ಕರ್ನಾಟಕ

karnataka

ETV Bharat / state

ಕರ್ನಾಟಕ ಸುದ್ದಿ - Live Updates Tue Nov 19 2024: Karnataka Today News - KARNATAKA NEWS TODAY TUE NOV 19 2024

Etv Bharat
Etv Bharat (Etv Bharat)

By Karnataka Live News Desk

Published : Nov 19, 2024, 8:10 AM IST

Updated : Nov 19, 2024, 10:33 PM IST

10:30 PM, 19 Nov 2024 (IST)

ರಾಜಧಾನಿಯ ಕೆರೆಗಳ ಪುನರುಜ್ಜೀವನ ಹೆಸರಿನಲ್ಲಿ ಒತ್ತುವರಿಗೆ ಅವಕಾಶ ನೀಡಲಾಗದು; ಹೈಕೋರ್ಟ್

ಬೆಂಗಳೂರಿನ ಸಿಟಿಜನ್‌ ಆ್ಯಕ್ಷನ್‌ ಗ್ರೂಪ್‌ ಸೇರಿದಂತೆ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜಧಾನಿಯ ಕೆರೆಗಳ ಪುನರುಜ್ಜೀವನ ಹೆಸರಿನಲ್ಲಿ ಒತ್ತುವರಿಗೆ ಅವಕಾಶ ನೀಡಲಾಗದು ಎಂದಿದೆ. | Read More

ETV Bharat Live Updates - POLICY OF REJUVENATE LAKES

09:56 PM, 19 Nov 2024 (IST)

ಗ್ರಾಮೀಣ ಪ್ರದೇಶದಲ್ಲಿ ಟೆಲಿಮೆಡಿಸಿನ್, ಟೆಲಿ - ಐಸಿಯುಗಳತ್ತ ಚಿತ್ತ: ಸಚಿವ ದಿನೇಶ್ ಗುಂಡೂರಾವ್

ಗ್ರಾಮೀಣ ಪ್ರದೇಶಗಳಲ್ಲಿ ಎಐ, ಟೆಲಿಮೆಡಿಸಿನ್ ಮತ್ತು ಟೆಲಿ - ಐಸಿಯುಗಳ ಸಮರ್ಪಕ ಬಳಕೆಯೊಂದಿಗೆ ಅತ್ಯಾಧುನಿಕ ಆರೋಗ್ಯ ಸೇವೆ ನೀಡಲು ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. | Read More

ETV Bharat Live Updates - BENGALURU TECH SUMMIT 2024

09:36 PM, 19 Nov 2024 (IST)

ಸಾಕ್ಷಿ ನುಡಿಯಲು ಬರುವವರ ಟಿಎ, ಡಿಎ ಮೊತ್ತ ಕಡಿಮೆ ಮಾಡುವಂತೆ ಅರ್ಜಿ: ಶಂಕಿತ ಎಲ್‌ಇಟಿ ಸದಸ್ಯನಿಗೆ ದಂಡ

ತನ್ನ ವಿರುದ್ಧ ಸಾಕ್ಷಿ ನುಡಿಯಲು ಬರುವವರ ಟಿಎ,ಡಿಎ ಮೊತ್ತವನ್ನು ಕಡಿಮೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಶಂಕಿತ ಲಷ್ಕರ್ ಇ ತೋಯ್ಬಾ ಸಂಘಟನೆ ಸದಸ್ಯನಿಗೆ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. | Read More

ETV Bharat Live Updates - SUSPECTED LET MEMBER

09:19 PM, 19 Nov 2024 (IST)

ಮಾದಪ್ಪನ ಬೆಟ್ಟದಲ್ಲಿ ತಗ್ಲಾಕೊಂಡ ಅಂತಾರಾಜ್ಯ ಕಳ್ಳರು: 41 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಮಲೆ ಮಹದೇಶ್ವರ ಬೆಟ್ಟದಲ್ಲಿ ಅಂತಾರಾಜ್ಯ ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ. ಅವರಿಂದ 41 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. | Read More

