ವಿದ್ಯಾರ್ಥಿಗಳಲ್ಲಿ ಇರುವ ಉದ್ಯಮಶೀಲತೆ ಕೊರತೆ ನೀಗಿಸುವ ಸಲುವಾಗಿ ಕಂಪನಿಗಳು ಕಾಲೇಜುಗಳನ್ನು ದತ್ತು ಪಡೆದು, ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. | Read More
Karnataka News Today - Live Updates: ಕರ್ನಾಟಕ Thu Nov 21 2024 ಇತ್ತೀಚಿನ ಸುದ್ದಿ
Published : 9 hours ago
|Updated : 1 minutes ago
ಉದ್ಯಮಶೀಲತೆ ಹೆಚ್ಚಿಸಲು 100 ಉದ್ದಿಮೆಗಳಿಂದ 100 ಕಾಲೇಜುಗಳ ದತ್ತು: ಸಚಿವ ಪ್ರಿಯಾಂಕ್ ಖರ್ಗೆ
ದರ್ಶನ್ ಆರೋಗ್ಯದ ಕುರಿತ ವೈದ್ಯಕೀಯ ವರದಿ ಹೈಕೋರ್ಟ್‌ಗೆ ಸಲ್ಲಿಕೆ: ನ.26ಕ್ಕೆ ವಿಚಾರಣೆ ನಿಗದಿ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಆರೋಗ್ಯ ಸಂಬಂಧ ವೈದ್ಯಕೀಯ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ಗೆ ಸೂಚಿಸಿರುವ ಪೀಠ, ವಿಚಾರಣೆಯನ್ನು ಮುಂದೂಡಿದೆ. | Read More
14 ತಿಂಗಳ ಅತಿ ಕಿರಿಯ ಮಗುವಿಗೆ ಹೃದಯ ಕಸಿ ದೇಶದಲ್ಲೇ ಮೊದಲು; ನಾರಾಯಣ ಹೆಲ್ತ್ ಸಿಟಿ ವೈದ್ಯರ ಸಾಧನೆ
ನಾರಾಯಣ ಹೆಲ್ತ್ ಸಿಟಿ ವೈದ್ಯರ ತಂಡವು 14 ತಿಂಗಳ ಮಗುವಿಗೆ ಹೃದಯದ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಎರಡು ತಿಂಗಳ ಚಿಕಿತ್ಸೆಯ ಬಳಿಕ ಮಗುವನ್ನು ಡಿಶ್ಚಾರ್ಜ್ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. | Read More
ಸುಳ್ವಾಡಿ ವಿಷ ಪ್ರಸಾದ ದುರಂತ: ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ
ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಮತ್ತೊಮ್ಮೆ ಇಮ್ಮಡಿ ಮಹದೇವಸ್ವಾಮಿ ಅವರ ಜಾಮೀನು ಅರ್ಜಿ ವಜಾಗೊಂಡಿದೆ. | Read More
ರಾಜ್ಯಕ್ಕೆ ಒಳ್ಳೆಯದಾಗಿ, ನೆಮ್ಮದಿ ಸಿಗಲೆಂದು ಪ್ರಾರ್ಥನೆ: ಡಿಸಿಎಂ ಡಿ.ಕೆ.ಶಿವಕುಮಾರ್
ಸಮೀಕ್ಷೆ ಬಗ್ಗೆ ನನಗೆ ಯಾವತ್ತೂ ನಂಬಿಕೆ ಇಲ್ಲ, ಎಲ್ಲಾ ಕಡೆಯಿಂದಲೂ ದೇವರು ನಮಗೆ ಒಳ್ಳೆಯದು ಮಾಡುತ್ತಾನೆ ಎಂದು ಡಿ.ಕೆ. ಶಿವಕುಮಾರ್ ಉಪಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. | Read More
ಆದಿಚುಂಚನಗಿರಿ ಕ್ಷೇತ್ರದಿಂದ ಸಂಶೋಧನೆ, ಅಭಿವೃದ್ಧಿಗೆ ಆದ್ಯತೆ: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ
ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಕ್ಷೇತ್ರದ ಕುರಿತು ಮಾತನಾಡಿದ್ದಾರೆ. ಕ್ಷೇತ್ರವು ಬಡಜನರಿಗೆ, ಆರ್ಥಿಕ ದುರ್ಬಲರಿಗೆ ಬಹುದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ ಎಂದಿದ್ದಾರೆ. | Read More
ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ರೈಲು ಸೇವೆ
ಆರ್ಆರ್ಬಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯಿಂದ ಕಾಯ್ದಿರಿಸದ ವಿಶೇಷ ರೈಲುಗಳ ಸೇವೆ ಒದಗಿಸಲಾಗುತ್ತಿದೆ. | Read More
ಕಪ್ಪತಗುಡ್ಡದ ಮೇಲೆ ಸರ್ಕಾರದ ಕಣ್ಣು: ಗಣಿಗಾರಿಕೆ ಪ್ರಸ್ತಾವನೆ ಕೈ ಬಿಡುವಂತೆ ಆಗ್ರಹಿಸಿ ಪ್ರತಿಭಟನೆ
ನಂದಿವೇರಿ ಶಿವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದವು. | Read More
ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಸ್ವದೇಶಿ ನಿರ್ಮಿತ ಜಲ್ ದೋಸ್ತ್ ಪರಿಚಯ: ಏನಿದು ಜಲ್ ದೋಸ್ತ್?
