ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಶಿರ್ವದಲ್ಲಿ ನಾಯಿಯ ಕಳೇಬರವನ್ನು ಸ್ಕೂಟರ್ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ ವಿರುದ್ಧ ಶಿರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ: ದ್ವಿಚಕ್ರ ವಾಹನಕ್ಕೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ಪ್ರಕರಣ ದಾಖಲು - man dragged a dog - MAN DRAGGED A DOG
ಉಡುಪಿಯ ಕಾಪು ತಾಲೂಕಿನ ಶಿರ್ವದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನಕ್ಕೆ ನಾಯಿಯ ಕಳೇಬರ ಕಟ್ಟಿಕೊಂಡು ರಸ್ತೆಯಲ್ಲಿ ಎಳೆದೊಯ್ದಿದ್ದು ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ದ್ವಿಚಕ್ರ ವಾಹನಕ್ಕೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ (ETV Bharat)
Published : Jul 20, 2024, 6:18 PM IST
ಕೊಂಬಗುಡ್ಡೆಯ ನಿವಾಸಿ ಖಾದರ್, ಮೃತಪಟ್ಟ ನಾಯಿಯ ಕೊರಳಿಗೆ ಸರಪಳಿ ಹಾಕಿ, ಸ್ಕೂಟರ್‌ನ ಸೀಟಿಗೆ ಸರಪಳಿ ಕಟ್ಟಿಕೊಂಡು ಕೊಂಬಗುಡ್ಡೆಯಿಂದ ಶಿರ್ವ ಪೇಟೆಯವರೆಗೆ ಎಳೆದೊಯ್ದು ವಿಕೃತಿ ಮೆರೆದಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಕ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೀಗ ಶಿರ್ವ ಪೊಲೀಸರು ಆರೋಪಿ ಖಾದರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಪೊಲೀಸರ ಕುರಿತು ಅವಹೇಳನಕಾರಿ ಫೋಟೋ ಪ್ರಕಟಿಸಿದ್ದ ಟ್ಯಾಟೂ ಕಲಾವಿದನ ವಿರುದ್ಧ ಎಫ್ಐಆರ್