ಕರ್ನಾಟಕ

karnataka

ETV Bharat / state

ಪೌತಿ‌ ಖಾತೆಗೆ ₹25 ಸಾವಿರ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ - LOKAYUKTA RAID

ಪೌತಿ ಖಾತೆ ಮಾಡಲು ಲಂಚ ಸ್ವೀಕರಿಸುವಾಗ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿ Lokayukta Raid
ಗ್ರಾಮ ಲೆಕ್ಕಾಧಿಕಾರಿ ಸಂಜಯ್‌ ಮೋಹಿತೆ ಎಸ್.ಆರ್ (ETV Bharat)

By ETV Bharat Karnataka Team

Published : Nov 7, 2024, 9:43 AM IST

ಶಿವಮೊಗ್ಗ:ಪೌತಿ ಖಾತೆ ಮಾಡಿಕೊಡಲು 25 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಶಿವಮೊಗ್ಗದ ಕಸಬಾ-1 ಗ್ರಾಮ ಆಡಳಿತ ಅಧಿಕಾರಿ (ವಿಎ) ಸಂಜಯ್‌ ಮೋಹಿತೆ ಎಸ್.ಆರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ತಾಲೂಕು ಆಗಸವಳ್ಳಿ ಹೂಸೂರು ಗ್ರಾಮದ ಮುನಿರಂಗೇಗೌಡ ಅಲಿಯಾಸ್ ಕಿರಣ್ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು.

ಮುನಿರಂಗೇಗೌಡ ಅವರು ತಮ್ಮ ಅಜ್ಜನ ಹೆಸರಿನಲ್ಲಿ‌ರುವ ಜಮೀನನ್ನು ಅಜ್ಜಿಯ ಹೆಸರಿಗೆ ಪೌತಿ ಖಾತೆ ಮಾಡಲು ಶಿವಮೊಗ್ಗ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಹೋಗಿ ಅರ್ಜಿಯ ಬಗ್ಗೆ ವಿಚಾರಿಸಿದಾಗ ಪೌತಿ ಖಾತೆ ಬದಲಾವಣೆ ಮಾಡಬೇಕಾದರೆ 25 ಸಾವಿರ ರೂ ಹಣ ನೀಡಬೇಕೆಂದು ಸಂಜಯ್ ಮೋಹಿತೆ ಬೇಡಿಕೆ‌ ಇಟ್ಟಿದ್ದರು.

ಬುಧವಾರ ಗ್ರಾಮ ಆಡಳಿತಾಧಿಕಾರಿ ಕಚೇರಿಯಲ್ಲಿ ಸಂಜಯ್ ಮೋಹಿತೆ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಲಂಚ ಕೇಳಿದ ಮೊಬೈಲ್ ಆಡಿಯೋವನ್ನೂ ಲೋಕಾಯುಕ್ತ ಪೊಲೀಸರಿಗೆ ದೂರುದಾರರು ನೀಡಿದ್ದರು.

ಲೋಕಾಯುಕ್ತ ಎಸ್ಪಿ ಮಂಜುನಾಥ ಚೌದರಿ ಎಂ.ಹೆಚ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್.ಎಸ್.ಸುರೇಶ್, ಸಿಬ್ಬಂದಿಗಳಾದ ಯೋಗೇಶ್, ಟೀಕಪ್ಪ, ಸುರೇಂದ್ರ, ಪ್ರಶಾಂತ್ ಕುಮಾರ್, ಚೆನ್ನೇಶ್, ಅರುಣ್ ಕುಮಾರ್, ದೇವರಾಜ್, ಪುಟ್ಟಮ್ಮ.ಎನ್, ಗಂಗಾಧರ, ಪ್ರದೀಪ್, ಜಯಂತ್ ಮತ್ತು ತರುಣ್ ಪಾಲ್ಗೊಂಡಿದ್ದರು.

ಇದನ್ನೂ ಓದಿ:ದಾವಣಗೆರೆ: ತಾನೇ ಜೀವವಿಮೆ ಮಾಡಿಸಿ, ₹40 ಲಕ್ಷ ಹಣಕ್ಕಾಗಿ ಮಾವನನ್ನೇ ಕೊಂದ ಅಳಿಯ!

ABOUT THE AUTHOR

...view details