ಮಂಗಳೂರು(ದಕ್ಷಿಣ ಕನ್ನಡ):ನಗರದಲ್ಲಿ ನಿಷೇಧಿತ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಪೆರ್ಮನ್ನೂರ ಗ್ರಾಮದ ದಾರಂದ ಬಾಗಿಲಿನ ನಿತ್ಯಾಧರ ಚರ್ಚ್ ಬಳಿಯ ನಿವಾಸಿ ದಾವೂದು ಪರ್ವೇಜ್(37) ಬಂಧಿತ ಆರೋಪಿ.
ಈತ ಮೇ 14ರಂದು ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ವಾಮಂಜೂರು ಮೈದಾನದಲ್ಲಿರುವ ಶೇಂದಿ ಅಂಗಡಿ ಬಳಿ ಆರೋಪಿ ಎಂಡಿಎಂಎ ಮಾರಾಟ ಮಾಡುತ್ತಿದ್ದ. ಈ ವೇಳೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‍ಐ ಅರುಣ್ ಕುಮಾರ್ ಡಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರು: ಎಂಡಿಎಂಎ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - MDMA drug - MDMA DRUG
ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 10 ಗ್ರಾಂ ತೂಕದ ಎಂಡಿಎಂಎ ಮಾದಕದ್ರವ್ಯ ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿ (ETV Bharat)
Published : May 15, 2024, 8:34 PM IST
ಬಂಧಿತನಿಂದ 10 ಗ್ರಾಂ ತೂಕದ ಎಂಡಿಎಂಎ (ಅಂದಾಜು ಮೌಲ್ಯ 15,000) ಹಾಗೂ 810 ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.