ಕರ್ನಾಟಕ

karnataka

ETV Bharat / state

ಧಾರವಾಡ: ಮನಸೂರು ಗ್ರಾಮದಲ್ಲಿ ಮತ್ತೆ ಚಿರತೆ ದಾಳಿ, ಮೂರು ಕರುಗಳ ಬಲಿ - Leopard attacks

ಧಾರವಾಡ ಜಿಲ್ಲೆಯ ಮನಸೂರು ಗ್ರಾಮದಲ್ಲಿ ಚಿರತೆ ದಾಳಿ ಮಾಡಿ, ಮೂರು ಕರುಗಳನ್ನು ಬಲಿ ಪಡೆದಿದೆ.

Etv Bharat
Etv Bharat

By ETV Bharat Karnataka Team

Published : Mar 30, 2024, 11:24 AM IST

Updated : Mar 30, 2024, 1:47 PM IST

ಮನಸೂರು ಗ್ರಾಮದಲ್ಲಿ ಮತ್ತೆ ಚಿರತೆ ದಾಳಿ

ಧಾರವಾಡ: ಕಳೆದ ಒಂದು ವಾರದಿಂದ ಮನಸೂರು ಗ್ರಾಮದ ಸುತ್ತಮುತ್ತ ಬೀಡು ಬಿಟ್ಟು ಆತಂಕ ಮೂಡಿಸಿರುವ ಚಿರತೆ, ಇದೀಗ ಕಳೆದ ರಾತ್ರಿ ಮತ್ತೊಮ್ಮೆ ಮೂರು ಕರುಗಳ ಮೇಲೆ ದಾಳಿ ಮಾಡಿದೆ. ಧಾರವಾಡ ತಾಲೂಕಿನ ಮನಸೂರು ಗ್ರಾಮದ ಬಳಿಯ ಜೋಶಿ ಫಾರ್ಮ್ ಹೌಸ್​​ನಲ್ಲಿ ಕಟ್ಟಿದ್ದ ಮೂರು ಆಕಳ‌ ಕರುಗಳ ಮೇಲೆ ತಡರಾತ್ರಿ ಚಿರತೆ ದಾಳಿ ಮಾಡಿ ಬಲಿ ಪಡೆದಿದೆ.

ಕಳೆದ‌ ವಾರ‌ ಇದೇ ಗ್ರಾಮದಲ್ಲಿ ಕುಬೇರಪ್ಪ ಮಡಿವಾಳರ ಎಂಬ ರೈತನ ಆಕಳ ಕರು ಮೇಲೆ ಚಿರತೆ ದಾಳಿ‌ ಮಾಡಿತ್ತು. ಆ ಬಳಿಕ ಗ್ರಾಮದ ಸುತ್ತಮುತ್ತ ಜನರು ಆತಂಕಗೊಂಡಿದ್ದರು. ವಾರದಿಂದ ಅಲ್ಲಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಟ್ಟು ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಚಿರತೆ ಈವರೆಗೆ ಬೋನಿಗೆ ಬಿದ್ದಿಲ್ಲ.

ಕಳೆದ ರಾತ್ರಿ ಮತ್ತೆ ಕಾಣಿಸಿಕೊಂಡಿರುವ ಚಿರತೆ, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಮತ್ತು ರಾತ್ರಿ ವೇಳೆ ಜಮೀನಿಗೆ ತೆರಳುವ ರೈತರಲ್ಲಿ ಆತಂಕ ಮೂಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಆಗಮಿಸಿದ್ದು, ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಎರಡು ನಾಯಿಗಳಿಗೆ ಹೊಂಚು ಹಾಕಿ ವಿಫಲವಾಗಿದ್ದ ಚಿರತೆ: ಮತ್ತೊಂದು ಯತ್ನದಲ್ಲಿ ಒಂದು ಶ್ವಾನ ನಾಪತ್ತೆ

ಬಳ್ಳಾರಿಯಲ್ಲಿ ಕರಡಿ ದಾಳಿ: ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಕರಡಿಗಳು ದಾಳಿ ನಡೆಸಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ ಕರಡಿ ದಾಳಿಯಿಂದ ಹಲಕುಂದಿಯ ಕೃಷ್ಣನಾಯಕ್, ಮೊಳಕಾಲ್ಮೂರಿನ ಪ್ರಸನ್ನ ಕುಮಾರ್ ಗಾಯಗೊಂಡಿದ್ದು, ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತೋಟದ ಕೆಲಸಕ್ಕೆ ತೆರಳಿದ್ದ ವೇಳೆ ಕೃಷ್ಣ ನಾಯಕ ಮೇಲೆ ಕರಡಿ ದಾಳಿ ಮಾಡಿದೆ. ಇನ್ನು ಹಲಕುಂದಿ ಮಠದ ಸಮೀಪ ಪ್ರಸನ್ನ ಕುಮಾರ ಮೇಲೆ ಮೂರು ಕರಡಿಗಳು ದಾಳಿ ಮಾಡಿವೆ. ಪರಿಣಾಮ ಅವರ ಮುಖ ದೇಹದ ಭಾಗಗಳಿಗೆ ತೀವ್ರ ಗಾಯಗಳಾಗಿವೆ.

ಇದನ್ನೂ ಓದಿ:ಕರ್ನಾಟಕ ವಿಶ್ವವಿದ್ಯಾಲಯ, ಮನಸೂರು ಗ್ರಾಮದ ಬಳಿ ಚಿರತೆ ಪ್ರತ್ಯಕ್ಷ, ಸ್ಥಳಕ್ಕೆ ಡಿಸಿ ಭೇಟಿ - Leopard Found

Last Updated : Mar 30, 2024, 1:47 PM IST

ABOUT THE AUTHOR

...view details