ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ನಾಯಕರು ಸ್ವಲ್ಪ ಮೆಚ್ಯೂರ್ ಆಗಿ ಮಾತಾಡಲಿ: ಸಚಿವ ಪ್ರಹ್ಲಾದ್ ಜೋಶಿ - ಸುಪ್ರೀಂ ಕೋರ್ಟ್

ಸಂತೋಷ ಲಾಡ್ ಸುಪ್ರೀಂ ಕೋರ್ಟ್ ಗಿಂತ ಮೇಲಿದ್ದಾರಾ? ಕಾಂಗ್ರೆಸ್ ನಾಯಕರಿಗೆ ಏನಾಗಿದೆ ಅಂತ ಅರ್ಥವಾಗುತ್ತಿಲ್ಲ. ರಾಮಮಂದಿರ ಕಟ್ಟಿದ ಜಾಗ ಸರಿ ಇಲ್ಲ ಎಂಬ ಇಂಥ ಅಪ್ರಬುದ್ಧ ಹೇಳಿಕೆ ಯಾಕೆ ನೀಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಇವರಿಗೆಲ್ಲ ಹಿಂದುಗಳ ಮತ್ತು ರಾಮನ ಬಗ್ಗೆ ಹೊಟ್ಟೆಕಿಚ್ಚು ಯಾಕೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.

Minister Prahlad Joshi spoke to the media.
ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮದವರ ಜೊತೆ ಮಾತನಾಡಿದರು.

By ETV Bharat Karnataka Team

Published : Feb 19, 2024, 4:55 PM IST

Updated : Feb 19, 2024, 5:34 PM IST

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮದವರ ಜೊತೆ ಮಾತನಾಡಿದರು.

ಹುಬ್ಬಳ್ಳಿ:ಸಚಿವಸಂತೋಷ ಲಾಡ್ ಸುಪ್ರೀಂ ಕೋರ್ಟ್ ಗಿಂತ ಮೇಲಿದ್ದಾರಾ? ಕಾಂಗ್ರೆಸ್ ನಾಯಕರಿಗೆ ಏನಾಗಿದೆ ಅಂತ ಅರ್ಥವಾಗುತ್ತಿಲ್ಲ. ಸಂತೋಷ ಲಾಡ್, ರಾಹುಲ್ ಗಾಂಧಿ ಅವರು ಸ್ವಲ್ಪ ಮೆಚ್ಯೂರ್ ಆಗಿ ಮಾತಾಡಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದರು.

ನಗರದಲ್ಲಿಂದು ರಾಮಮಂದಿರ ಕಟ್ಟಿದ ಜಾಗ ಸರಿ ಇಲ್ಲ ಎಂಬ ಸಂತೋಷ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಪ್ರಬುದ್ಧ ಹೇಳಿಕೆ ಯಾಕೆ ನೀಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಹೊಂದಿದೆ. ಮನುಷ್ಯನಿಗೆ ಶ್ರದ್ಧೆ, ಸ್ವಾಭಿಮಾನ, ಆತ್ಮಾಭಿಮಾನ ಮುಖ್ಯ, ಅಪಮಾನವನ್ನು ಯಾರೂ ಸಹಿಸಲ್ಲ. ಚರ್ಚ್, ಮಸೀದಿ ಕಟ್ಟುವುದರಿಂದ ಬಡತನ ನಿವಾರಣೆ ಆಗುತ್ತಾ ಅಂತ ಅವರನ್ನೂ ಕೇಳಬೇಕು, ಹೊಟ್ಟೆಯಲ್ಲಿ ಹಿಂದುಗಳ ಮತ್ತು ರಾಮನ ಬಗ್ಗೆ ಕಿಚ್ಚು ಯಾಕೆ ಎಂದು ಪ್ರಶ್ನಿಸಿದರು.

