ಜೆಡಿಎಸ್ ಮಾಜಿ ಮುಖಂಡ ವಿಜಯ್ ಟಾಟಾಗೆ ಬೆದರಿಕೆ ಆರೋಪ ಸಂಬಂಧ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ. | Read More
Karnataka News Live Today - Thu Nov 07 2024 ಕರ್ನಾಟಕ ವಾರ್ತೆ
Published : Nov 7, 2024, 8:10 AM IST
|Updated : Nov 7, 2024, 10:42 PM IST
ವಿಜಯ್ ಟಾಟಾಗೆ ಬೆದರಿಕೆ ಆರೋಪ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಬೇಡ - ಹೈಕೋರ್ಟ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಪ್ರಭಾವ: ನಡ್ಡಾ ವಿರುದ್ಧದ ಎಫ್ಐಆರ್ ರದ್ದುಪಡಿಸಿದ ಹೈಕೋರ್ಟ್
ಕೇಂದ್ರ ಸಚಿವ ಜೆ. ಪಿ ನಡ್ಡಾ ವಿರುದ್ದದ ಎಫ್ಐಆರ್ನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. | Read More
ರೇಣುಕಾಸ್ವಾಮಿ ಕೊಲೆ; ಪವಿತ್ರಾಗೌಡ ಜಾಮೀನು ಅರ್ಜಿ ನವೆಂಬರ್ 21ಕ್ಕೆ ವಿಚಾರಣೆ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ನವೆಂಬರ್ 21ಕ್ಕೆ ವಿಚಾರಣೆಗೆ ಬರಲಿದೆ. | Read More
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ; ಸೈಲ್ ಸೇರಿ ಮತ್ತಿತರರು ಹೈಕೋರ್ಟ್ಗೆ ಅರ್ಜಿ; ಸಿಬಿಐಗೆ ನೋಟಿಸ್ ಜಾರಿ
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಸತೀಶ್ ಸೈಲ್ ಸೇರಿ ಮತ್ತಿತರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಸಿಬಿಐಗೆ ನೋಟಿಸ್ ಜಾರಿ ಮಾಡಿದೆ. | Read More
ಅಮೆರಿಕ ಚುನಾವಣೆಯಲ್ಲಿ ಕರುನಾಡ ಕುವರನ ಸಾಧನೆ: ದೊಡ್ಡಣ್ಣನ ನಾಡಲ್ಲಿ ಬೆಳಗಾವಿ ಹೆಜ್ಜೆ ಗುರುತು
ಬೆಳಗಾವಿ ಮೂಲದ ಶ್ರೀನಿವಾಸ್ ಥಾಣೇಧಾರ್ ಎಂಬುವರು ಅಮೆರಿಕದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಅವರು ಓಡಾಡಿದ ಜಾಗ, ಅವರಿದ್ದ ಮನೆ, ಓದಿದ ಶಾಲೆ ಬಗ್ಗೆ ಜಿಲ್ಲಾ ಪ್ರತಿನಿಧಿ ಸಿದ್ದನಗೌಡ ಪಾಟೀಲ ಮಾಡಿದ ವಿಶೇಷ ವರದಿ ಇಲ್ಲಿದೆ. | Read More
ಮುಡಾ ಸಾಮಾನ್ಯ ಸಭೆಯಲ್ಲಿ ಆದ ನಿರ್ಣಯಗಳು ಏನು?: ಸಭೆ ನಂತರ ಶಾಸಕರು ಹೇಳಿದ್ದೇನು?
ಇಂದು ಮುಡಾದಲ್ಲಿ ಸಾಮಾನ್ಯ ಸಭೆ ನಡೆದಿದ್ದು, ದೇಸಾಯಿ ವರದಿ ಬಂದ ನಂತರ ಮುಂದಿನ ಎಲ್ಲಾ ತೀರ್ಮಾನವನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ ಶಾಸಕರು ಮಾತನಾಡಿದ್ದಾರೆ. | Read More
ಬಂಗಾಳ ಕೊಲ್ಲಿಯ ನೈರುತ್ಯ ಉಪಸಾಗರದಲ್ಲಿ ಚಂಡಮಾರುತ: ರಾಜ್ಯದಲ್ಲಿ ಇನ್ನೂ ಮುಂದುವರೆಯಲಿರುವ ಹಿಂಗಾರು ಮಳೆ
ಈ ಬಾರಿ ಹಿಂಗಾರು ಮತ್ತು ಮುಂಗಾರು ಮಳೆ ವಾಡಿಕೆಯಂತೆಯಾಗಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಕೆಲವೆಡೆ ಮಳೆಯ ಕೊರತೆ ಕಂಡು ಬಂದಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ. | Read More
ಶಿವಮೊಗ್ಗ ಸ್ಪೆಷಲ್: ಅರೆ ಮಲೆನಾಡಿನಲ್ಲಿ ಕ್ರೇಜ್ ಹುಟ್ಟಿಸುವ ಹೋರಿ ಬೆದರಿಸುವ ಹಬ್ಬ; ಹೀಗಿದೆ ಇತಿಹಾಸ!
