ಕರ್ನಾಟಕ

karnataka

ETV Bharat / state

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಖಾಸಗಿ, ಸರ್ಕಾರಿ ಸಂಸ್ಥೆಗಳಲ್ಲಿ ಉತ್ಪಾದಿಸುವ ವಸ್ತುಗಳ ಮೇಲೆ ಕನ್ನಡ ಸೇರ್ಪಡೆ - ಸಿಎಂ ಘೋಷಣೆ - KARNATAKA RAJYOTSAVA

69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೇ ಸುವರ್ಣ ಸಂಭ್ರಮ-50ರ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು 50 ಸಾಧಕ ಮಹಿಳೆಯರು ಮತ್ತು 50 ಪುರುಷರಿಗೆ ನೀಡಲಾಯಿತು.

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ (ETV Bharat)

By ETV Bharat Karnataka Team

Published : Nov 1, 2024, 10:34 PM IST

ಬೆಂಗಳೂರು:ರಾಜ್ಯದ ಖಾಸಗಿ, ಸರ್ಕಾರಿ ಸಂಸ್ಥೆಗಳಲ್ಲಿ ಉತ್ಪಾದಿಸುವ ವಸ್ತುಗಳ ಮೇಲೆ ಇಂಗ್ಲೀಷ್​​ನಲ್ಲಿ ಹೆಸರು ಇದೆ. ಮುಂದೆ ಅದರ ಮೇಲೆ ಕನ್ನಡದಲ್ಲೂ ಹೆಸರು ಸೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.

ವಿಧಾನಸೌಧದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಖಾಸಗಿ, ಸರ್ಕಾರಿ ಕ್ಷೇತ್ರಗಳಲ್ಲಿ ಉತ್ಪಾದಿಸಲಾಗುವ ವಸ್ತುಗಳ ಮೇಲೆ ಈಗ ಇಂಗ್ಲೀಷ್​​ನಲ್ಲಿ ಹೆಸರಿದೆ. ಅದನ್ನು ಇನ್ನು ಮುಂದೆ ಕನ್ನಡದಲ್ಲೂ ಹೆಸರು ಸೇರಿಸುವ ಪ್ರಯತ್ನ ಮಾಡುವ ಬಗ್ಗೆ ಘೋಷಣೆ ಮಾಡಿದರು. ಇದೇ ವೇಳೆ ಮೈಸೂರು ಜಿಲ್ಲೆಯಲ್ಲಿ ಹೊಸ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಮಾಡಿದ್ದು, ಹಳೆಯ ಜಿಲ್ಲಾಧಿಕಾರಿ ಕಚೇರಿ ಖಾಲಿಯಾಗಿದೆ. ಅಲ್ಲಿ ಕನ್ನಡ ಮ್ಯುಸಿಯಂ ಮಾಡಲಾಗುತ್ತದೆ ಎಂದು ಘೋಷಿಸಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (ETV Bharat)

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು. ಕರ್ನಾಟಕ ಎಂದು ಮರುನಾಮಕರಣ ಆದ ಮೇಲೆ 50 ವರ್ಷ ತುಂಬಿದೆ. ಸಂಭ್ರಮಾಚರಣೆಯನ್ನು ಬಿಜೆಪಿಯವರು ಮಾಡಬೇಕಿತ್ತು ಆದರೆ ಮಾಡಲಿಲ್ಲ. ಅವರು ಮಾಡಲಿಲ್ಲ ಅಂತಾ ನಾನು ಬಜೆಟ್​​ನಲ್ಲಿ ಘೋಷಣೆ ಮಾಡಿದೆ. ನವೆಂಬರ್ 1ಕ್ಕೆ 51 ವರ್ಷ ತುಂಬಿದೆ. ಅರ್ಥಪೂರ್ಣವಾಗಿ ಕರ್ನಾಟಕ ಎಂದು ನಾಮಕರಣ ಆದ ವರ್ಷವನ್ನು ಇಡೀ ವರ್ಷ ಆಚರಣೆ ಮಾಡಿದೆ. 100 ಸಾಧಕರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿದ್ದೇವೆ ಎಂದರು.