ETV Bharat Live Updates - INTERSTATE THIEVES ARRESTED

09:10 PM, 19 Nov 2024 (IST)

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ

ವರಸಿದ್ಧಿ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ ನೀಡಿದರು. | Read More

ETV Bharat Live Updates - KUKKE SUBRAMANYA TEMPLE

08:47 PM, 19 Nov 2024 (IST)

ಉಡುಪಿ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟಬಲ್​​ ಟ್ರಸ್ಟ್ ವತಿಯಿಂದ 14 ಉಚಿತ ಮನೆಗಳ ಹಸ್ತಾಂತರ

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟಬಲ್​​ ಟ್ರಸ್ಟ್ ವತಿಯಿಂದ ಜನ್ನಾಡಿ ಮತ್ತು ಮಣಿಗೇರೆ ಕೊರಗರ ಕಾಲೋನಿಯಲ್ಲಿ ನಿರ್ಮಿಸಿದ 14 ಉಚಿತ ಮನೆಗಳನ್ನು ಬಡವರಿಗೆ ಹಸ್ತಾಂತರಿಸಲಾಯಿತು. | Read More

ETV Bharat Live Updates - UDUPI

08:43 PM, 19 Nov 2024 (IST)

ನಮ್ಮ ಸರ್ಕಾರದಿಂದ ಬಡವರಿಗೆ ತೊಂದರೆಯಾಗುವುದಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಸರ್ಕಾರದಿಂದ ಬಡವರಿಗೆ ತೊಂದರೆಯಾಗುವುದಿಲ್ಲ ಎಂದಿದ್ದಾರೆ. | Read More

ETV Bharat Live Updates - DCM D K SHIVAKUMAR

08:23 PM, 19 Nov 2024 (IST)

ಎಲೆಕ್ಟ್ರಿಕಲ್ ಶೋ ರೂಂನಲ್ಲಿ ಬೆಂಕಿ ಅವಘಡ: ಯುವತಿ ಸಜೀವ ದಹನ

ಬೆಂಗಳೂರಿನ ಡಾ. ರಾಜ್​ ಕುಮಾರ್​ ರಸ್ತೆಯಲ್ಲಿರುವ ಮೈ ಇವಿ ಸ್ಕೂಟರ್​ ಶೋ ರೂಂನಲ್ಲಿ ಏಕಾಏಕಿ ಬೆಂಕಿ ಅವಘಡ ಕಾಣಿಸಿಕೊಂಡಿದೆ. ಘಟನೆಯಲ್ಲಿ ಸೇಲ್ಸ್​ ಗರ್ಲ್​ ಸಜೀವವಾಗಿ ದಹನವಾಗಿದ್ದಾರೆ. | Read More

ETV Bharat Live Updates - SALES GIRL BURNT

08:19 PM, 19 Nov 2024 (IST)

ಮುಖ್ಯಮಂತ್ರಿಗಳ ಜೊತೆಗಿನ ಸಭೆ ಯಶಸ್ವಿ: ಮದ್ಯ ಮಾರಾಟ ಬಂದ್ ಮುಷ್ಕರ ವಾಪಸ್

ಮದ್ಯ ಮಾರಾಟಗಾರರ ಜೊತೆ ಸಭೆ ನಡೆಸಿದ ಸಿಎಂ, ಬೇಡಿಕೆ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು ಎಂದಿದ್ದಾರೆ. | Read More

ETV Bharat Live Updates - CM MEETING WITH OFFICIALS

07:49 PM, 19 Nov 2024 (IST)

ಇನ್ವೆಸ್ಟಿಗೇಟಿಂಗ್ ಏಜೆನ್ಸಿಗೆ ಬೇಕಾದ ಪೂರಕ ಮಾಹಿತಿ ಕೊಡುತ್ತಿದ್ದೇವೆ: ಮುಡಾ ಮಾಜಿ ಆಯುಕ್ತ ನಟೇಶ್

