ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಮರಗಸಿ ಮಾಡುವ ವೇಳೆ ವಿದ್ಯುತ್ ತಂತಿ ತಾಗಿ ಮರದಲ್ಲೇ ಕಾರ್ಮಿಕ ಸಾವು - Laborer died in tree - LABORER DIED IN TREE

ಸಿಲ್ವರ್​ ಮರಕ್ಕೆ ಮರಗಸಿ ಮಾಡುತ್ತಿದ್ದ ಕಾರ್ಮಿಕ ವಿದ್ಯುತ್​ ತಂತಿ ತಗುಲಿ ಮರದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.

Laborer died in tree after being hit by an electric wire
ಮರಗಸಿ ಮಾಡುವ ವೇಳೆ ವಿದ್ಯುತ್ ತಂತಿ ತಾಗಿ ಮರದಲ್ಲೇ ಕಾರ್ಮಿಕ ಸಾವು (ETV Bharat)

By ETV Bharat Karnataka Team

Published : Jun 1, 2024, 7:52 PM IST

ಚಿಕ್ಕಮಗಳೂರು:ವಿದ್ಯುತ್ ಶಾಕ್​ನಿಂದ ಕಾರ್ಮಿಕನೋರ್ವ ಮರದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಕಾಫಿ ತೋಟದಲ್ಲಿ ಬೆಳೆದಿರುವ ಬೃಹತ್ ಗಾತ್ರದ ಸಿಲ್ವರ್ ಮರಗಳನ್ನು, ಮರಗಸಿ ಮಾಡುವಾಗ ಈ ದುರಂತ ನಡೆದಿದೆ. ಚಂದ್ರಪ್ಪ(45) ಮೃತ ದುರ್ದೈವಿಯಾಗಿದ್ದಾರೆ. ಸಿಲ್ವರ್ ಮರದ ಅಡ್ಡ ಕೊಂಬೆಗಳನ್ನು ಕಡಿಯುವಾಗ ಈ ಅವಘಡ ಜರುಗಿದೆ.

ಮರ ನೇರವಾಗಿ ಬೆಳೆಯಲೆಂದು ಸಿಲ್ವರ್ ಮರಕ್ಕೆ ಮರಗಸಿ ಅನಿವಾರ್ಯವಾಗಿದ್ದು, ಪ್ರತಿಯೊಬ್ಬರು ಈ ಸಂದರ್ಭದಲ್ಲಿ ತೋಟದಲ್ಲಿ ಬೆಳೆದ ಸಿಲ್ವರ್ ಮರಗಳಿಗೆ ಮರಗಸಿ ಮಾಡಿಸುತ್ತಾರೆ. ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಈ ಅವಘಡ ನಡೆದಿದೆ. ಚಂದ್ರಪ್ಪ ಅವರು ಮರದ ಮೇಲಿದ್ದಾಗಲೇ ವಿದ್ಯುತ್ ಪ್ರವಹಿಸಿ ಮರದಲ್ಲೇ ಸಾವನ್ನಪ್ಪಿದ್ದಾನೆ. ಕೂಡಲೇ ವ್ಯಕ್ತಿಯ ಮೃತದೇಹವನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮೃತ ವ್ಯಕ್ತಿಯ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ:ವಿಜಯಪುರ : ಆಕಸ್ಮಿಕ ವಿದ್ಯುತ್‌ತಂತಿ ತಗುಲಿ ವ್ಯಕ್ತಿ ಸಾವು - Man died after electrocuted

ABOUT THE AUTHOR

...view details