ಶಿವಮೊಗ್ಗ ಜಿಲ್ಲೆಯ ಅರೆ ಮಲೆನಾಡು ಜಿಲ್ಲೆಗಳಲ್ಲಿ ದೀಪಾವಳಿಯಿಂದ ಕಡೆ ಕಾರ್ತಿಕದ ತನಕ ಸುಮಾರು ಒಂದು ತಿಂಗಳುಗಳ ಕಾಲ ಹೋರಿ ಹಬ್ಬವನ್ನ ಆಚರಿಸಲಾಗುತ್ತದೆ. ಶಿವಮೊಗ್ಗದ ನಮ್ಮ ಪ್ರತಿನಿಧಿ ಕಿರಣ್ ಕುಮಾರ್ ನೀಡಿರುವ ವಿಶೇಷ ವರದಿ ಇಲ್ಲಿದೆ. | Read More
ತಿರುವು ಪಡೆದ ಅಥಣಿ ದಂಪತಿಯ ಸಾವು ಪ್ರಕರಣ: ಇದೊಂದು ವ್ಯವಸ್ಥಿತ ಜೊಡಿ ಕೊಲೆ ಎಂದ ಪೊಲೀಸರು
ಅಥಣಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ದಂಪತಿಯ ಸಾವು ಪ್ರಕರಣ ತಿರುವು ಪಡೆದುಕೊಂಡಿದ್ದು, ಇದೊಂದು ವ್ಯವಸ್ಥಿತ ಜೊಡಿ ಕೊಲೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಮಾಹಿತಿ ನೀಡಿದ್ದಾರೆ. | Read More
ನಮ್ಮ ಕ್ಷೇತ್ರದ ಜನತೆ ದೇವರಿದ್ದಂತೆ- ದೇವೇಗೌಡರಿಗೆ ಡಿಕೆಶಿ ಟಾಂಗ್; ಪುತ್ರನ ಪರ ಚೆನ್ನಮ್ಮ ಬೊಮ್ಮಾಯಿ ಮತಬೇಟೆ
ಶಿಗ್ಗಾಂವಿ ಉಪಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಮತಬೇಟೆ ಮುಂದುವರಿದಿದೆ. ಗುರುವಾರ ಡಿಸಿಎಂ ಡಿಕೆ ಶಿವಕುಮಾರ್ ಮತಯಾಚಿಸಿದರು. ಮತ್ತೊಂದೆಡೆ ಮಾಜಿ ಸಿಎಂ ಬೊಮ್ಮಾಯಿ ಪತ್ನಿ ಚೆನ್ನಮ್ಮ ಪುತ್ರನ ಪರ ಮತಬೇಟೆ ನಡೆಸಿದರು. | Read More
ಚಿತ್ರದಲ್ಲಿ ಅರಳಿದ ಭಗವದ್ಗೀತೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ನಿರ್ಮಿಸಿದ ಮಂಗಳೂರಿನ ಬಾಲಕ
ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಪ್ರಸನ್ನ ಕುಮಾರ್ ಭಗವದ್ಗೀತೆಯ 700 ಶ್ಲೋಕಗಳನ್ನು ಚಿಹ್ನೆಗಳಲ್ಲಿ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಮಂಗಳೂರು ಪ್ರತಿನಿಧಿ ವಿನೋದ್ ಪುದು ಅವರಿಂದ ವಿಶೇಷ ವರದಿ ಇಲ್ಲಿದೆ. | Read More
ಹಣದ ಬ್ಯಾಗ್ ಬಿಟ್ಟೋದ ವ್ಯಕ್ತಿ; ಸಿಕ್ಕ ಲಕ್ಷಾಂತರ ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ
ಜ್ಯೂಸ್ ಕುಡಿಯುವುದಕ್ಕೆ ಬಂದು ಹಣವಿದ್ದ ಬ್ಯಾಗ್ ಮರೆತು ಬಿಟ್ಟು ಹೋಗಿದ್ದ ವ್ಯಕ್ತಿಗೆ ಶಾಸಕ ಕೆ. ಎಸ್ ಬಸವಂತಪ್ಪ ಅವರು ಹಿಂದಿರುಗಿಸಿದ್ದಾರೆ. | Read More