ಮುಡಾ ಮಾಜಿ ಆಯುಕ್ತ ಡಿ. ಬಿ ನಟೇಶ್ ಅವರು ಇನ್ವೆಸ್ಟಿಗೇಟಿಂಗ್ ಏಜೆನ್ಸಿಗೆ ಬೇಕಾದ ಪೂರಕ ಮಾಹಿತಿ ಕೊಡುತ್ತಿದ್ದೇವೆ ಎಂದಿದ್ದಾರೆ. | Read More

ETV Bharat Live Updates - FORMER MUDA COMMISSIONER NATESH

07:36 PM, 19 Nov 2024 (IST)

ಮಿನಿ ವಿಧಾನಸೌಧಕ್ಕೆ ಹೊಸ ಮೆರಗು; 1.50 ಲಕ್ಷ ಹಣ ಸಂಗ್ರಹಿಸಿ ಹಳೇ ಕಚೇರಿಗೆ ಹೊಸ ರೂಪ ನೀಡಿದ ಸರ್ಕಾರಿ ಅಧಿಕಾರಿಗಳು

ಸರ್ಕಾರಿ ಅಧಿಕಾರಿಗಳೇ ಸೇರಿಕೊಂಡು ಸರ್ಕಾರಿ ಕಚೇರಿಗೆ ಬಣ್ಣ ಹಚ್ಚಿ ಹೊಸ ರೂಪ ತರುವ ಮೂಲಕ ಮಾದರಿಯಾಗಿದ್ದಾರೆ. | Read More

ETV Bharat Live Updates - NEW LOOK OF MINI VIDHANA SOUDHA

07:28 PM, 19 Nov 2024 (IST)

14 ಲಕ್ಷ ಬಡವರ ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುವ ಘೋರ ಅಪರಾಧ: ಸಿ.ಟಿ.ರವಿ ಆಕ್ಷೇಪ

ಬಿಪಿಎಲ್ ಕಾರ್ಡ್ ರದ್ದು ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಇದೊಂದು ಘೋರ ಅಪರಾಧ ಎಂದಿದ್ದಾರೆ. | Read More

ETV Bharat Live Updates - MLC CT RAVI SLAMS STATE GOVT

06:51 PM, 19 Nov 2024 (IST)

ರಾಜ್ಯದಲ್ಲಿ ಮೂರು 'ಜಾಗತಿಕ ಆವಿಷ್ಕಾರ ಜಿಲ್ಲೆ' ಸ್ಥಾಪನೆ: ಸಿಎಂ ಸಿದ್ದರಾಮಯ್ಯ: ಯಾವವು ಆ ಮೂರು ಜಿಲ್ಲೆಗಳು!

ರಾಜ್ಯದಲ್ಲಿ ಮೂರು ಜಿಲ್ಲೆಗಳನ್ನು ಜಾಗತಿಕ ಆವಿಷ್ಕಾರ ಜಿಲ್ಲೆಗಳಾಗಿ ರೂಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. | Read More

ETV Bharat Live Updates - BENGALURU TECH SUMMIT

06:48 PM, 19 Nov 2024 (IST)

ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಮೃತ: ಡಿಜಿಪಿ ರೂಪಾ

ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ರೂಪಾ ಡಿ ನಕ್ಸಲ್​ ವಿಕ್ರಂ ಗೌಡ ಎನ್​ಕೌಂಟರ್​ನಲ್ಲಿ ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ. | Read More

ETV Bharat Live Updates - NAXAL VIKRAM GOWDA

06:25 PM, 19 Nov 2024 (IST)

