ಬೆಂಗಳೂರು : ಜಾತಿ ಗಣತಿ ವರದಿ ಸಂಬಂಧ ಪಕ್ಷದ ನಿರ್ಣಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಡಿಸಿಎಂ ಡಿ.ಕೆ ಶಿವಕುಮಾರ್ ಅವರದಾರೂ ಕೇಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಸೂಚನೆ ನೀಡಿದ್ದಾರೆ.
ಜಾತಿ ಗಣತಿಗೆ ರಾಜ್ಯ ನಾಯಕರಿಂದ ವಿರೋಧ ವ್ಯಕ್ತವಾಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕರು, ನಾನು ಎಐಸಿಸಿ ಮಟ್ಟದಿಂದ ಹೇಳುತ್ತೇನೆ. ಪಕ್ಷದ ನಿರ್ಣಯವನ್ನು ಎಲ್ಲರೂ ಫಾಲೋ ಮಾಡಬೇಕು. ನಾವು ಹೇಳುವುದನ್ನು ಸಿದ್ದರಾಮಯ್ಯ ಅವರೂ ಕೇಳಬೇಕು. ಕೆ.ಜೆ ಜಾರ್ಜ್ ಕೂಡಾ ಪಾಲಿಸಬೇಕು. ಡಿ.ಕೆ ಶಿವಕುಮಾರ್ ಸಹ ಪಕ್ಷದ ನಿರ್ಧಾರಗಳನ್ನು ಅನುಸರಿಸಬೇಕು. ಮುಂದೆ ಪಾರ್ಟಿಗೆ ನೀವು ಬಂದರೂ ಫಾಲೋ ಮಾಡಬೇಕು ಎಂದು ಜಾತಿ ಗಣತಿ ಬಗ್ಗೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದರು.
ತಮ್ಮ ಸ್ಪರ್ಧೆ ಬಗ್ಗೆ ಸಿಎಂ, ಡಿಕೆಶಿ ಅವರನ್ನೇ ಕೇಳಿ? :ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅದನ್ನು ಸಿಎಂ ಮತ್ತು ಡಿಕೆಶಿ ಅವರನ್ನೇ ಕೇಳಿ. ಇಲ್ಲಿ ಹಿರಿಯರು ಕಿರಿಯರು ಇಲ್ಲ. ರಾಜ್ಯದಲ್ಲಿ 28 ಸೀಟು ಗೆಲ್ಲಬೇಕಾದರೆ ಎಲ್ಲರೂ ಕೆಲಸ ಮಾಡಬೇಕು. ನಾನು ಸ್ವರ್ಧಿಸಬೇಕಾ ಬೇಡವೇ? ಎಂಬುದು ಸ್ಥಳೀಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಅದರ ಬಗ್ಗೆ ಆಮೇಲೆ ನೋಡೋಣ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಕೆಲ ಕಡೆ ಸಮಸ್ಯೆ ಇದೆ ಸರಿಪಡಿಸುತ್ತೇವೆ :ಐ.ಎನ್.ಡಿ.ಎಮೈತ್ರಿಕೂಟದಡಿ ನಾವು ಸ್ಪರ್ಧಿಸ್ತೇವೆ. ಕೆಲವು ರಾಜ್ಯಗಳಲ್ಲಿ ಸೀಟು ಹಂಚಿಕೆಯಾಗಿದೆ. ತಮಿಳುನಾಡಿನಲ್ಲಿ 10 ಸೀಟು ಪಡೆದಿದ್ದೇವೆ. ದೆಹಲಿಯಲ್ಲಿ ಆಪ್ ಜೊತೆ ಒಪ್ಪಂದವಾಗಿದೆ. ಯುಪಿಯಲ್ಲೂ ನಾವು ಅಗ್ರಿಮೆಂಟ್ ಮಾಡಿಕೊಂಡಿದ್ದೇವೆ. ಮಹಾರಾಷ್ಟ್ರದಲ್ಲೂ 17 ರಿಂದ 19 ಸೀಟು ಸಿಗುವ ವಿಶ್ವಾಸವಿದೆ. ನಮ್ಮವರು ಇಂದು ಚರ್ಚೆಯನ್ನು ಮುಂದುವರಿಸಿದ್ದಾರೆ. ಎಲ್ಲ ಕಡೆಗಳಲ್ಲೂ ಬಹುತೇಕ ಹೊಂದಾಣಿಕೆ ಆಗಿದೆ. ಕೆಲವು ಕಡೆ ಸ್ವಲ್ಪ ಸಮಸ್ಯೆ ಇದೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇದನ್ನೂ ಓದಿ :ಶ್ರಮಿಕ ನ್ಯಾಯ, ಹಿಸ್ಸೇದಾರಿ ನ್ಯಾಯ ಗ್ಯಾರೆಂಟಿ ಘೋಷಿಸಿದ ಖರ್ಗೆ