ಕರ್ನಾಟಕ

karnataka

ETV Bharat / state

ಲೇಟ್​ನೈಟ್ ಪಾರ್ಟಿ ಪ್ರಕರಣ: ನಟ ದರ್ಶನ್ ಸೇರಿ ಎಂಟು ಜನರಿಗೆ ಬಿಗ್ ರಿಲೀಫ್ - Late Night Party Case - LATE NIGHT PARTY CASE

ಅವಧಿ ಮೀರಿ ಪಬ್​ನಲ್ಲಿ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ನಟರಿಗೆ ಬಿಗ್​ ರಿಲೀಫ್ ನೀಡಿದ್ದಾರೆ.

ಲೇಟ್​ನೈಟ್ ಪಾರ್ಟಿ ಪ್ರಕರಣ: ನಟ ದರ್ಶನ್ ಸೇರಿ ಎಂಟು ಜನರಿಗೆ ಬಿಗ್ ರಿಲೀಫ್
ಲೇಟ್​ನೈಟ್ ಪಾರ್ಟಿ ಪ್ರಕರಣ: ನಟ ದರ್ಶನ್ ಸೇರಿ ಎಂಟು ಜನರಿಗೆ ಬಿಗ್ ರಿಲೀಫ್

By ETV Bharat Karnataka Team

Published : Apr 1, 2024, 11:46 AM IST

ಬೆಂಗಳೂರು:ಅವಧಿಗೂ ಮೀರಿ ಪಬ್​ನಲ್ಲಿ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಸೇರಿ 8 ಜನರಿಗೆ ಪೊಲೀಸರು ಬಿಗ್ ರಿಲೀಫ್ ನೀಡಿದ್ದಾರೆ. ಪ್ರಕರಣದ ಸಂಬಂಧ ತನಿಖೆ ನಡೆಸಿದ ಸುಬ್ರಮಣ್ಯನಗರ ಪೊಲೀಸರು ಆ ದಿನದಂದು ಅವಧಿ ಮೀರಿ‌ ಪಬ್​​ ಓಪನ್ ಇದ್ದು, ಈ ವೇಳೆ ಔತಣಕೂಟ ಮಾತ್ರ ನಡೆಸಲಾಗಿದ್ದು, ಯಾವುದೇ ರೀತಿಯ ಮದ್ಯದ ಪಾರ್ಟಿ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಪಬ್​ ಮಾಲೀಕನ ವಿರುದ್ದ ಪ್ರಕರಣ ದಾಖಲಾಗಿದ್ದು, ನಟ ದರ್ಶನ್ ಸೇರಿ ಎಂಟು ನಟರನ್ನು ಸಾಕ್ಷಿಗಳನ್ನಾಗಿ ಮಾಡಿ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಕಳೆದ ಜನವರಿಯಲ್ಲಿ ಕಾಟೇರ ಸಕ್ಸಸ್ ಮೀಟ್ ಎಂದು ಜೆಟ್​ಲಾಗ್ ಪಬ್​ನಲ್ಲಿ ಪಾರ್ಟಿ ನಡೆದಿತ್ತು.‌ ಅವಧಿ ಮೀರಿ ಪಾರ್ಟಿ ನಡೆದಿದ್ದರಿಂದ ಪೊಲೀಸರು ಕೇಸ್ ದಾಖಲಿಸಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ದರ್ಶನ್, ರಾಕ್​ಲೈನ್ ವೆಂಕಟೇಶ್, ಡಾಲಿ ಧನಂಜಯ್ ಸೇರಿ ಎಂಟು ನಟರಿಗೆ ನೊಟೀಸ್ ನೀಡಿ ವಿಚಾರಣೆಗೆ ಒಳಪಡಿಸಿದ್ದರು.

ಊಟದ ಪಾರ್ಟಿ ಬಿಟ್ಟರೆ ಯಾವುದೇ ತರಹದ ಪಾರ್ಟಿ ಆಗಿಲ್ಲ ಎಂದು ನಟರು ವಿಚಾರಣೆ ವೇಳೆ ತಿಳಿಸಿದ್ದರು. ಇದನ್ನು ದಾಖಲಿಸಿ ತನಿಖೆ ಪೂರ್ಣಗೊಳಿಸಿದ ಸುಬ್ರಮಣ್ಯನಗರ ಪೊಲೀಸರು ಎಸಿಎಂಎಂ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಎಂಟೂ ನಟರನ್ನು ಸಾಕ್ಷಿಗಳೆಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ಅವಧಿ ಮೀರಿ ಪಬ್​ನಲ್ಲಿ ಪಾರ್ಟಿ ಆರೋಪ: ದರ್ಶನ್ ಸೇರಿ ಎಂಟು ಮಂದಿ ವಿಚಾರಣೆ‌ ನಡೆಸಿದ‌ ಪೊಲೀಸರು

ABOUT THE AUTHOR

...view details