ಯಾವುದೇ ಕಾರಣಕ್ಕೂ ಅರ್ಹರಿಗೆ ಬಿಪಿಎಲ್ ಕಾರ್ಡ್ ತಪ್ಪಬಾರದು: ಸಿಎಂ ಸಿದ್ದರಾಮಯ್ಯ

ಸರ್ಕಾರಿ ನೌಕರರು ಬಿಪಿಎಲ್​ಗೆ ಅರ್ಹರಲ್ಲ. ಅವರಿಗೆ ಎಪಿಎಲ್ ಕೊಡಿ. ಯಾರಾದರೂ ಬಿಪಿಎಲ್​ನವರು ಇದ್ದರೆ ಅರ್ಜಿ ಹಾಕಿ. ಅಂತಹವರಿಗೆ ಮತ್ತೆ ಕಾರ್ಡ್ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು. | Read More

ETV Bharat Live Updates - CM CLARIFIES ON BPL CARD

06:17 PM, 19 Nov 2024 (IST)

ಸಾಲದ ಪ್ರಮಾಣ ಶೇ.58ರಷ್ಟು ಕಡಿತ, ನಬಾರ್ಡ್​ನಿಂದ ರಾಜ್ಯಕ್ಕೆ ಅನ್ಯಾಯ: ಸಚಿವ ಕೆ.ಎನ್.ರಾಜಣ್ಣ

ನಬಾರ್ಡ್​ನಿಂದ 5600 ಕೋಟಿ ರೂ.ಗೂ ಹೆಚ್ಚು ಹಣ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಈ ಬಾರಿ 2,340 ಕೋಟಿ ರೂ ಬಂದಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. | Read More

ETV Bharat Live Updates - NABARD

05:42 PM, 19 Nov 2024 (IST)

ಹುಬ್ಬಳ್ಳಿ: ಚಾಕು ಇರಿದು ಅತ್ತಿಗೆ ಕೊಂದಿದ್ದ ಮೈದುನ ಅರೆಸ್ಟ್​, ಕಮಿಷನರ್​​ ಹೇಳಿದ್ದಿಷ್ಟು

ಅತ್ತಿಗೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮೈದುನನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. | Read More

ETV Bharat Live Updates - MAN KILLED SISTER IN LAW

05:06 PM, 19 Nov 2024 (IST)

ತ್ಯಾವರೆಕೊಪ್ಪ ಹುಲಿ - ಸಿಂಹಧಾಮಕ್ಕೆ ಕೇರಳದಿಂದ ಐದು ಹೊಸ ಅತಿಥಿಗಳ ಆಗಮನ : ಪ್ರಾಣಿ ಪ್ರಿಯರು ಪುಲ್‌ ಖುಷ್

ಕೇರಳದಿಂದ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ - ಸಿಂಹಧಾಮಕ್ಕೆ ಐದು ಹೊಸ ಅತಿಥಿಗಳ ಆಗಮನವಾಗಿದೆ. | Read More

ETV Bharat Live Updates - NEW ANIMALS ARRIVED TO TYAVAREKOPPA

03:35 PM, 19 Nov 2024 (IST)

ತೀರ್ಥಯಾತ್ರೆಗೆ ತೆರಳಿದ್ದವರ ಮನೆಗೆ ಕನ್ನ; ಇಬ್ಬರ ಬಂಧನ

ಇಬ್ಬರು ಖದೀಮರನ್ನು ಬಂಧಿಸಿರುವ ವಿದ್ಯಾರಣ್ಯಪುರ ಠಾಣೆ ಪೊಲೀಸರು, ಅವರಿಂದ 41.36 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ ಪಡೆದಿದ್ದಾರೆ. | Read More

ETV Bharat Live Updates - JEWELERY THEFT CASE

03:24 PM, 19 Nov 2024 (IST)

ವಿಶ್ವ ಪಾರಂಪರಿಕ ತಾಣದಲ್ಲಿ ಜಾಗತಿಕ ಶ್ರೀಮಂತ ಪರಂಪರೆಯ ಕಾರುಗಳ ಪಯಣ

ಎಫ್​​ಹೆಚ್​ವಿಐ ಸಂಘಟನೆಯು ಬೆಲ್ಜಿಯಂ ಮೂಲದ ಡೆಸ್ಟಿನೇಷನ್ ರ‍್ಯಾಲಿ ಸಂಸ್ಥೆಯ ಜತೆಗೂಡಿ ವಿಂಟೇಜ್ ಕಾರುಗಳ ಪ್ರವಾಸ ಹಮ್ಮಿಕೊಂಡಿವೆ. | Read More

