ಡಿಸಿಎಂ ಡಿಕೆಶಿ ಹೇಳಿಕೆ (ETV Bharat) ಬೆಂಗಳೂರು: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ಮೊದಲು ಬಿಜೆಪಿಯವರು ಮತ್ತು ಜೆಡಿಎಸ್ನವರು ಉತ್ತರ ಕೊಟ್ಟ ಬಳಿಕ ನಾವು ಉತ್ತರ ಕೋಡುತ್ತೇವೆ ಎಂದು ಹೇಳಿದರು.
ಮದ್ದೂರಿನಲ್ಲಿ ಕಾಂಗ್ರೆಸ್ ಸಮಾವೇಶ:ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಇಂದು ಮದ್ದೂರಿನಲ್ಲಿ ನಮ್ಮ ಸಮಾವೇಶ ಇದೆ. ನಮ್ಮ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ಕೊಡಬೇಕಿದೆ. ಕೇಂದ್ರ ಸರ್ಕಾರದಿಂದ ಹಣ ಏಕೆ ಬಿಡುಗಡೆಯಾಗಿಲ್ಲ ಮತ್ತು ಹಣವನ್ನು ಏಕೆ ಬಿಡುಗಡೆ ಮಾಡಿಸಲಿಲ್ಲ?. ಹಿಂದೆ ನಾವು ವಿರೋಧ ಪಕ್ಷದಲ್ಲಿದ್ದಾಗ ಏನೆನೂ ಮಾತನಾಡಿದ್ದೇವೆ, ನೀವೇನು ಮಾತನಾಡಿದ್ದೀರಿ.. ಎಂಬುದರ ಬಗ್ಗೆ ಉತ್ತರ ಕೊಡಲಿ ಎಂದು ಕೇಳುತ್ತೇವೆ. ನೀವು ಮಾಡಿರುವ ಹಗರಣಗಳಿಗೆ ಉತ್ತರ ಕೊಡಿ ಎಂದು ಕೇಳಿದ್ದೇವೆ. ಇಲ್ಲಿಯವರೆಗೆ ಉತ್ತರ ಕೊಟ್ಟಿಲ್ಲ ಎಂದು ಡಿಕೆಶಿ ಹೇಳಿದರು.
ಮೊದಲು ಕುಮಾರಸ್ವಾಮಿ ಲೆಕ್ಕ ಕೊಡಲಿ: ಕುಮಾರಸ್ವಾಮಿ ಅವರು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ಪ್ರಶ್ನೆ ಮಾಡಲಿ ಯಾವುದೇ ಸಮಸ್ಯೆ ಇಲ್ಲ. ಯಾವಾಗ ಬೇಕಾದ್ರೂ ನನ್ನನ್ನು ಲೆಕ್ಕ ಕೇಳಲಿ. ನಾನು ನಿಮ್ಮ ಸಹೋದರನ ಲೆಕ್ಕ ಕೇಳಿದ್ದೇನೆ. ಮೊದಲು ಆ ಲೆಕ್ಕ ಕೊಡಲಿ. ನಮ್ಮ-ನಿಮ್ದು ಚರ್ಚೆ ಆಮೇಲೆ ಮಾಡೋಣಾ. ನನ್ನದು ಪಟ್ಟಿ ಕೊಡೋಣಾ, ನಿಮ್ದು ಪಟ್ಟಿ ಕೊಡೋಣಾ.. ಯಾವುದು ಮುಚ್ಚು ಮರೆ ಬೇಡ. ನಿಮ್ಮ ಸಹೋದರನಿಗೆ ಹಣ ಹೇಗೆ ಬಂತು, ನಿಮ್ಮ ಅಧಿಕಾರ ಇದ್ದಾಗ ನಿಮ್ಮ ಸಹೋದರ ಯಾವ ರೀತಿ ದುರುಪಯೋಗ ಮಾಡಿಕೊಂಡರು. ಅದೆಲ್ಲಾ ಮೊದಲು ಲೆಕ್ಕಚಾರ ಹಾಕೋಣಾ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ವಿಜೇಂದ್ರ ವಿರುದ್ಧ ಡಿಕೆಶಿ ವಾಗ್ದಾಳಿ: ನನ್ನನ್ನು ವಿಜೇಂದ್ರ ಭ್ರಷ್ಟಾಚಾರದ ಪಿತಾಮಹ ಅಂತಾ ಹೇಳಿದ್ದಾರೆ. ನಿಮ್ಮ ತಂದೆಯನ್ನು ರಾಜೀನಾಮೆ ಕೊಡಿಸಿದ್ದೇಕೆ, ಏಕೆ ಜೈಲಿಗೆ ಕಳುಹಿಸಿದೆ ಎಂಬುದನ್ನು ನೀನು ಹೇಳು. ನಿನ್ನ ಲೆಕ್ಕಾಚಾರ ಮೊದಲು ಹೊರ ಬರಲಿ. ಯತ್ನಾಳ್ ಮತ್ತು ಗೂಳಿಹಟ್ಟಿ ಶೇಖರ್ಗೆ ಮೊದಲು ಉತ್ತರ ಕೊಡಲಿ. ನಿಮ್ಮ ಪಕ್ಷದವರಿಗೆ ಮೊದಲು ಉತ್ತರ ಕೊಡಿ. ಆಮೇಲೆ ನಾವು ಉತ್ತರ ಕೊಡುತ್ತೇವೆ ಎಂದು ವಿಜೇಂದ್ರ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.
ಓದಿ:ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಸಿದ್ದರಾಮಯ್ಯ ಭೇಟಿ: ಸಂತ್ರಸ್ತರಿಗೆ ಧೈರ್ಯ ತುಂಬಲಿರುವ ಸಿಎಂ - CM To Visit Belagavi