ಕರ್ನಾಟಕ

karnataka

ETV Bharat / state

ಬೆಂಗಳೂರು: ತಿಂಗಳಾಂತ್ಯಕ್ಕೆ 'ಐರಾವತ ಕ್ಲಬ್ ಕ್ಲಾಸ್ 2.0' ಬಸ್​ಗಳು ರಸ್ತೆಗೆ​ - AIRAVAT CLUB CLASS BUS

ಐರಾವತ ಕ್ಲಬ್​ ಕ್ಲಾಸ್​ 2.0 ಬಸ್​ಗಳನ್ನು ರಸ್ತೆಗಿಳಿಸಲು ಕೆಎಸ್​ಆರ್​ಟಿಸಿ ಸಜ್ಜಾಗಿದೆ.

Airavat-club-class Bus
ಐರಾವತ ಕ್ಲಬ್ ಕ್ಲಾಸ್ 2.0 ಬಸ್ (ETV Bharat)

By ETV Bharat Karnataka Team

Published : Oct 7, 2024, 7:17 PM IST

ಬೆಂಗಳೂರು:ವಿವಿಧ ಮಾದರಿಯ ಅತ್ಯಾಧುನಿಕ ಬಸ್​ಗಳನ್ನು ಪ್ರಯಾಣಿಕರ ಬೇಡಿಕೆಗನುಗುಣವಾಗಿ ಸೇರಿಸುತ್ತಿರುವುದರಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಕೆಎಸ್ಆರ್​ಟಿಸಿ, ಇದೀಗ ವೋಲ್ವೋ ಹೊಸ ಸರಣಿಯ ಐರಾವತ ಕ್ಲಬ್ ಕ್ಲಾಸ್ 2.0 ಬಸ್​ಗಳನ್ನು ರಸ್ತೆಗಿಳಿಸಲು ಮುಂದಾಗಿದೆ. ತಿಂಗಳಾಂತ್ಯಕ್ಕೆ 20 ಹೊಸ ವೋಲ್ವೋ ಬಸ್‌ಗಳು ನಿಮಗಕ್ಕೆ ಸೇರ್ಪಡೆಯಾಗಲಿವೆ.

ಹೊಸಕೋಟೆ ಬಳಿಯಿರುವ ವೋಲ್ವೋ ಬಸ್ ತಯಾರಿಕಾ ಫ್ಯಾಕ್ಟರಿಗೆ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್ಆರ್​ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಭೇಟಿ ನೀಡಿ, ಹೊಸ ಮಾದರಿಯ ಬಸ್‌ನ ಪರಿವೀಕ್ಷಣೆ ನಡೆಸಿದರು. ಈ ವೇಳೆ ಬಸ್​ನಲ್ಲಿರುವ ವ್ಯವಸ್ಥೆಗಳಿಗೆ ಹರ್ಷ ವ್ಯಕ್ತಪಡಿಸಿದ ಸಚಿವರು, ನಿಗಮದಲ್ಲಿ ಇದೇ ಮೊದಲ ಬಾರಿಗೆ ಐರಾವತ ಕ್ಲಬ್ ಕ್ಲಾಸ್ 2.0 ಬಸ್‌ಗಳನ್ನು ಪರಿಚಯಿಸಲು ಉತ್ಸುಕತೆ ತೋರಿದರು.

ಐರಾವತ ಕ್ಲಬ್​ ಕ್ಲಾಸ್​ ಬಸ್​ ವೀಕ್ಷಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (ETV Bharat)

ಐರಾವತ 2.0 ಮಾದರಿಯ 20 ಬಸ್​ಗಳನ್ನು ಕೆಎಸ್​ಆರ್​ಟಿಸಿ ಈ ತಿಂಗಳ ಕೊನೆಯ ವಾರದಲ್ಲಿ ತನ್ನ ವಾಹನಗಳ ಸಮೂಹಕ್ಕೆ ಸೇರ್ಪಡೆಗೊಳಿಸಲಿದೆ. ಒಂದು ಬಸ್​ನ ದರ 1.78 ಕೋಟಿ ರೂ.ಗಳಾಗಿದ್ದು, ನಿಗಮದಲ್ಲಿ ಒಟ್ಟು 443 ಐಷಾರಾಮಿ ಬಸ್​ಗಳಿವೆ. ಅದಕ್ಕೆ ಇದೀಗ ಐರಾವತ 2.0 ಸೇರ್ಪಡೆಯಾಗುತ್ತಿವೆ.

