ಕರ್ನಾಟಕ

karnataka

ETV Bharat / state

ಮಂಗಳೂರು: ಚಲಿಸುತ್ತಿರುವಾಗಲೇ ಐಷಾರಾಮಿ ಕಾರು ಬೆಂಕಿಗಾಹುತಿ; ವಿಡಿಯೋ - BMW Car Fire - BMW CAR FIRE

ಐಷಾರಾಮಿ ಬಿಎಂಡಬ್ಲ್ಯೂ ಕಾರೊಂದು ಸಂಚರಿಸುತ್ತಿರುವಾಗಲೇ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್​​ ಬಳಿ ನಡೆದಿದೆ.

car fire
ಕಾರಿಗೆ ಬೆಂಕಿ (ETV Bharat)

By ETV Bharat Karnataka Team

Published : Sep 28, 2024, 3:26 PM IST

Updated : Sep 28, 2024, 3:34 PM IST

ಮಂಗಳೂರು:ದೆಹಲಿ ನೋಂದಣಿಯ ಬಿಎಂಡಬ್ಲ್ಯೂ ಕಾರೊಂದು ಸಂಚರಿಸುತ್ತಿರುವಾಗಲೇ ಏಕಾಏಕಿ ಬೆಂಕಿ ಕಾಣಿಸಿಕೊಂಡು ರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಘಟನೆ ನಗರದ ಹೊರವಲಯದ ಅಡ್ಯಾರ್​​ನ ಸಹ್ಯಾದ್ರಿ ಕಾಲೇಜು ಬಳಿ ಶನಿವಾರ ಸಂಭವಿಸಿದೆ.

ಸ್ಥಳದಲ್ಲಿದ್ದವರು ಬಿಎಂಡಬ್ಲ್ಯು ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಕಂಡು, ನಂದಿಸಲು ಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಲಿಲ್ಲ. ಕೆಲ ಹೊತ್ತಲ್ಲೇ ಬೆಂಕಿ ಆವರಿಸಿಕೊಂಡು, ಐಷಾರಾಮಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವ ವೇಳೆಗಾಗಲೇ ಸಂಪೂರ್ಣ ಕಾರು ಬೆಂಕಿಗೆ ಆಹುತಿಯಾಗಿದೆ.

ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ಕಾರು (ETV Bharat)

ರಸ್ತೆಯಲ್ಲೇ ಕಾರಿಗೆ ಬೆಂಕಿ ಹೊತ್ತಿ ಉರಿಯುತ್ತಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬೆಂಕಿ ತಗುಲಿರುವುದು ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನರು ವೀಕ್ಷಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

2011-12ರ ಮಾಡೆಲ್​ನ ಬಿಎಂಡಬ್ಲ್ಯೂ ಕಾರು ಇದಾಗಿದೆ. ಕಾರಿನಲ್ಲಿದ್ದ ಚಾಲಕ ಬಿ.ಸಿ. ರೋಡ್​​ನ ಗುರುದೀಪ್ ಬೆಂಕಿ ಹಾಣಿಸಿಕೊಂಡ ಬೆನ್ನಲ್ಲೇ ಕೆಳಗಿಳಿದಿದ್ದು, ಅವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಮಂಗಳೂರು ನಗರ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಹೊಸೂರು ಟಾಟಾ ಎಲೆಕ್ಟ್ರಾನಿಕ್ಸ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ, ಕೋಟ್ಯಂತರ ರೂಪಾಯಿ ಆಸ್ತಿ ನಷ್ಟ - Tata Electronics Fire Accident

Last Updated : Sep 28, 2024, 3:34 PM IST

ABOUT THE AUTHOR

...view details