ತುಮಕೂರು:ಜಾತಿಗಣತಿ ಮೇಲ್ನೋಟಕ್ಕೆ ಅವೈಜ್ಞಾನಿಕವಾಗಿದೆ. ಎಲ್ಲ ಸಮುದಾಯಕ್ಕೂ ಸಾಮಾಜಿಕ, ಶೈಕ್ಷಣಿಕ ನ್ಯಾಯ ಸಿಗಬೇಕು. ಹೀಗಾಗಿ ವರದಿಯನ್ನು ಮತ್ತೊಮ್ಮೆ ತಯಾರಿಸಿ ಬಿಡುಗಡೆ ಮಾಡಲಿ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಒಕ್ಕಲಿಗ ಸಮುದಾಯದಲ್ಲಿ ಅನೇಕ ಒಳಪಂಗಡಗಳಿವೆ. ಅದೇ ರೀತಿ ಲಿಂಗಾಯತರಲ್ಲೂ ಒಳಪಂಗಡಗಳಿವೆ. ನಮ್ಮ ಎಲ್ಲ ಉಪ ಪಂಗಡಗಳನ್ನೂ ಸೇರಿಸಿ ಒಕ್ಕಲಿಗ ಅಂತ ಮಾಡಲಿ. ಅದೇ ರೀತಿ ಲಿಂಗಾಯತ ಸಮುದಾಯದಲ್ಲೂ ಮಾಡಲಿ ಎಂದು ಸಲಹೆ ನೀಡಿದರು.