ಚನ್ನಪಟ್ಟಣದಲ್ಲಿ ಉಭಯ ಅಭ್ಯರ್ಥಿಗಳಿಂದ ಭರ್ಜರಿ ಪ್ರಚಾರ: ಮಾಧ್ಯಮದವರ ಮುಂದೆ ಆಡಿಯೋ ಬಿಡುಗಡೆ ಮಾಡಿದ ಕುಮಾರಸ್ವಾಮಿ
ಚನ್ನಪಟ್ಟಣ ಉಪಚುನಾವಣಾ ರಂಗೇರಿದ್ದು, ಉಭಯ ಪಕ್ಷದ ಮುಖಂಡರು ತಮ್ಮ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಪರ ಹೆಚ್ಡಿ ಕುಮಾರಸ್ವಾಮಿ ಪ್ರಚಾರ ನಡೆಸಿದರೆ, ಯೋಗೇಶ್ವರ್ ಪರ ಡಿಕೆ ಸುರಶ್ ಕಣಕ್ಕಿಳಿದಿದ್ದರು. | Read More
ವಾದಾ ದಿಯಾ -ಪೂರಾ ಕಿಯಾ: ಮಹಾರಾಷ್ಟ್ರ ಬಿಜೆಪಿಯ ಸುಳ್ಳು ಜಾಹೀರಾತಿಗೆ ಅವರದ್ದೇ ಶೈಲಿಯಲ್ಲಿ ಸಿದ್ದರಾಮಯ್ಯ ತಿರುಗೇಟು
ಮೋದಿ ಪ್ರಧಾನಿಯಾಗುವುದಕ್ಕೂ ಮೊದಲು ನೀಡಿದ ಆಶ್ವಾಸನೆಗಳನ್ನು ಈಡೇರಿಸಿಲ್ಲ, ಆದರೆ ನಾವು ಹೇಳಿದ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ನಮ್ಮ ಮಾತು ಉಳಿಸಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. | Read More
ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳ ಪ್ರೋತ್ಸಾಹ ಧನ 1 ರಿಂದ 2 ಲಕ್ಷ ರೂ.ಗೆ ಹೆಚ್ಚಳ: ಸಚಿವ ಮಹದೇವಪ್ಪ
ಶಿಕ್ಷಣವೇ ಸಮಾಜವನ್ನು ಬದಲಿಸುವ ಕೀಲಿಕೈ ಎಂಬ ಅಂಶವನ್ನು ಮನಗಂಡು ಈ ಒಂದು ಮಹತ್ವದ ಘೋಷಣೆಯನ್ನು ಸರ್ಕಾರ ಮಾಡಿದೆ. ಇದರಿಂದ ಉನ್ನತ ಶಿಕ್ಷಣ ಪಡೆಯಬೇಕೆಂಬ ವಿದ್ಯಾರ್ಥಿಗಳ ಕನಸು ನನಸಾಗಲಿದೆ. | Read More
ವಕ್ಫ್ ಜೆಪಿಸಿ ನಿಯೋಗಕ್ಕೆ ಅಹವಾಲುಗಳ ಸುರಿಮಳೆ ; ನಿಯೋಗದ ಮುಂದೆ ಅಳಲು ತೋಡಿಕೊಂಡ ರೈತರು
ವಕ್ಫ್ ಜೆಪಿಸಿ ನಿಯೋಗಕ್ಕೆ ರೈತರು ಸೇರಿದಂತೆ ಹಲವು ಸಂಘಟನೆ ಮುಖಂಡರು ಅಹವಾಲುಗಳನ್ನ ಸಲ್ಲಿಸಿದ್ದಾರೆ. | Read More
ಸರ್ಕಾರಿ ಕಚೇರಿಗಳಲ್ಲಿ ಧೂಮಪಾನ, ತಂಬಾಕು ಉತ್ಪನ್ನ ಸೇವಿಸಿದರೆ ಶಿಸ್ತು ಕ್ರಮ: ಸರ್ಕಾರ ಆದೇಶ
ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಪರೋಕ್ಷ ಧೂಮಪಾನದಿಂದ ಸಾರ್ವಜನಿಕರನ್ನು ಮತ್ತು ಸರ್ಕಾರಿ ಸಿಬ್ಬಂದಿಯನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗಳಲ್ಲಿ ಧೂಮಪಾನ, ತಂಬಾಕು ಉತ್ಪನ್ನ ಸೇವನೆಯನ್ನು ನಿರ್ಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ. | Read More
