ಬೆಂಗಳೂರು:ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕು. ಕಾರು ಚಾಲಕನೊಬ್ಬನನ್ನು ಖದೀಮನೊಬ್ಬ ಅಡ್ಡಗಟ್ಟಲು ಯತ್ನಿಸಿರುವ ಘಟನೆ ಶನಿವಾರ ನಗರದ ರಾತ್ರಿ ಜಕ್ಕೂರು ಅಂಡರ್ಪಾಸ್ ಬಳಿ ನಡೆದಿದೆ.
ರಾತ್ರಿ 8.30ರ ಸುಮಾರಿಗೆ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಜಕ್ಕೂರು ಬಳಿ ಸಾಗುತ್ತಿದ್ದ ವ್ಯಕ್ತಿಯೊಬ್ಬರ ಕಾರಿಗೆ ಕಳ್ಳನೊಬ್ಬ ಏಕಾಏಕಿ ಅಡ್ಡಬಂದಿದ್ದ. ಈ ವೇಳೆ ಎಚ್ಚೆತ್ತ ಕಾರು ಚಾಲಕ ವ್ಯಕ್ತಿಯನ್ನು ತಪ್ಪಿಸಿ, ಕಾರು ನಿಲ್ಲಿಸದೇ ಮುಂದೆ ಸಾಗಿದ್ದಾನೆ.