ETV Bharat Live Updates - WORLDS RICHEST HERITAGE CARS

03:13 PM, 19 Nov 2024 (IST)

ಬೆಂಗಳೂರಿನ ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಕೆ ಪ್ರಶ್ನಿಸಿ ಅರ್ಜಿ: ಕೇಂದ್ರ, ರಾಜ್ಯ ಮತ್ತು ಬಿಬಿಎಂಪಿಗೆ ನೋಟಿಸ್

ಬೀದಿ ನಾಯಿಗಳ ಸಂತಾನ ಹರಣಕ್ಕೆ ಅಳವಡಿಸುವ ಮೈಕ್ರೋಚಿಪ್ ರೀಡರ್‌ಗಳನ್ನು ಖರೀದಿಸಲು ಬಿಬಿಎಂಪಿ ಸಲ್ಲಿಸಿರುವ ಪ್ರಸ್ತಾವನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಕೇಂದ್ರ, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿಮಾಡಿದೆ. | Read More

ETV Bharat Live Updates - INSERT MICROCHIP TO STRAY DOGS

01:54 PM, 19 Nov 2024 (IST)

ನೆಲಮಂಗಲ: ಮಹಿಳೆ ಬಲಿ ಪಡೆದಿದ್ದ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ನಿರಂತರ ಕಾರ್ಯಾಚರಣೆ

ಭಾನುವಾರ ಸಂಜೆ ಮನೆಯ ಹಿಂದೆ ಹುಲ್ಲು ಕೊಯ್ಯಲು ಹೋಗಿದ್ದ ಮಹಿಳೆಯ ಮೇಲೆ ದಾಳಿ ಮಾಡಿದ್ದ ಚಿರತೆ ಮುಂಡವನ್ನು ಅಲ್ಲೇ ಬಿಟ್ಟು, ರುಂಡವನ್ನು ಹೊತ್ತೊಯ್ದಿತ್ತು. | Read More

ETV Bharat Live Updates - ಚಿರತೆ ಸೆರೆ ಕಾರ್ಯಾಚರಣೆ

11:48 AM, 19 Nov 2024 (IST)

ನಕ್ಸಲ್ ವಿಕ್ರಂ ಗೌಡ ಎನ್​ಕೌಂಟರ್: ಕಾರ್ಯಾಚರಣೆ ಮಾಹಿತಿ ಬಿಚ್ಚಿಟ್ಟ ಸಚಿವ ಜಿ.ಪರಮೇಶ್ವರ್

ಪೊಲೀಸರ ಎನ್​ಕೌಂಟರ್​ನಲ್ಲಿ 20 ವರ್ಷಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ನಕ್ಸಲ್ ವಿಕ್ರಂ ಗೌಡ ಹತರಾಗಿದ್ದಾರೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. | Read More

ETV Bharat Live Updates - NAXAL LEADER VIKRAM GOWDA ENCOUNTER

11:35 AM, 19 Nov 2024 (IST)

ಅಸ್ತಿತ್ವದಲ್ಲಿರದ ಕಂಪನಿಗಳಿಗೆ ನೌಕರರೆಂದು ನಕಲಿ ಇಎಸ್ಐ ಕಾರ್ಡ್ ಸೃಷ್ಟಿಸಿ ವಂಚನೆ ; ಸಿಸಿಬಿಯಿಂದ ಮೂವರ ಬಂಧನ