ಮೆಕ್ಕಾ, ಮದೀನಾ ಉಮ್ರಾ ಯಾತ್ರೆಗೆ ಹೊರಟ ಮುಸ್ಲಿಂ ದಂಪತಿ: ಸತ್ಕರಿಸಿ, ಬೀಳ್ಕೊಟ್ಟ ಹಿಂದೂ ಧರ್ಮಿಯರು
ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ ತಮ್ಮ ನಿವಾಸದಲ್ಲಿ ಉಮ್ರಾ ಯಾತ್ರೆಗೆ ಹೊರಟಿರುವ ಮುಸ್ಲಿಂ ದಂಪತಿಯನ್ನು ಸತ್ಕರಿಸಿ, ಬೀಳ್ಕೊಟ್ಟರು. | Read More
ಹಾವೇರಿ: ಕೆರೆಗೆ ಬಿದ್ದ ಹೋರಿ ರಕ್ಷಿಸಲು ಹೋಗಿ ಇಬ್ಬರು ನೀರುಪಾಲು
ಕೆರೆಗೆ ಬಿದ್ದ ಹೋರಿಯನ್ನು ರಕ್ಷಣೆ ಮಾಡಲು ಹೋಗಿ ಇಬ್ಬರು ನೀರು ಪಾಲಾಗಿರುವ ಘಟನೆ ಹಾವೇರಿ ಜಿಲ್ಲೆಯ ಮಕರವಳ್ಳಿ ಗ್ರಾಮದಲ್ಲಿ ನಡೆದಿದೆ. | Read More
ಕೋರ್ಟ್ ಆದೇಶಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು: ರೈತನಿಗೆ ಪರಿಹಾರ ನೀಡದ್ದಕ್ಕೆ ಎಸಿ ಕಚೇರಿ ಸಾಮಗ್ರಿ ಜಪ್ತಿ!
ಎಸಿ ಕಚೇರಿಯಲ್ಲಿದ್ದ ಪಿಠೋಪಕರಣಗಳು, 5 ಕಂಪ್ಯೂಟರ್, 2 ಝೆರಾಕ್ಸ್ ಯಂತ್ರ, 3 ಪ್ರಿಂಟರ್, 3 ಕಪಾಟ್ ಸೇರಿದಂತೆ ಸುಮಾರು 3.54 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ನ್ಯಾಯಾಲಯದ ಸಿಬ್ಬಂದಿ ಇಂದು ಜಪ್ತಿ ಮಾಡಿದರು. | Read More
ಮದ್ಯಪಾನ ಮಾಡಿ ಮಹಿಳೆಗೆ ಚುಚ್ಚುಮದ್ದು ನೀಡಿದ ಆರೋಪ: ವೈದ್ಯನ ವಿರುದ್ಧ ಪ್ರಕರಣ ದಾಖಲು
ಮದ್ಯಪಾನ ಮಾಡಿ ಮಹಿಳೆಗೆ ಚುಚ್ಚುಮದ್ದು ನೀಡಿದ ಆರೋಪದ ಹಿನ್ನೆಲೆಯಲ್ಲಿ ವೈದ್ಯನ ವಿರುದ್ಧ ಎನ್ಸಿಆರ್ ದಾಖಲಾಗಿದೆ. | Read More
ಮಂಗಳೂರಿನಲ್ಲಿ ಪ್ಯಾಲೆಸ್ತೈನ್ ಪರ ಪ್ರತಿಭಟನೆ: ಎಡಪಕ್ಷದ 11 ಮಂದಿ ವಿರುದ್ಧ ಪ್ರಕರಣ ದಾಖಲು
ಎಎಸ್ಐ ಪ್ರವೀಣ್ ಅವರ ದೂರಿನ ಮೇರೆಗೆ, ಸಿಪಿಎಂ ಮತ್ತು ಸಿಪಿಐ ಪಕ್ಷದ ಮುಖಂಡರುಗಳ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. | Read More
ಧಾರವಾಡದಲ್ಲಿ ತಡರಾತ್ರಿ ಗುಂಡಿನ ಸದ್ದು: ದೂರು, ಪ್ರತಿದೂರು ದಾಖಲು
ಧಾರವಾಡದಲ್ಲಿ ತಡರಾತ್ರಿ ಎರಡು ಸುತ್ತು ಫೈರಿಂಗ್ ಆಗಿದ್ದು, ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಿ ನಾಲ್ವರು ವಶಕ್ಕೆ ಪಡೆಯಲಾಗಿದೆ. | Read More