ಬೆಂಗಳೂರು ಟೆಕ್ ಸಮ್ಮಿಟ್ 2024 ನಲ್ಲಿ ಸಿಎಸ್ಐಆರ್ ಮತ್ತು ಎನ್ಎಎಲ್ ಸಹಭಾಗಿತ್ವದಲ್ಲಿ ತಯಾರಾದ ಸ್ವದೇಶಿ ನಿರ್ಮಿತ ಜಲ್ ದೋಸ್ತ್ ಬಗ್ಗೆ ಮಾಹಿತಿ ಇಲ್ಲಿದೆ.. | Read More
ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ದೂರು ದಾಖಲಿಸುತ್ತೇನೆ : ಎಂ ಲಕ್ಷ್ಮಣ್
ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಅವರು ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ದೂರನ್ನ ದಾಖಲಿಸುತ್ತೇನೆ ಎಂದರು. | Read More
ಐತಿಹಾಸಿಕ ಕೆಲಗೇರಿ ಕೆರೆ ಅವ್ಯವಸ್ಥೆ ಕುರಿತು ಸ್ವಯಂಪ್ರೇರಿತ ಕೇಸ್ ದಾಖಲು: ಉಪ ಲೋಕಾಯುಕ್ತ ನ್ಯಾ. ಫಣೀಂದ್ರ
ಸಾರ್ವಜನಿಕರು ಓಡಾಡುವ ದಾರಿಯನ್ನು ಸ್ವಚ್ಛಗೊಳಿಸುವಂತೆ ಪಾಲಿಕೆಯವರಿಗೆ 20 ದಿವಸಗಳ ಗಡುವು ನೀಡಲಾಗಿದ್ದು, ಇಲ್ಲವಾದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ತಿಳಿಸಿದರು. | Read More
ದಿಢೀರ್ ಬಿಪಿಎಲ್ ರೇಷನ್ ಕಾರ್ಡ್ ರದ್ದು; ಹುಬ್ಬಳ್ಳಿಯಲ್ಲಿ ಪಡಿತರ ಚೀಟಿ ಹೋಗಿದ್ದಕ್ಕೆ ಜನರಿಗೆ ಸಂಕಷ್ಟ
ನಿಖರ ಕಾರಣವಿಲ್ಲದೆ ಹಲವರ ರೇಷನ್ ಕಾರ್ಡ್ಗಳು ರದ್ದಾಗುತ್ತಿದ್ದು, ಪಡಿತರ ರದ್ದಾದವರ ಗೋಳು ಕೇಳುವವರ್ಯಾರು ಎಂಬಂತಾಗಿದೆ. | Read More
ದಂಡ, ಇನ್ಶುರೆನ್ಸ್, ಹಿಟ್ ಆ್ಯಂಡ್ ರನ್ ಹೆಸರಿನಲ್ಲಿ ವಂಚನೆಗೆ ಯತ್ನ: ಸಾರ್ವಜನಿಕರಿಗೆ ಪೊಲೀಸರ ಸಲಹೆಗಳಿವು
ಸಂಚಾರಿ ಪೊಲೀಸರ ಹೆಸರಿನಲ್ಲಿ ಜನರಿಗೆ ಇಲ್ಲಸಲ್ಲದ ಆರೋಪ, ಮತ್ತಿತರ ಕಾರಣ ನೀಡಿ ವಂಚನೆಗೆ ಯತ್ನಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. | Read More
ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ತಾತ್ಕಾಲಿಕವಾಗಿ ನಿಲ್ಲಿಸಿದ ಸರ್ಕಾರ
ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ ಅವರು ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ಬಗ್ಗೆ ಮಾತನಾಡಿದ್ದಾರೆ. | Read More
