ಕರ್ನಾಟಕ

karnataka

ಮಂಗಳೂರು: ಮತದಾನ ಮಾಡುವ ಫೋಟೋ ವೈರಲ್, ಪ್ರಕರಣ ದಾಖಲು - Voting photo viral

ಮತದಾನ ಮಾಡುವ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

By ETV Bharat Karnataka Team

Published : Apr 27, 2024, 11:04 AM IST

Published : Apr 27, 2024, 11:04 AM IST

Mangaluru Voting
ಮಂಗಳೂರಲ್ಲಿ ಮತದಾನ

ಮಂಗಳೂರು: ಮತದಾನ ಗೌಪ್ಯವಾಗಿಡಬೇಕು. ಮತದಾನ ಬಹಿರಂಗಪಡಿಸುವುದು ಕಾನೂನುಬಾಹಿರ. ಆದರೂ ಮತದಾನ ಮಾಡುತ್ತಿರುವ ದೃಶ್ಯವನ್ನು ಮತದಾರರೊಬ್ಬರು ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಶುಕ್ರವಾರ ನಡೆದಿದೆ.

ಶುಕ್ರವಾರ ಬೆಳಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದು ವೈರಲ್ ಆಗಿತ್ತು. ಮತದಾರರೊಬ್ಬರು ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಪುತ್ತೂರು ತಾಲೂಕಿನ ಮತಗಟ್ಟೆಯೊಂದರಲ್ಲಿ ಮತದಾನ ಮಾಡುತ್ತಿರುವ ದೃಶ್ಯ ಇದಾಗಿದೆ.

ಮತದಾನ ಕೇಂದ್ರದೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದಕ್ಕೆ ನಿಷೇಧವಿದ್ದರೂ, ವ್ಯಕ್ತಿಯೊಬ್ಬರು ಮೊಬೈಲ್ ಕೊಂಡೊಯ್ದಿದ್ದಲ್ಲದೇ, ಮತದಾನ ಮಾಡುವ ದೃಶ್ಯವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ:ಫಿಲಿಪ್ಪಿನ್ಸ್​​ನಿಂದ ಚಿತ್ರದುರ್ಗಕ್ಕೆ ಬಂದು ಮೆಡಿಕಲ್ ವಿದ್ಯಾರ್ಥಿನಿ ಮತದಾನ; ವೋಟಿಂಗ್​ಗೆ ಯುಎಸ್​ನಿಂದ ಕೋಲಾರಕ್ಕೆ ಬಂದ ಮಹಿಳೆ - Young woman voting

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಅವರು "ಪುತ್ತೂರು ವಿಧಾನಸಭಾ ಕ್ಷೇತ್ರ-206ರ ಮತಗಟ್ಟೆ ಸಂಖ್ಯೆ 147ರಲ್ಲಿ ಪುತ್ತೂರು ತಾಲೂಕಿನ ನಿವಾಸಿ ರಂಜಿತ್ ಬಂಗೇರಾ ಎಂಬುವರು ಮತದಾನ ಮಾಡುವ ಸಮಯದಲ್ಲಿ ತನ್ನ ಮತದಾನದ ಗೌಪ್ಯ ಮಾಹಿತಿಯನ್ನು ಮೊಬೈಲ್​ನಿಂದ ಫೋಟೋ ತೆಗೆದು, ಆ ಪೋಟೋವನ್ನು ವಾಟ್ಸ್​ಆ್ಯಪ್​​ ಗ್ರೂಪಿನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಪ್ಲಾಯಿಂಗ್ ಸ್ಕ್ವಾಡ್ -2 ರ ಉಸ್ತುವಾರಿ ಅಧಿಕಾರಿ ನೀಡಿದ ದೂರಿನ ಮೇರೆಗೆ, ಕಲಂ:171 (ಎಫ್), 188 ಭಾರತೀಯ ದಂಡ ಸಂಹಿತೆ ಮತ್ತು ಕಲಂ: 123 ಪ್ರಜಾಪ್ರತಿನಿಧಿ ಕಾಯ್ದೆ 1951 ಯಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಒಂದೇ ಕುಟುಂಬದ 85ಕ್ಕೂ ಹೆಚ್ಚು ಮಂದಿಯಿಂದ ಏಕಕಾಲಕ್ಕೆ ಮತದಾನ - Lok Sabha Election

ಇದನ್ನೂ ಓದಿ:ಚಾಮರಾಜನಗರ: ಮತದಾನ ಬಹಿಷ್ಕರಿಸಿದ್ದ ಗ್ರಾಮದಲ್ಲಿ ಮತಗಟ್ಟೆ ಧ್ವಂಸ - Attack on polling Booth

ABOUT THE AUTHOR

...view details