ಬಸ್​ನ ವಿಶೇಷತೆಗಳು:ಶಕ್ತಿಶಾಲಿ ಹ್ಯಾಲೊಜೆನ್ ಹೆಡ್‌ಲೈಟ್‌ಗಳು, ಡೇ ರನ್ನಿಂಗ್ ಲೈಟ್‌ (DRL), ಪ್ಲಶ್ ಇಂಟೀರಿಯರ್ಸ್, ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸವಿದೆ.

ಏರೋಡೈನಾಮಿಕ್ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ. ನವೀನ ತಂತ್ರಜ್ಞಾನ/ತಾಂತ್ರಿಕತೆಯಿಂದ ಸುಧಾರಿತ ಇಂಜಿನ್ ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಸುಧಾರಿತ ಇಂಜಿನ್‌ ಕೆಎಂಪಿಎಲ್ ನೀಡುತ್ತದೆ.

ಐರಾವತ ಕ್ಲಬ್​ ಕ್ಲಾಸ್​ ಬಸ್​ ವೀಕ್ಷಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (ETV Bharat)

ಒಟ್ಟಾರೆ ಬಸ್​ನ ಉದ್ದದಲ್ಲಿ ಶೇ 3.5 ಹೆಚ್ಚಿರುವುದರಿಂದ ಪ್ರಯಾಣಿಕರ ಆಸನಗಳ ನಡುವಿನ ಅಂತರವೂ ಹೆಚ್ಚಾಗಿದೆ. ಬಸ್​ನ ಎತ್ತರದಲ್ಲಿ ಶೇ.5.6 ಹೆಚ್ಚಳ ಇರುವುದರಿಂದ ಹೆಚ್ಚಿನ ಹೆಡ್‌ ರೂಂ ಇರುತ್ತದೆ. ವಿಂಡ್‌ಶೀಲ್ಡ್ ಗಾಜು ಶೇ 9.5ರಷ್ಟು ವಿಸ್ತಾರವಾಗಿದ್ದು, ಚಾಲಕನಿಗೆ ಗೋಚರತೆಯನ್ನು ಹೆಚ್ಚಿಸಿ, ಬ್ಲೈಂಡ್ ಸ್ಪಾಟ್ ​ಅನ್ನು ಕಡಿಮೆ ಮಾಡುತ್ತದೆ.

ವಿಶಾಲ ಲಗೇಜ್ ಸ್ಥಳಾವಕಾಶವಿದ್ದು, ಹಿಂದಿನ ಬಸ್​ಗಳಿಗೆ ಹೋಲಿಸಿದ್ದಲ್ಲಿ ಶೇ 20ರಷ್ಟು ಹೆಚ್ಚಿನ ಲಗೇಜ್​ ಸೌಲಭ್ಯವಿದೆ. ಇದು ಲಗೇಜ್​ಗೆ ಹೆಚ್ಚಿನ ಸ್ಥಳಾವಕಾಶವಿರುವ ಮೊದಲ ಬಸ್ ಆಗಿದೆ‌.

USB + C ಟೈಪ್​ನಂತಹ ಹೊಸ ಜನರೇಷನ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒಳಗೊಂಡಿದೆ. ವಿಶಾಲವಾದ ಎಸಿ ಡಕ್ಟ್ ಹೊಂದಿರುವುದರಿಂದ ವಾಹನದ ಒಳಗೆ ಉತ್ತಮ ಹವಾನಿಯಂತ್ರಣಾ ವ್ಯವಸ್ಥೆ ಇದೆ.