ಸ್ಪೆಷಾಲಿಟಿ, ಗ್ರೀನ್, ಹಾಗೂ ಹೈಡ್ರೋಜನ್ ಆಧಾರಿತ ಸ್ಟೀಲ್ ತಯಾರಿಕೆಗೆ ಉತ್ತೇಜನ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
ಸಮಾರಂಭದಲ್ಲಿ ಡಾ.ಟಿ.ಪಿ.ಡಿ.ರಾಜನ್ ಅವರಿಗೆ ರಾಷ್ಟ್ರೀಯ ಲೋಹಶಾಸ್ತ್ರಜ್ಞ ಪ್ರಶಸ್ತಿ, ಡಾ.ಸಾಯಿ ಗೌತಮ್ ಕೃಷ್ಣನ್ ಮತ್ತು ಬಿರಾಜ್ ಕುಮಾರ್ ಸಾಹು ಅವರಿಗೆ ಯುವ ಲೋಹಶಾಸ್ತ್ರಜ್ಞ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. | Read More
ಆರ್ಡರ್ ಮಾಡದಿದ್ದರೂ ಮನೆಗೆ ಬಂದ ಹೇರ್ಡ್ರೈಯರ್: ಆನ್ ಮಾಡುತ್ತಿದ್ದಂತೆ ಸ್ಫೋಟ, ಮಹಿಳೆಯ ಎರಡೂ ಮುಂಗೈ ಕಟ್
ಬಾಗಲಕೋಟೆಯಲ್ಲಿ ಹೇರ್ಡ್ರೈಯರ್ ಸ್ಫೋಟಗೊಂಡು ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಾಗಳಿಂದ ತನಿಖೆ ನಡೆಸುತ್ತಿದ್ದಾರೆ. | Read More
ಭವಿಷ್ಯದಲ್ಲಿ ಚಿಕಿತ್ಸಾ ಕ್ರಮವೇ ಬದಲಾಗಲಿದೆ: ಐಐಎಸ್ಸಿ ವಿಜ್ಞಾನಿ ಪ್ರೊ.ದೀಪಕ್
ಅಗತ್ಯಕ್ಕೆ ತಕ್ಕಂತೆ ಎಐ ಚಾಲಿತ ವ್ಯಕ್ತಿ ನಿರ್ದಿಷ್ಟಿತ ಚಿಕಿತ್ಸೆ ಪ್ರಚಲಿತಕ್ಕೆ ಬರಲಿದೆ ಎಂದು ಐಐಎಸ್ಸಿ ವಿಜ್ಞಾನಿ ಪ್ರೊ.ದೀಪಕ್ ಹೇಳಿದರು. | Read More
ನಿರ್ಮಲಾ ಸೀತಾರಾಮನ್ ಭೇಟಿಯಾದ ಸಿಎಂ ಸಿದ್ದರಾಮಯ್ಯ: ನಬಾರ್ಡ್ ಸಾಲ ಮಿತಿ ಹೆಚ್ಚಿಸಲು ಮನವಿ
ದೆಹಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ, ನಬಾರ್ಡ್ ಸಾಲ ಮಿತಿ ಹೆಚ್ಚಿಸುವಂತೆ ಮನವಿ ಸಲ್ಲಿಸಿದರು. | Read More
ಅಂಚೆ ಚೀಟಿ ಸಂಗ್ರಹ: ಗಿನ್ನೆಸ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ನಿರ್ಮಿಸಿದ ಉಡುಪಿಯ ನಿವೃತ್ತ ನೌಕರ
ಶಿಕ್ಷಕರೊಬ್ಬರ ಮಾತಿಗೆ ಕಿವಿಗೊಟ್ಟು ಆರಂಭಿಸಿದ ಅಂಚೆಚೀಟಿ ಸಂಗ್ರಹ ಹವ್ಯಾಸ ಡೇನಿಯಲ್ ಮೊಂತೇರೊ ಅವರನ್ನು ಇಂದು ವಿಶ್ವಮಟ್ಟದಲ್ಲಿ ಗುರುತಿಸಿದೆ. ಈ ಕುರಿತು ಈಟಿವಿ ಭಾರತ ಕನ್ನಡ ಪ್ರತಿನಿಧಿ ಆದಿತ್ಯ ಐತಾಳ್ ಮಾಡಿರುವ ವಿಶೇಷ ವರದಿ ಇಲ್ಲಿದೆ.. | Read More
ರೇಷನ್ ಕಾರ್ಡ್ ರದ್ದತಿ; ಯಾರಿಗೆ ಗೃಹಲಕ್ಷ್ಮೀ ಹಣ ಬರುತ್ತೆ, ಯಾರಿಗೆ ಬರಲ್ಲ? ಗೊಂದಲಕ್ಕೆ ಸಚಿವರ ಸ್ಪಷ್ಟನೆ