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಇದರದೊಳಗೆ ಏನು ತಪ್ಪಿದೆ. ಇದರ ಬದಲಾವಣೆ ವಿಚಾರ ಇದು ಸರ್ಕಾರದ ಮುಟ್ಟಾಳತನದ ವರ್ತನೆ, ಇದು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ಪರಮಾವಧಿ. ಇದು ರಾಷ್ಟ್ರ ಕವಿ ಕುವೆಂಪು ಅವರಿಗೆ ಮಾಡಿರುವ ಅಪಮಾನ, ಹಾಗಿದ್ದರೆ ಕುವೆಂಪು ಜಾತ್ಯತೀತ ವ್ಯಕ್ತಿ ಅಲ್ವಾ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು.

ಹಳೇ ಹುಬ್ಬಳ್ಳಿ ಗಲಭೆಕೋರರನ್ನು ಅಮಾಯಕರು ಅಂತ ಯಾರು ಹೇಳಿದ್ದು, ನ್ಯಾಯಾಲಯದಲ್ಲಿ ಸರ್ಕಾರ ಸರಿಯಾಗಿ ವಾದ ಮಂಡಿಸಿಲ್ಲ. ಪರೋಕ್ಷವಾಗಿ ಜಾಮೀನಿಗೆ ಸರ್ಕಾರ ಸಮ್ಮತಿ ನೀಡಿದೆ. ಮುಂದೆ ಇಂತಹ ಘಟನೆ ನಡೆದಾಗ ಅವರಿಗೆ ಗೊತ್ತಾಗುತ್ತದೆ ಎಂದರು.

ಕಾಂಗ್ರೆಸ್ ತನ್ನ ಅಸ್ತಿತ್ವಕ್ಕೆ ಹೆಣಗಾಡುತ್ತಿದೆ:ಕಾಂಗ್ರೆಸ್ ಪಕ್ಷ ತನ್ನ ನಾಯಕರನ್ನು ಉಳಿಸಿಕೊಳ್ಳಲಿ, ದೇಶಾದ್ಯಂತ ಕಾಂಗ್ರೆಸ್​ನಿಂದ ದೊಡ್ಡ ಪ್ರಮಾಣದೊಳಗ ನಾಯಕರು ಬಿಟ್ಟು ಬರಲು ತಯಾರು ಆಗಿ ನಿಂತಿದ್ದಾರೆ. ರಾಹುಲ್ ಗಾಂಧಿ ಅವರು ಏನೇನೋ ಮಾತನಾಡುತ್ತಾರೆ. ಸಿದ್ದರಾಮಯ್ಯ, ಸಂತೋಷ್ ಲಾಡ್​ ಅವರು ಇದನ್ನೇ ಮಾಡ್ತಾರಲ್ಲಾ, ಇದನ್ನೆಲ್ಲ ನೋಡಿ ಜನರಿಗೆ ಗೊಂದಲವಾಗಿದೆ. ಇವರೆಲ್ಲ ಇಂದಿನ ವಾಸ್ತವಿಕತೆ ಅರ್ಥ ಮಾಡಿಕೊಳ್ಳದೇ ಏನೇನೊ ಮಾತನಾಡುತ್ತಿದ್ದಾರೆ. ಇವರ ಜೊತೆ ಇದ್ದರ ಉದ್ಧಾರ ಆಗೋದಿಲ್ಲ ಅಂತ ಬಹಳಷ್ಟು ನಾಯಕರು ಬಿಜೆಪಿಗೆ ಬರುತ್ತಿದ್ದಾರೆ. ಇದರಿಂದಾಗಿ ಇಂದು ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂದು ಸಚಿವ ಜೋಶಿ ಹೇಳಿದರು.

ಇದನ್ನೂಓದಿ:ದೇಶದಲ್ಲಿ 10 ವರ್ಷದಿಂದ ಸರ್ವಾಧಿಕಾರಿ ಧೋರಣೆ ನಡೆಯತ್ತಿದೆ: ಸಂತೋಷ ಲಾಡ್ ವಾಗ್ದಾಳಿ

Last Updated : Feb 19, 2024, 5:34 PM IST

ABOUT THE AUTHOR

...view details