ಕರ್ನಾಟಕ

karnataka

ETV Bharat / state

ಡೇಟಿಂಗ್ ಆ್ಯಪ್​ ಗೆಳತಿಯ ದೋಖಾ: ಮಂಗಳೂರಿನ ವ್ಯಕ್ತಿಗೆ ನಕಲಿ ಟ್ರೇಡಿಂಗ್​​ನಲ್ಲಿ 1.12 ಕೋಟಿ ರೂ. ವಂಚನೆ

ನಕಲಿ ಟ್ರೇಡಿಂಗ್​ ಆ್ಯಪ್​ನಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ ವಂಚಕರು ಬರೋಬ್ಬರಿ 1.12 ಕೋಟಿ ರೂ. ಹಣ ನಾಮ ಹಾಕಿರುವ ಘಟನೆ ನಡೆದಿದೆ.

By ETV Bharat Karnataka Team

Published : 4 hours ago

ಮಂಗಳೂರು ಸೈಬರ್ ಠಾಣೆ
ಮಂಗಳೂರು ಸೈಬರ್ ಠಾಣೆ (ETV Bharat)

ಮಂಗಳೂರು:ಡೇಟಿಂಗ್ ಆ್ಯಪ್​ನಲ್ಲಿ ಸ್ನೇಹಿತೆಯಾದ ಮಹಿಳೆಯ ಮಾತು ನಂಬಿ ಆನ್​​ಲೈನ್ ಟ್ರೇಡಿಂಗ್​​ನಲ್ಲಿ ಹಣ ಹೂಡಿದ ಮಂಗಳೂರಿನ ವ್ಯಕ್ತಿಯೊಬ್ಬರು 1.12 ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಇಲ್ಲಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಂತ ಹಂತವಾಗಿ ಮೋಸ ಮಾಡುವ ವಂಚಕರು? "2024 ಜೂನ್ 28 ರಂದು ಡೇಟಿಂಗ್ ಆ್ಯಪ್​ವೊಂದರಲ್ಲಿ ಲೀನಾ ಜೋಸ್ ಎಂಬ ಹೆಸರಿನ ಯುವತಿಯು ಫ್ರೆಂಡ್ ರಿಕ್ವೆಸ್ಟ್ ಕಳುಗಿಸಿದ್ದರು. ರಿಕ್ವೆಸ್ಟ್ ಸ್ವೀಕರಿಸಿದ ಬಳಿಕ ಮಾತುಕತೆ ಆರಂಭವಾಗಿತ್ತು. ಆ ನಂತರ ಟೆಲಿಗ್ರಾಮ್ ಮೂಲಕ ಚಾಟ್ ಮಾಡುವಂತೆ ತಿಳಿಸಿದ್ದಳು. ಬಳಿಕ ಅಲ್ಲಿ ಚಾಟಿಂಗ್ ಮಾಡುತ್ತಿದ್ದೇವೆ. ಈ ವೇಳೆ ಯುವತಿಯು ಟ್ರೇಡಿಂಗ್​ ಬಗ್ಗೆ ಮಾಹಿತಿ ನೀಡಿದ್ದಳು. ಜೊತೆಗೆ admiral market forex trading ನಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಳು. ಇದನ್ನು ನಂಬಿ admiral market forex trading ನ ನಕಲಿ Wavegptexa ಎಂಬ ಆ್ಯಪ್ ಡೌನ್ ಲೋಡ್ ಮಾಡಿ ಅದರಲ್ಲಿ ಲಾಗಿನ್ ಆಗಿದ್ದೆ.