ರೇಷನ್ ಕಾರ್ಡ್ ರದ್ದತಿಯಿಂದ ಯಾರಿಗೆ ಗೃಹಲಕ್ಷ್ಮೀ ಹಣ ಬರುತ್ತೆ, ಯಾರಿಗೆ ಬರಲ್ಲ ಎಂಬ ಗೊಂದಲ ಸೃಷ್ಟಿಯಾಗಿದ್ದು ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. | Read More
ವಿಕ್ರಂ ಗೌಡ ಒಬ್ಬ ನಕ್ಸಲ್, ಅದು ನಕಲಿ ಎನ್ಕೌಂಟರ್ ಅಲ್ಲ: ಗೃಹ ಸಚಿವ ಜಿ. ಪರಮೇಶ್ವರ್
ಆತನ ಚಟುವಟಿಕೆಗಳನ್ನು ಗಮನಿಸಿದ ನಂತರ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಲಾಗಿದೆ. ಅದು ನಕಲಿ ಎನ್ಕೌಂಟರ್ ಅಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ. | Read More
ಅಪಘಾತದಲ್ಲಿ ಮಡಿದ ಮಗನ ನೆನಪಿಗೆ ಗೋಶಾಲೆ ತೆರೆದ ದಂಪತಿ: ಅನಾಥ, ಗಾಯಗೊಂಡ ಹಸುಗಳ ಆರೈಕೆ
ಹಾವೇರಿಯ ದಂಪತಿ ಅಪಘಾತದಲ್ಲಿ ಮೃತಪಟ್ಟ ತಮ್ಮ ಮಗನ ನೆನಪಿಗಾಗಿ ಆತನ ಜನ್ಮದಿನದಂದು ಗೋಶಾಲೆ ತೆರೆದಿದ್ದು, 38 ಹಸುಗಳನ್ನು ಮಕ್ಕಳಂತೆ ಪೋಷಿಸುತ್ತಿದ್ದಾರೆ. | Read More
ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಶೀಘ್ರದಲ್ಲಿಯೇ ಹೊಸ ರೂಪದೊಂದಿಗೆ ಪುನಾರಂಭ: ಮರುಕಳಿಸಲಿದೆ ಗತವೈಭವ: ಏನಿದರ ವೈಶಿಷ್ಟ್ಯ
ಈ ತಿಂಗಳ ಅಂತ್ಯಕ್ಕೆ ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣ ಕಾರ್ಯಾರಂಭಕ್ಕೆ ಸಿದ್ಧಗೊಳ್ಳಲಿದ್ದು, ಏನೆಲ್ಲ ವಿಶೇಷ ಸೌಲಭ್ಯಗಳನ್ನು ಒಳಗೊಂಡಿದೆ ಎಂಬ ಕುರಿತಂತೆ ಈಟಿವಿ ಭಾರತದ ಪ್ರತಿನಿಧಿ ಹೆಚ್ ಬಿ ಗಡ್ಡದ ನೀಡಿರುವ ವಿಶೇಷ ವರದಿ ಇಲ್ಲಿದೆ. | Read More
ನಕ್ಸಲ್ ಆರೋಪಿ ಸಾವಿತ್ರಿ ಬಾಡಿ ವಾರೆಂಟ್ ಮರುಪರಿಶೀಲಿಸಲು ಅಧೀನ ನ್ಯಾಯಾಲಯಕ್ಕೆ ಸೂಚನೆ
ನಕ್ಸಲ್ ಚಳವಳಿಯಲ್ಲಿ ಭಾಗಿಯಾದ ಆರೋಪದ ಮೇಲೆ ಕೇರಳ ಪೊಲೀಸರ ವಶದಲ್ಲಿರುವ ಸಾವಿತ್ರಿ ಅವರ ವಿರುದ್ಧ ಬಾಡಿ ವಾರೆಂಟ್ ಜಾರಿ ಕುರಿತ ಮನವಿಯನ್ನು ಮರು ಪರಿಶೀಲಿಸುವಂತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. | Read More
ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ವಿಧಿವಶ
ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. | Read More
ಬೆಂಗಳೂರು ಸೇರಿದಂತೆ ರಾಜ್ಯದ ನಾಲ್ಕು ಕಡೆಗಳಲ್ಲಿ ಲೋಕಾಯುಕ್ತ ದಾಳಿ