ಅಸ್ತಿತ್ವದಲ್ಲಿ ಇರದ ಕಂಪನಿಗಳ ನೌಕರರೆಂದು ನಕಲಿ ಇಎಸ್​ಐ ಕಾರ್ಡ್​ ಸೃಷ್ಟಿಸಿ ವಂಚಿಸಿದ ಮೂವರು ಆರೋಪಿಗಳು ಅಂದರ್​ ಆಗಿದ್ದಾರೆ. | Read More

ETV Bharat Live Updates - FAKE ESI CARD

11:13 AM, 19 Nov 2024 (IST)

ಚಿತ್ರದುರ್ಗ: ಪೊಲೀಸ್​ ಗಸ್ತಿನ ವೇಳೆ 6 ಬಾಂಗ್ಲಾ ನುಸುಳುಕೋರರು ವಶಕ್ಕೆ

6 ಜನ ಸುಮಾರು ವರ್ಷಗಳ ಹಿಂದಯೇ ಭಾರತಕ್ಕೆ ಬಂದು, ಕೋಲ್ಕತ್ತಾ ನಗರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು, ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನವುದು ವಿಚಾರಣೆಯಲ್ಲಿ ಬಯಲಾಗಿದೆ. | Read More

ETV Bharat Live Updates - CHITRADURGA

10:23 AM, 19 Nov 2024 (IST)

ರಾಯಚೂರು: ಪಿಡಿಒ ಪರೀಕ್ಷೆ ವೇಳೆ ಪ್ರತಿಭಟನೆ ನಡೆಸಿದ್ದ 12 ಪರೀಕ್ಷಾರ್ಥಿಗಳ ವಿರುದ್ಧ ಪ್ರಕರಣ

ಭಾನುವಾರ ನಡೆದ ಪಿಡಿಒ ಪರೀಕ್ಷೆ ವೇಳೆ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ, ಪರೀಕ್ಷೆ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ್ದರು. | Read More

ETV Bharat Live Updates - RAICHUR

09:37 AM, 19 Nov 2024 (IST)

ಉಡುಪಿ: ಎನ್​ಕೌಂಟರ್​ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತ

ಉಡುಪಿಯಲ್ಲಿ ನಡೆದ ಎನ್​ಕೌಂಟರ್​ನಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ. | Read More

ETV Bharat Live Updates - UDUPI

09:15 AM, 19 Nov 2024 (IST)

ರಾಜ್ಯದಲ್ಲಿ ಪಡಿತರ ಚೀಟಿ ಗದ್ದಲ: ಬಿಪಿಎಲ್​ ಕಾರ್ಡ್​ಗೆ ಯಾರು ಅನರ್ಹರು, ಈವರೆಗೆ ರದ್ದಾಗಿದ್ದೆಷ್ಟು? ಸಮಗ್ರ ವರದಿ

ಬಿಪಿಎಲ್ ಕಾರ್ಡ್ ರದ್ದು ವಿವಾದಕ್ಕೆ ಗುರಿಯಾಗಿದೆ. ಬಿಪಿಎಲ್ ಕಾರ್ಡ್ ಪಡೆಯಲು ಇರುವ ಅರ್ಹತೆ ಮತ್ತು ಮಾನದಂಡಗಳೇನು ಎಂಬುದರ ಕುರಿತು ಈಟಿವಿ ಭಾರತ ಕನ್ನಡ ಪ್ರತಿನಿಧಿ ವೆಂಕಟ ಪೊಳಲಿ ಮಾಡಿರುವ ಸಮಗ್ರ ವರದಿ ಇಲ್ಲಿದೆ.. | Read More

ETV Bharat Live Updates - BENGALURU

08:01 AM, 19 Nov 2024 (IST)

ಕಾರು ಅಡ್ಡಗಟ್ಟಿ ಹಣ ದರೋಡೆ ಪ್ರಕರಣಕ್ಕೆ ಟ್ವಿಸ್ಟ್​: ದೂರುದಾರ ಸೇರಿ ಮೂವರು ವಶಕ್ಕೆ - ಬೆಳಗಾವಿ ಎಸ್ಪಿ ಮಾಹಿತಿ