ಜುಲೈ 3 ರಂದು 50,000 ರೂ. ಗಳನ್ನು NEFT ಮೂಲಕ ವರ್ಗಾಹಿಸಿದ್ದಾರೆ. ನಂತರ TRADING ನಲ್ಲಿ ನೀವು ಹೆಚ್ಚು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುವುದಾಗಿ ತಿಳಿಸಿದ್ದರು. ಅದರಂತೆ ಜುಲೈ 3 ರಿಂದ ಜುಲೈ 23 ವರೆಗೆ ರೂ. 10,00,000 ರೂ.ಗಳನ್ನು ಆರೋಪಿಗಳು ಕೊಟ್ಟ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದೆ. ನಂತರ Wavegptexa ಆ್ಯಪ್​​ನಲ್ಲಿ 80,00,000 ರೂ. ಲಾಭಾಂಶ ತೋರಿಸುತ್ತಿತ್ತು. ಅದನ್ನು ತೆಗೆಯಲು ಕಸ್ಟಮರ್ ಕೇರ್ ಬಳಿ ಕೇಳಿದಾಗ ಶೇ.30 ರಷ್ಟು ಟ್ಯಾಕ್ಸ್ ಅಮೌಂಟ್ ಕಟ್ಟುವಂತೆ ಸೂಚಿಸಿದ್ದರು. ಅದರಂತೆ 19,26,560 ರೂ.ಗಳನ್ನು ಆರೋಪಿಗಳ ವಿವಿಧ ಖಾತೆಗಳಿಗೆ ವರ್ಗಾಯಿಸಿರುವೆ. ನಂತರ ಡಾಲರ್​​ನಿಂದ ಇಂಡಿಯನ್ ರೂಪಿಗೆ ವರ್ಗಾಯಿಸಲು ಬ್ಯಾಂಕ್ ಟ್ರಾನ್ಜಾಕ್ಷನ್ ಚಾರ್ಜ್ ಶೇ.10 ಕಟ್ಟುವಂತೆ ಹೇಳಿದ್ದರು. ಅದರಂತೆ 7,36,880 ರೂ. ವರ್ಗಾಯಿಸಿದ್ದೆ. ನಂತರ 50,00,000 ರೂ. ವರ್ಗಾವಣೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ, ಆರೋಪಿತರು ನೀವು ಮೊದಲ ಬಾರಿಗೆ ದೊಡ್ಡ ಮೊತ್ತದ ಹಣ ವಿಥ್ ಡ್ರಾ ಮಾಡುತ್ತಿದ್ದು ಅದನ್ನು ನಮ್ಮ ರಿಸ್ಕ್ ಕಂಟ್ರೋಲ್ ಡಿಪಾರ್ಟ್ಮೆಂಟ್​​ನವರು ಹೋಲ್ಡ್ ಮಾಡಿದ್ದಾರೆ. ಅದನ್ನು ನೀವು ವಿಥ್ ಡ್ರಾ ಮಾಡಲು ಶೇ.50ರಷ್ಟು ಠೇವಣಿ ಮಾಡಲು ಹೇಳಿದಾಗ ನನ್ನ ಖಾತೆಯಿಂದ ಮತ್ತೆ 26,84,800 ರೂ. ಕಳುಹಿಸಿದ್ದೆ. ನಂತರ ಹಣ ವಿಥ್ ಡ್ರಾ ಮಾಡಲು ಪ್ರಯತ್ನಿಸಿದಾಗ ಆರೋಪಿತರು ನೀವು VIP Client ಆಗಬೇಕು ಮತ್ತು ನಿಮ್ಮ ಖಾತೆಯಲ್ಲಿ ಕ್ರೆಡಿಟ್ ಸ್ಕೋರ್ ಕಡಿಮೆ ಇದೆ. ನಿಮ್ಮ ಕ್ರೆಡಿಟ್ ಸ್ಕೋರ್ ಶೇ.100 ಆಗಲು ನೀವು ಮತ್ತೆ ಹಣ ಠೇವಣಿ ಮಾಡಬೇಕೆ ಎಂದಿದ್ದರು. ನಂತರದ ದಿನಗಳಲ್ಲಿ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದಾಗ ಅನುಮಾನ ಬಂದು ನನ್ನ ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವ ವಿಚಾರ ಗೊತ್ತಾಗಿದೆ" ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

"ಈ ರೀತಿಯಾಗಿ ಅಪರಿಚಿತ ವ್ಯಕ್ತಿಗಳು ಆನ್​ಲೈನ್ admiral market forex ಟ್ರೇಡಿಂಗ್ ಎಂಬ ನಕಲಿ ಕಂಪನಿಯ ಹೆಸರಿನಲ್ಲಿ ಆನ್ ಲೈನ್ ಮುಖಾಂತರ ಒಟ್ಟು 1,12,48,240 ರೂ. (1 ಕೋಟಿ 12 ಲಕ್ಷ 48 ಸಾವಿರ ರೂ.) ತೆಗೆದುಕೊಂಡು ಮೋಸ ಮಾಡಿದ್ದಾರೆ" ಎಂದು ವಂಚನೆಗೊಳಗಾದ ವ್ಯಕ್ತಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ದೀಪಾವಳಿಯಲ್ಲಿ Phonepay ಪ್ರಮುಖ ನಿರ್ಧಾರ: ಕೇವಲ 9 ರೂಪಾಯಿಗೆ ವಿಮೆ!: ಈ ಪಾಲಿಸಿ ಖರೀದಿಸುವುದು ಹೇಗೆ?

ABOUT THE AUTHOR

...view details