ಅಧಿಕ ಆಸ್ತಿಗಳಿಕೆ ಆರೋಪದಡಿ ನಾಲ್ವರು ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. | Read More
ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ, ಟ್ರಾಮಾ ಕೇರ್ ಸೆಂಟರ್ಗೂ ಚಾಲನೆ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ದಾವಣಗೆರೆಯ ಚಿಗಟೇರಿಯಲ್ಲಿ 30 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ. | Read More
ಬೆಂಗಳೂರು ಟೆಕ್ ಸಮ್ಮಿಟ್ 2024: ಇನ್ಫೋಸಿಸ್‌ಗೆ 'ಕರ್ನಾಟಕದ ಐಟಿ ರತ್ನ' ಪ್ರಶಸ್ತಿ
ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ರಾಜ್ಯದ ವಿವಿಧ ಐಟಿ ಕಂಪನಿಗಳಿಗೆ ಭಾರತೀಯ ಸಾಫ್ಟ್ವೇರ್ ಪಾರ್ಕ್ಗಳ ಕೂಟ (ಎಸ್.ಟಿ.ಪಿ.ಐ) ನೀಡುವ ಪುರಸ್ಕಾರ ನೀಡಲಾಯಿತು. | Read More
ಸರ್ಕಾರಿ ನೌಕರರು, IT ಪಾವತಿದಾರರ BPL ಕಾರ್ಡ್ ಮಾತ್ರ ರದ್ದು, ಅರ್ಹರ ಕಾರ್ಡ್ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡಿ: ಸಿಎಂ
ಅನರ್ಹರ ಪಡಿತರ ಚೀಟಿ ರದ್ದು ನಿರ್ಧಾರ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಸಿಎಂ ಸಿದ್ದರಾಮಮಯ್ಯ ಮಧ್ಯಪ್ರವೇಶಿಸಿ, ಅರ್ಹ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ತಕ್ಷಣವೇ ವಾಪಸ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. | Read More
ಸಿದ್ದರಾಮಯ್ಯ ಭಾವ ಮೈದುನನಿಗೆ ಜಮೀನು ಮಾರಿದ್ದ ದೇವರಾಜು ಅವರಿಂದ ಹೈಕೋರ್ಟ್‌ಗೆ ಮೇಲ್ಮನವಿ
ಮುಡಾ ಹಗರಣದಲ್ಲಿ ಲೋಕಾಯುಕ್ತ ತನಿಖೆಗೆ ಒಳಗಾಗಿರುವ ಜೆ.ದೇವರಾಜು ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. | Read More
ಮರಕ್ಕೆ ಡಿಕ್ಕಿ ಹೊಡೆದು ಕ್ರೂಸರ್ ಪಲ್ಟಿ: ಇಬ್ಬರ ದುರ್ಮರಣ, 15ಕ್ಕೂ ಹೆಚ್ಚು ಜನರಿಗೆ ಗಾಯ
ಮರಕ್ಕೆ ಡಿಕ್ಕಿ ಹೊಡೆದು ಕ್ರೂಸರ್ ವಾಹನ ಪಲ್ಟಿಯಾಗಿ ಇಬ್ಬರು ಮೃತಪಟ್ಟು, 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. | Read More