ಹುಬ್ಬಳ್ಳಿ:ಲೋಕಸಭೆ ಚುನಾವಣೆ ಹಿನ್ನೆಲೆ ಪ್ರತ್ಯೇಕ ವಾಹನ ತಪಾಸಣೆ ನಡೆಸಿದ ವೇಳೆಯಲ್ಲಿ ಲಕ್ಷಾಂತರ ದಾಖಲೆ ರಹಿತ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಹುಬ್ಬಳ್ಳಿ- ಕಾರವಾರ ರಸ್ತೆ ಸಂಗಟಿಕೊಪ್ಪ ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಮಯದಲ್ಲಿ ಬನವಾಸಿಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಫೋರ್ಡ್ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಲಾಯಿತು. ಈ ವೇಳೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬನವಾಸಿಯ ಮನೋಹರ ಮೊರೆ ಎಂಬುವವರು ಹತ್ತಿರವಿದ್ದ ಬ್ಯಾಗಿನಲ್ಲಿ 55,500 ರೂ. ಕಂಡು ಬಂದಿದೆ. ಸದರ ಹಣಕ್ಕೆ ದಾಖಲಾತಿ ಕೇಳಲಾಗಿ ಅದಕ್ಕೆ ಪೂರಕವಾಗಿ ಯಾವುದೇ ದಾಖಲಾತಿಗಳನ್ನು ನೀಡಿರುವುದಿಲ್ಲ. ಆದ್ದರಿಂದ ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಸುಭಾಷ್ ಹನಮಪ್ಪ ತಳವಾರ ಮ್ಯಾಜಿಸೈಟ್ ಎಸ್ಎಸ್ಟಿ- 1 ಅವರು ಅನಧಿಕೃತ ಹಣ ವಶಕ್ಕೆ ಪಡೆದು ಕಲಘಟಗಿ ತಹಶೀಲ್ದಾರ್ ಸುಪರ್ದಿಗೆ ನೀಡಿದ್ದಾರೆ. ನಂತರ ಕಲಘಟಗಿ ತಹಶೀಲ್ದಾರ್ ಹಣವನ್ನು ಖಜಾನೆಯಲ್ಲಿ ಜಮೆ ಮಾಡಿ ವರದಿ ಸಲ್ಲಿಸಿದ್ದಾರೆ.