ಇದನ್ನೂ ಓದಿ:ಕನ್ನಡ, ಕನ್ನಡಿಗರ ಹೀಯಾಳಿಸುವ ಪ್ರವೃತ್ತಿ ಹೆಚ್ಚುತ್ತಿದೆ, ಅಂತಹವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ: ಸಿಎಂ ಎಚ್ಚರಿಕೆ

ನಿಮ್ಮ ಸಾಧನೆಗಳನ್ನು ಗುರುತಿಸಿ ಕರ್ನಾಟಕ ಸರ್ಕಾರ ಪ್ರಶಸ್ತಿ ನೀಡಿದೆ. ನಾಡಿಗೋಸ್ಕರ ಭಾಷೆ, ಜಲ, ನೆಲ, ಕಲೆ ಕ್ರೀಡೆ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ. ಇನ್ನು ಹೆಚ್ಚು ಸಾಧನೆ ಮಾಡಿ ಎಂದು ಹಾರೈಸುತ್ತೇನೆ. ನಿಮ್ಮನ್ನ ಅನುಸರಿಸುವ ಕೆಲಸ ಯುವ ಜನಾಂಗ ಮಾಡಬೇಕು ಎಂದು ಕರೆ ನೀಡಿದರು.

ಮುಂದಿನ ವರ್ಷದಿಂದ ಕನ್ನಡ ಬಾವುಟ ಕಡ್ಡಾಯ:ಇದೇ ವೇಳೆ ಭಾಷಣ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕರ್ನಾಟಕ ಎಂಬ ಹೆಸರು ಬಂದು 50 ವರ್ಷ ಆಗಿದೆ. ರಾಜ್ಯೋತ್ಸವ ಸುವರ್ಣೋತ್ಸವ ಪ್ರಶಸ್ತಿ ವಿಜೇತರಲ್ಲಿ ಕೆಲವರು ವಿಧಾನಸೌದವನ್ನೇ ನೋಡಿಲ್ಲ. ಅಂತವರನ್ನ ಗುರುತಿಸಿ, ಸಮಿತಿ ರಚನೆ ಮಾಡಿ ಆಯ್ಕೆ ಮಾಡಿದ್ದೇವೆ. ವೇದಿಕೆ ಮೇಲಿರುವ ಎಲ್ಲಾ ಸಾಧಕರು ಇನ್ನೂ ಸಾಧನೆ ಮಾಡಲಿ. ಇಡೀ ರಾಜ್ಯದ ಜನತೆ ನಿಮ್ಮನ್ನು ಗುರುತಿಸಿದ್ದಾರೆ. ಬೆಂಗಳೂರು ನಗರದ ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ, ಶಾಲೆಗಳಲ್ಲಿ ಕನ್ನಡ ಬಾವುಟ ಹಾರಿಸೋದಕ್ಕೆ ಮನವಿ ಮಾಡಿದ್ವಿ. ಮುಕ್ಕಾಲು ಜನ ಆಚರಣೆ ಮಾಡಿದ್ದಾರೆ. ಮುಂದಿನ ವರ್ಷ ಇದನ್ನ ಕಡ್ಡಾಯ ಮಾಡುತ್ತೇವೆ ಎಂದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ:ಇದಕ್ಕೂ ಮುಂಚೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ 2024 ಮತ್ತು ಕರ್ನಾಟಕ ಸಂಭ್ರಮ 50ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಧಾನಸೌಧದ ಮುಂಭಾಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಶಿವರಾಜ್ ತಂಗಡಗಿ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಮಾಡಿದರು. 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ವರ್ಷ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷ ಆಗಿರುವುದರಿಂದ ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಸುವರ್ಣ ಸಂಭ್ರಮ-50ರ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು 50 ಸಾಧಕ ಮಹಿಳೆಯರಿಗೆ ಮತ್ತು 50 ಪುರುಷರಿಗೆ ನೀಡಲಾಯಿತು. ಆ ಮೂಲಕ ಒಟ್ಟು 169 ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: ಬೆಳಗಾವಿಯಲ್ಲಿ ಅದ್ಧೂರಿ ಕರ್ನಾಟಕ ರಾಜೋತ್ಸವ: ಚನ್ನಮ್ಮ ವೃತ್ತದಲ್ಲಿ ಕುಣಿದು ಕುಪ್ಪಳಿಸಿದ ಕನ್ನಡ ತಾಯಿ ಮಕ್ಕಳು

ABOUT THE AUTHOR

...view details