ್ತು ಎಂಬ ಕುಮಾರಸ್ವಾಮಿ ಹೇಳಿಕೆಗೆ , "ನಾವು ಅವರ ಸರ್ಟಿಫಿಕೇಟ್ ಕೇಳಲೇ ಇಲ್ವಲ್ಲಾ. ಕುಮಾರಸ್ವಾಮಿ ಅವರ ಸರ್ಟಿಫಿಕೇಟ್ ಶಾಸಕರು, ಸರ್ಕಾರ ಕೇಳಿಲ್ಲ. ಕೇಂದ್ರದಲ್ಲಿ ಕಾನೂನು ಬದಲಾವಣೆ ಮಾಡಿ, ರಾಜ್ಯ ಸರ್ಕಾರಗಳು ಕೇಂದ್ರದ ಮಂತ್ರಿಗಳಿಂದ ಸರ್ಟಿಫಿಕೇಟ್ ತಗೊಬೇಕು ಅಂದಾಗ ನೋಡೋಣ. ನಮಗೆ ಜನರಿಂದ ಸರ್ಟಿಫಿಕೇಟ್ ಸಿಕ್ಕಿದೆ. ಅವರ ಜವಾಬ್ದಾರಿ ಏನು ಅನ್ನೋದು ಅವರಿಗೆ ಗೊತ್ತಿಲ್ಲ ಅನ್ಸುತ್ತೆ. ಸೀನಿಯರ್ ಅಫೀಸರ್ ಹತ್ತರ, ತಿಳಿದವರಿಂದ ಅವರ ವ್ಯಾಪ್ತಿ ಏನು?. ಶಾಸಕರ ವ್ಯಾಪ್ತಿ, ಮಂತ್ರಿಗಳ ವ್ಯಾಪ್ತಿ ಏನು ಅಂತ ಅಧ್ಯಯನ ಮಾಡೋಕೆ ಹೇಳಿ" ಎಂದು ಟಾಂಗ್ ನೀಡಿದರು.

ಇವತ್ತು ನಮ್ಮ ಶಾಸಕ ರವಿಕುಮಾರ್ ಕೆರೆಗೋಡಲ್ಲಿ ಜನಸಂಪರ್ಕ ಸಭೆ ಮಾಡಿದ್ದಾರೆ. 3,200 ಅರ್ಜಿಗಳು ಬಂದಿವೆ. ಕುಮಾರಸ್ವಾಮಿ ಅವರ ಸಭೆಗೆ ಮೈಸೂರು, ರಾಮನಗರದಿಂದಲೂ ಜನ ಬಂದಿದ್ದಾರೆ. ಒಂದು ವರ್ಷದಲ್ಲಿ ನಮಗೆ 11 ಸಾವಿರ ಅರ್ಜಿಗಳು ಬಂದಿದ್ದು, 10 ಸಾವಿರ ಅರ್ಜಿ ಕ್ಲಿಯರ್ ಮಾಡಿದ್ದೇವೆ. ನಮ್ಮ ಕೆಲಸ ಏನು ಆಗಿದೆ ಅಂತ ಅವರೇ ಅರ್ಥ ಮಾಡ್ಕೊಬೇಕು. ನಾವು ಜಿಲ್ಲೆಯ ಅಭಿವೃದ್ಧಿ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದರು.

ಸಿಎಂ ‌ಬದಲಾವಣೆ ವಿಚಾರ: ಈ ಬಗ್ಗೆ "ನಮಗೆ ಅದ್ಯಾವುದು ವಿಷ್ಯ ಗೊತ್ತಿಲ್ಲ. ಸಿಎಂ ಹಾಗೂ ಡಿಸಿಎಂ ಅನ್ಯೋನ್ಯವಾಗಿದ್ದಾರೆ. ಏನೇ ಇದ್ದರೂ ಸುರ್ಜೇವಾಲಾ ಕುಳಿತು ಬಗೆಹರಿಸುತ್ತಾರೆ. ಈಗ ನಮ್ಮಲ್ಲಿ ಯಾವುದೇ ಸಮಸ್ಯೆ ಕಾಣುತ್ತಿಲ್ಲ' ಎಂದರು.

ಇದನ್ನೂ ಓದಿ: ಝೀರೋ ಟ್ರಾಫಿಕ್ ಎಂದೂ ಬಯಸಿದವನಲ್ಲ, ಟ್ರಾಫಿಕ್ ಪೊಲೀಸರು ದಾರಿ ಮಾಡಿಕೊಡುತ್ತಾರೆ ಅಷ್ಟೇ: ಸಿಎಂ ಸಿದ್ದರಾಮಯ್ಯ - CM Siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.