ಉನ್ನತ ದರ್ಜೆ/ವಿನ್ಯಾಸದ ಆಸನಗಳು ಮತ್ತು ಸಾಮಗ್ರಿಗಳ ಬಳಕೆಯಿಂದ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ಮತ್ತು ಸೌಕರ್ಯ. ವಿಶಾಲವಾದ ಪ್ಯಾಂಟೋಗ್ರಾಫಿಕ್ ವಿನ್ಯಾಸದಿಂದ ವಾಹನದ ನಿರ್ವಹಣೆ ಕೈಗೊಳ್ಳಲು ಸುಲಭವಾಗಿರುತ್ತದೆ.

ಹಿಂಭಾಗದಲ್ಲಿ fog light ಒಳಗೊಂಡಿರುವುದರಿಂದ ರಾತ್ರಿ ವೇಳೆಯಲ್ಲಿ ಹೆಚ್ಚಿನ ಸುರಕ್ಷತೆ ಇರುತ್ತದೆ. ಸುಲಭವಾಗಿ ಕೈಗೆಟುಕುವ ಚಾಲಕ ನಿಯಂತ್ರಣಗಳು ಮತ್ತು ಸ್ವಿಚ್‌ಗಳನ್ನು ಹೊಂದಿದ್ದು, ಚಾಲಕರಿಗೆ ಹೆಚ್ಚು ಅನುಕೂಲಕರವಾಗಲಿದೆ.

ಐರಾವತ ಕ್ಲಬ್​ ಕ್ಲಾಸ್​ ಬಸ್‌ನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (ETV Bharat)

ಬೆಂಕಿ ಅವಘಡದ ಸಂದರ್ಭದಲ್ಲಿ ನೀರು ಸಿಂಪಡಣೆ:ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (FAPS) ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಇರುತ್ತದೆ. ಬಸ್​ನ ಒಳಗೆ ಪ್ರಯಾಣಿಕರ ಆಸನದ ಎರಡೂ ಬದಿಯಲ್ಲಿ ನೀರಿನ ಪೈಪ್​ಗಳಿದ್ದು, 30 ನಾಜ಼ಲ್​ಗಳಿಂದ ನೀರು ಸರಬರಾಜಾಗಿ, ಬೆಂಕಿ ಅವಘಡದ ಸಂದರ್ಭದಲ್ಲಿ ನೀರು ಸಿಂಪಡಿಸಲು ಪ್ರಾರಂಭವಾಗುತ್ತದೆ. ಚಾಲಕರು ಪಾದಚಾರಿಯನ್ನು ಪ್ರಯಾಣಿಕರ ಬಾಗಿಲಿನಿಂದ ಸುಲಭವಾಗಿ ನೋಡಬಹುದಾಗಿದ್ದು, ಹೆಚ್ಚಿನ ಸುರಕ್ಷತೆ ಇರುತ್ತದೆ.

ಬಸ್ ಪರಿವೀಕ್ಷಣೆ ವೇಳೆ ನಿಗಮದ ನಿರ್ದೇಶಕಿ ಡಾ.ಕೆ.ನಂದಿನಿದೇವಿ, ನಿಗಮದ ಹಿರಿಯ ಅಧಿಕಾರಿಗಳು, ವೋಲ್ವೋ ಕಂಪನಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು‌, ಅಗತ್ಯ ಮಾಹಿತಿ ಒದಗಿಸಿದರು.

ಇದನ್ನೂ ಓದಿ:ವೋಲ್ವೋ ಮಲ್ಟಿ ಆಕ್ಸಲ್ ಸೀಟರ್ ಪ್ರೋಟೋಟೈಪ್ ಬಸ್ ಖರೀದಿಗೆ ಮುಂದಾದ ಕೆಎಸ್​ಆರ್​ಟಿಸಿ: ಏನಿದರ ವಿಶೇಷತೆ? - VOLVO BUS

ABOUT THE AUTHOR

...view details