ದೂರುದಾರರು 75 ಲಕ್ಷ ಹಣ ಕಳ್ಳತನವಾಗಿದೆ ಎಂದಿದ್ದು, ಕಾರಲ್ಲಿ 1.01 ಕೋಟಿ ಸಿಕ್ಕಿತ್ತು. ಈ ಬಗ್ಗೆ ದೂರುದಾರರು ನೀಡಿದ ಉತ್ತರ ಅನುಮಾನ ಮೂಡಿಸಿದ್ದು, ಅವರನ್ನೂ ಸೇರಿಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್​ಪಿ ತಿಳಿಸಿದ್ದಾರೆ. | Read More

ETV Bharat Live Updates - BELAGAVI

07:17 AM, 19 Nov 2024 (IST)

ನಾವು ಯಾರ ಅನ್ನವನ್ನು ಕಸಿಯುತ್ತಿಲ್ಲ: ಡಿ. ಕೆ. ಶಿವಕುಮಾರ್

ಕೆಲ ಮಾನದಂಡಗಳ ಆಧಾರದ ಮೇಲೆ ಕೆಲವರ ರೇಷನ್​ ಕಾರ್ಡ್​ಗಳು ರದ್ದಾಗಿವೆ ಡಿಸಿಎಂ ಡಿ.ಕೆ.ಶಿವಕುಮಾರ್​ ಸ್ಪಷ್ಟನೆ ನೀಡಿದ್ದಾರೆ. | Read More

ETV Bharat Live Updates - BENGALURU

07:08 AM, 19 Nov 2024 (IST)

ಕಾವೇರಿ ನಿವಾಸದಲ್ಲಿ ಸಚಿವರ ಜೊತೆ ಸಿಎಂ ಸಭೆ: ರಾಜಕೀಯ ಬೆಳವಣಿಗೆ, ವಿಪಕ್ಷ ವಿರುದ್ಧ ತಂತ್ರದ ಬಗ್ಗೆ ಚರ್ಚೆ

ಸಂಪುಟ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿ, ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. | Read More

ETV Bharat Live Updates - BENGALURU

07:04 AM, 19 Nov 2024 (IST)

ರಾಜ್ಯ ವೈದ್ಯಕೀಯ ಕಾಲೇಜುಗಳ ಸ್ನಾತಕೋತ್ತರ ಕೋರ್ಸ್​ ಪ್ರವೇಶ ಶುಲ್ಕ 10% ಹೆಚ್ಚಿಸಿ ಸರ್ಕಾರ ಆದೇಶ

ರಾಜ್ಯದಲ್ಲಿನ KPCF, KRLMPCA & AMPCK ಸಂಘಗಳಡಿಯಲ್ಲಿ ಬರುವ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್​ಗಳ ಸೀಟುಗಳಿಗೆ ಪ್ರವೇಶ ಶುಲ್ಕ ಹೆಚ್ಚಿಸಲಾಗಿದೆ. | Read More

ETV Bharat Live Updates - BENGALURU

06:57 AM, 19 Nov 2024 (IST)

ಸಂವಿಧಾನ ವಿರೋಧಿಗಳು ಮನುಷ್ಯ ವಿರೋಧಿಗಳು: ಸಿಎಂ ಸಿದ್ದರಾಮಯ್ಯ

ಬಸವಾದಿ ಶರಣರು 12ನೇ ಶತಮಾನದಲ್ಲಿ ಮುನ್ನಡೆಸಿದ ಮಾನವೀಯ ಧರ್ಮವನ್ನು 15 ನೇ ಶತಮಾನದಲ್ಲಿ ಕನಕದಾಸರು ಮುಂದುವರೆಸಿದರು ಎಂದು ಸಿಎಂ ತಿಳಿಸಿದರು. | Read More

ETV Bharat Live Updates - BENGALURU
Last Updated : Nov 19, 2024, 10:33 PM IST

ABOUT THE AUTHOR

...view details