ಕರ್ನಾಟಕ

karnataka

ETV Bharat / state

ನಾಳೆ ಕೆಎಲ್ಇ ತಾಂತ್ರಿಕ ವಿವಿ ಘಟಿಕೋತ್ಸವ: ಮುರಗೇಶ ನಿರಾಣಿ ಹಾಗೂ ಅರವಿಂದ ಮೆಳ್ಳಿಗೇರಿಗೆ ಗೌರವ ಡಾಕ್ಟರೇಟ್ - KLE UNIVERSITY CONVOCATION

ನಾಳೆ ನಡೆಯುವ 6ನೇ ಘಟಿಕೋತ್ಸವದಲ್ಲಿ 1,677 ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿಗಳನ್ನು ನೀಡಲಾಗುತ್ತಿದೆ.

Muragesh Nirani and Arvind Melligeri
ಮುರಗೇಶ ನಿರಾಣಿ ಹಾಗೂ ಅರವಿಂದ ಮೆಳ್ಳಿಗೇರಿ (ETV Bharat)

By ETV Bharat Karnataka Team

Published : Nov 15, 2024, 7:38 PM IST

ಹುಬ್ಬಳ್ಳಿ:"ಪ್ರತಿಷ್ಠಿತ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವವನ್ನು ನವೆಂಬರ್ 16ರಂದು ಬೆಳಗ್ಗೆ 10.30ಕ್ಕೆ ಡಾ. ಪ್ರಭಾಕರ ಕೊರೆ ಸ್ಪೋರ್ಟ್ಸ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ" ಎಂದು ಉಪಕುಲಪತಿ ಪ್ರಕಾಶ ತೆವರಿ ತಿಳಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "1947ರಲ್ಲಿ ಕೆಎಲ್ಇ ಸಂಸ್ಥೆ ಆರಂಭವಾಗಿದ್ದು, 2014 ರಲ್ಲಿ ವಿಶ್ವವಿದ್ಯಾಲಯವಾಗಿದೆ. ಈಗ 6ನೇ ಘಟಿಕೋತ್ಸವ ಆಚರಿಸುತ್ತಿದೆ. ಸಮಾರಂಭಕ್ಕೆ ಅತಿಥಿಯಾಗಿ ಕೇಂದ್ರ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ. ಅಭಯ್ ಕರಂಡೆಕರ್ ಭಾಗವಹಿಸಲಿದ್ದು, ಮಾಜಿ ಸಚಿವ ಮುರಗೇಶ ನಿರಾಣಿ ಹಾಗೂ ಎಕಸ್​ನ ಅಧ್ಯಕ್ಷ ಅರವಿಂದ್​ ಮೆಳ್ಳಿಗೇರಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು" ಎಂದರು.

ಉಪಕುಲಪತಿ ಪ್ರಕಾಶ ತೆವರಿ (ETV Bharat)

ಕೆಎಲ್​ಇ ಸಂಸ್ಥೆಯ ಅಧ್ಯಕ್ಷತೆ ಡಾ.ಪ್ರಭಾಕರ ಕೋರೆ ಭಾಗವಹಿಸಲಿದ್ದು, 1,677 ವಿದ್ಯಾರ್ಥಿಗಳಿಗೆ ಈ ವರ್ಷ ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ. 1,367 ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತಿದೆ. ಇದರಲ್ಲಿ 850 ವಿದ್ಯಾರ್ಥಿ, 517 ವಿದ್ಯಾರ್ಥಿನಿಯರು. 296 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ನೀಡಲಾಗುತ್ತಿದ್ದು, ಅವರಲ್ಲಿ 137 ವಿದ್ಯಾರ್ಥಿಗಳು, 155 ವಿದ್ಯಾರ್ಥಿನಿಯರು. 17 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ನೀಡಲಾಗುತ್ತಿದ್ದು, ಅವರಲ್ಲಿ 14 ವಿದ್ಯಾರ್ಥಿಗಳು, 3 ವಿದ್ಯಾರ್ಥಿನಿಯರು" ಎಂದು ತಿಳಿಸಿದರು.

"ಸ್ನಾತಕೋತ್ತರದ 6 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 6 ವಿದ್ಯಾರ್ಥಿಗಳು ಹಾಗೂ 13 ವಿದ್ಯಾರ್ಥಿನಿಯರಿಗೆ ಬೆಳ್ಳಿ ಪದಕ ನೀಡಲಾಗುತ್ತಿದೆ. ಸಿವಿಲ್ ವಿಭಾಗದಲ್ಲಿ ಟಾಪರ್ ಆದವರಿಗೆ ನೀಡುವ ಡಾ.ಎಸ್.ಎಸ್. ಭಾವಿಕಟ್ಟಿ ಚಿನ್ನದ ಪದಕವನ್ನು ಬಯೋಟೆಕ್ ವಿದ್ಯಾರ್ಥಿ ಮುಸ್ಕಾನ ಮಧುಕೇಶ್ವರ ನಾಯಕ್ ಅವರಿಗೆ ನೀಡಲಾಗುವುದು" ಎಂದು ಹೇಳಿದರು.

ಇದನ್ನೂ ಓದಿ:ತೋಟಗಾರಿಕೆ ವಿವಿಯಲ್ಲಿ 13ನೇ ಘಟಿಕೋತ್ಸವ ; 16 ಚಿನ್ನದ ಪದಕ ಪಡೆದು ಮಿಂಚಿದ ವಿದ್ಯಾರ್ಥಿನಿ ಅಮೂಲ್ಯ - Horticulture University convocation

ABOUT THE AUTHOR

...view details