ಭ್ರಷ್ಟಾಚಾರ ಆರೋಪ; ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಮದ್ಯ ಮಾರಾಟಗಾರರ ಸಂಘದ ಸಭೆ
ಅಬಕಾರಿ ಇಲಾಖೆ ಹಾಗೂ ಅಬಕಾರಿ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿರುವ ಹಿನ್ನೆಲೆ ಇಂದು ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ರಾಜ್ಯ ಮದ್ಯ ಮಾರಾಟಗಾರರ ಸಂಘದ ಸದಸ್ಯರು ಸಭೆ ನಡೆಸಿದರು. | Read More
ಸಂಸದೀಯ ಜಂಟಿ ಸಮಿತಿ ಒಂದು ನಾಟಕ ಕಂಪನಿ: ಡಿ.ಕೆ.ಶಿವಕುಮಾರ್ ವ್ಯಂಗ್ಯ
ವಕ್ಫ್ ಬೋರ್ಡ್ ಸಂಸದೀಯ ಜಂಟಿ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯಕ್ಕೆ ಆಗಮಿಸಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. | Read More
ಇದು ಸೈನಿಕರ ತವರೂರು! ಒಂದೇ ಗ್ರಾಮದಲ್ಲಿ 400 ಯೋಧರು, ಇವರಿಗೆ ತಾಯಿಯೇ ಸ್ಪೂರ್ತಿ
ದಾವಣಗೆರೆ ಜಿಲ್ಲೆಯ ತೋಳಹುಣಸೆ ದೇಶದ ಸೇವೆಗೆ ಹೆಚ್ಚು ಯೋಧರನ್ನು ನೀಡಿದ ಗ್ರಾಮ. ಇಲ್ಲಿ ಮನೆಗೆ ಒಬ್ಬರಲ್ಲ, ಇಬ್ಬರಂತೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. | Read More
ಉ.ಕ ಸಕ್ಕರೆ ಕಾರ್ಖಾನೆಗಳಲ್ಲಿ ನಾಳೆಯಿಂದ ಕಬ್ಬು ನುರಿಸುವಿಕೆ, 3,400 ರೂ. ಬೆಲೆ ನಿಗದಿ: ಸಚಿವ ಶಿವಾನಂದ ಪಾಟೀಲ
ಉತ್ತರ ಕರ್ನಾಟಕ ಸಕ್ಕರೆ ಕಾರ್ಖಾನೆಗಳಲ್ಲಿ ನವೆಂಬರ್ 8 ರಿಂದ ಕಬ್ಬು ನುರಿಸುವಿಕೆ ಪ್ರಾರಂಭಿಸಲಾಗುತ್ತಿದೆ. ಈ ಬಾರಿ ಕಬ್ಬಿಗೆ ಪ್ರತಿ ಟನ್‌ಗೆ 3,400 ರೂ. ಬೆಲೆ ನಿಗದಿಪಡಿಸಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಮಾಹಿತಿ ನೀಡಿದರು. | Read More
ಮುಡಾ ಹಗರಣ: 10 ತಿಂಗಳ ಬಳಿಕ ಇಂದು ಮೊದಲ ಸಾಮಾನ್ಯ ಸಭೆ, ಡಿಸಿ ಮತ್ತು ಶಾಸಕರು ಹೇಳಿದ್ದೇನು?
ಸೈಟ್ ಹಂಚಿಕೆ ಪ್ರಕರಣ ಬೆಳಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮುಡಾ ಸಾಮಾನ್ಯ ಸಭೆ ಕರೆದಿದೆ. | Read More
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಬರಾಕ್ ಒಬಾಮಾರನ್ನು ರಾಜ್ಯ ಸರ್ಕಾರ ಆಹ್ವಾನಿಸಿದ್ದೇಕೆ?
