ಧಾರವಾಡ:ದಿನದಿಂದ ದಿನಕ್ಕೆ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಕಾವು ಏರತೊಡಗಿದೆ. ಎರಡು ಪಕ್ಷದ ಅಭ್ಯರ್ಥಿಗಳು ಗೆಲುವಿಗಾಗಿ ರಣತಂತ್ರ ಹೆಣೆಯುತ್ತಿದ್ದಾರೆ. ಹೀಗಿರುವಾಗ ಮಹದಾಯಿ ಹೋರಾಟಗಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನೋದ ಅಸೂಟಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಸಭೆ ಬಳಿಕ ಹೋರಾಟಗಾರ ವೀರೇಶ ಸೊಬರದಮಠ ಮಾತನಾಡಿ, "9 ವರ್ಷಗಳಿಂದ ಕುಡಿಯುವ ನೀರಿನ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದೇವೆ. ನಾವು ಪ್ರಾಮಾಣಿಕ ಹೋರಾಟ ಮಾಡಿದರು ಕೂಡಾ ಕೇಂದ್ರದ ಬಿಜೆಪಿ ಸರ್ಕಾರ ಈ ಯೋಜನೆಗೆ ವಿಳಂಬ ಮಾಡಿದೆ. ಇದು ನೋವಿನ ಸಂಗತಿ, ಈ ಭಾಗದ ನಾಲ್ಕು ಸಂಸದರು ಕಿರುಕುಳ ಕೊಡುವುದರಲ್ಲಿ ಮೇಧಾವಿಗಳು. ಪ್ರಬುದ್ಧ ಹೊಂದಿದ ಪ್ರಹ್ಲಾದ ಜೋಶಿ ಅವರು ಮೋಸ ಮಾಡಿದ್ದಾರೆ. ಆಗುವ ಯೋಜನೆಗೆ ಅಡ್ಡಿ ಮಾಡಿದ್ದಾರೆ".
"ಜೋಶಿ ಅವರು ಮೋಸ ಮಾಡಿದ ಬಗ್ಗೆ ನಮ್ಮ ಬಳಿ ದಾಖಲೆ ಇವೆ. ಸುಳ್ಳು ಹೇಳಿದರೆ ನಿಮ್ಮ ಮನೆ ಮುಂದೆ ಬಂದು ರೈತರು ಕುಳಿತುಕೊಳ್ಳುತ್ತಾರೆ. ನೀತಿ ಸಂಹಿತೆ ಇದ್ದರೂ ಕೂಡಾ ಹೆದರಲ್ಲ. ನಮ್ಮ ಪ್ರಾಣ ಹೋಗಲಿ ನಾವು ನೊಂದಿದ್ದೇವೆ, ನಿಮಗೆ ನಮ್ಮ ಜನ ಮತ ಹಾಕಿ ಗೆಲ್ಲಿಸಿದರೂ ನೀವು ನೀರು ತರಲಿಲ್ಲ, ನೀವು ಸಂಸದರಾಗಲು ಲಾಯಕ್ಕಿಲ್ಲ ಮೊದಲು ನೀವು ಬದಲಾಗಬೇಕು. ನಾಲ್ಕು ಜಿಲ್ಲೆಗಳಾದ ಹಾವೇರಿ, ಬಾಗಲಕೋಟೆ, ಧಾರವಾಡ ಬೆಳಗಾವಿಯಲ್ಲಿ ಎಲ್ಲರೂ ಹಗಲು ರಾತ್ರಿ ದುಡಿಯುತ್ತೇವೆ. ರಾಮನ ಪಾದದ ಮೇಲೆ ನಾನು ಪ್ರಮಾಣ ಮಾಡಿ ಹೇಳುವೆ, ಕಾಂಗ್ರೆಸ್ ಪಕ್ಷದಿಂದ ನಯಾಪೈಸೆ ಪಡೆಯದೇ ಬಿಜೆಪಿ ಸೋಲಿಸುತ್ತೇವೆ" ಎಂದು ವಾಗ್ದಾಳಿ ನಡೆಸಿದರು.
ಮುಂದುವರೆದು "ಬಸವರಾಜ್ ಬೊಮ್ಮಾಯಿ ಅವರೇ ಪಾದಯತ್ರೆ ಮಾಡಿ ನಮ್ಮ ಭಾಗದಲ್ಲಿ ರೊಟ್ಟಿ ಪಡೆದು ಮಹದಾಯಿ ಬಗ್ಗೆ ಮಾತನಾಡಿದ್ದಿರಿ. ಮುಖ್ಯಮಂತ್ರಿ ಆದಿರಿ. ಆದರೆ ಆಮೇಲೆ ಮಹದಾಯಿಗಾಗಿ ಏನು ಮಾಡಿದ್ದೀರಿ. ಪ್ರಹ್ಲಾದ ಜೋಶಿ ನೀವು ರೈತರ ಬಾರಕೋಲ ತಕ್ಕೊಂಡು ಅದನ್ನು ಹೆಗೆಲಮೇಲೆ ಹಾಕಿಕೊಂಡು ಹೋರಾಟ ಮಾಡಿ ಅಧಿಕಾರಕ್ಕೆ ಬಂದಿರಿ. ಆದರೆ ಮಹದಾಯಿಗೆ ಅನುಮತಿ ಕೊಡಿಸಲು ಆಗಿಲ್ಲ. ಅಂದಮೇಲೆ ನೀವ್ಯಾಕೆ ಸಂಸದರಾಗಿರಬೇಕು, ನೀವ್ಯಾಕೆ ಸಚಿವರಾಗಿರಬೇಕು" ಎಂದು ಸೊಬರದಮಠ ಹರಿಹಾಯ್ದರು.
ಇದನ್ನೂ ಓದಿ:ಚಲುವರಾಯಸ್ವಾಮಿ ವಿರುದ್ಧ ಮಾನಹಾನಿಕರ ಹೇಳಿಕೆ ಆರೋಪ: ಸುರೇಶ್ ಗೌಡ ವಿರುದ್ಧ ವಿಚಾರಣೆಗೆ ನ್ಯಾಯಾಲಯ ಸೂಚನೆ - Civil court