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಆಹ್ವಾನಿಸಿರುವುದರ ಹಿಂದಿರುವ ಉದ್ದೇಶವೇನು? ಎಂಬುದರ ವಿಶೇಷ ವರದಿ. | Read More
'ಕಾಂಗ್ರೆಸ್ ಪಕ್ಷಕ್ಕೆ ಕೇವಲ ದುಡಿಸಿಕೊಳ್ಳುವ ಎತ್ತುಗಳಷ್ಟೇ ಬೇಕು': ಜೆಡಿಎಸ್ ಸೇರಿದ ಶಾರದಾ ಚಂದ್ರಶೇಖರ್
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಶಾರದಾ ಚಂದ್ರಶೇಖರ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. | Read More
ವಕ್ಫ್ ಆಸ್ತಿ ವಿವಾದ: ಹುಬ್ಬಳ್ಳಿಯಲ್ಲಿ ವಕ್ಫ್ ಬೋರ್ಡ್ ಜೆಪಿಸಿ ಅಧ್ಯಕ್ಷ, ರೈತರಿಗೆ ನ್ಯಾಯ ಕೊಡಿಸುವ ಭರವಸೆ
ವಕ್ಫ್ ಆಸ್ತಿ ವಿವಾದದ ಬೆನ್ನಲ್ಲೇ ವಕ್ಫ್ ಬೋರ್ಡ್ ಸಂಸದೀಯ ಜಂಟಿ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ರಾಜ್ಯಕ್ಕೆ ನೀಡಿ, ರೈತರ ಮನವಿ ಸ್ವೀಕರಿಸಿದ್ದಾರೆ. | Read More
ಬೆಳಗಾವಿ ಟು ಲಂಡನ್: ರಾಣಿ ಚೆನ್ನಮ್ಮ ವಿವಿಯ 5 ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸದ ಅವಕಾಶ
ಬ್ರಿಟಿಷ್ ಕೌನ್ಸಿಲ್ ಹಾಗು ಉನ್ನತ ಶಿಕ್ಷಣ ಪರಿಷತ್ತಿನ ಸಹಯೋಗದಲ್ಲಿ ರಾಜ್ಯದ 6 ವಿಶ್ವವಿದ್ಯಾಲಯಗಳಿಂದ ಒಟ್ಟು 30 ವಿದ್ಯಾರ್ಥಿಗಳು ಲಂಡನ್‌ಗೆ ಅಧ್ಯಯನ ಪ್ರವಾಸ ಮಾಡಲಿದ್ದಾರೆ. | Read More
ಗಾಲ್ಫ್ ಕಾರ್ಟ್ ಚಲಾಯಿಸಿ ದಾಖಲೆ ಬರೆದ ಮುರುಗೇಶ್ ನಿರಾಣಿಯ 3 ವರ್ಷದ ಮೊಮ್ಮಗ
ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಮೊಮ್ಮಗ 3 ವರ್ಷ 10 ತಿಂಗಳಲ್ಲೇ ಗಾಲ್ಫ್ ಕಾರ್ಟ್ ಓಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಬರೆದಿದ್ದಾನೆ. | Read More
ಪೌತಿ ಖಾತೆಗೆ ₹25 ಸಾವಿರ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ
ಪೌತಿ ಖಾತೆ ಮಾಡಲು ಲಂಚ ಸ್ವೀಕರಿಸುವಾಗ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. | Read More
ವಕ್ಫ್ ಸಭೆಗೂ ವಿವಾದಕ್ಕೂ ಸಂಬಂಧವಿಲ್ಲ, ಯಾವ ಮುಸ್ಲಿಂ ರೈತರೂ ಸಭೆಗೆ ಬಂದಿಲ್ಲ: ಸಚಿವ ಜಮೀರ್
ನವೆಂಬರ್ 19ಕ್ಕೆ ವಕ್ಫ್ ಬೋರ್ಡ್ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರ ಸಭೆ ನಡೆಸಲಾಗಿದೆ ಎಂದು ಸಚಿವ ಜಮೀರ್ ತಿಳಿಸಿದರು. | Read More
ಗಂಗಾವತಿ: ಬುಕ್ಕಸಾಗರದ ಮಠದಲ್ಲಿ ತಾಮ್ರ ಶಾಸನಗಳು ಪತ್ತೆ
ಬುಕ್ಕಸಾಗರದ ಮಠದಲ್ಲಿ ತಾಮ್ರ ಶಾಸನಗಳು ಪತ್ತೆಯಾಗಿವೆ ಎಂದು ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ. | Read More
ನಿಖಿಲ್ ಪರ ಜಂಟಿ ಪ್ರಚಾರ: ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ - ಯಡಿಯೂರಪ್ಪ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಜಂಟಿಯಾಗಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತಯಾಚಿಸಿದರು. | Read More