ಮಾಜಿ ಸಿಎಂ ದಿ. ಎಸ್ ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಅವರು ಮನೆ ಮಾರಾಟಕ್ಕಿದೆ ಎಂದು ಪತ್ರಿಕೆಗೆ ಜಾಹೀರಾತು ನೀಡಿದ್ದಾರೆ. | Read More
Sun Nov 10 2024 Karnataka News Live: ಕರ್ನಾಟಕ ಇತ್ತೀಚಿನ ಸುದ್ದಿ - KARNATAKA NEWS TODAY SUN NOV 10 2024
Published : Nov 10, 2024, 8:10 AM IST
|Updated : Nov 10, 2024, 11:06 PM IST
'ರಾಷ್ಟ್ರನಾಯಕ ದಿ. ಎಸ್ ನಿಜಲಿಂಗಪ್ಪ ಮನೆ ಮಾರಾಟಕ್ಕಿದೆ': ಜಾಹೀರಾತು ನೀಡಿದ ಮಾಜಿ ಸಿಎಂ ಪುತ್ರ
ರಾಜ್ಯ ಕಾಂಗ್ರೆಸ್ ಸರ್ಕಾರ ಖಜಾನೆಯನ್ನು ದಿವಾಳಿ ಮಾಡಿದೆ: ಹೆಚ್.ಡಿ. ದೇವೇಗೌಡ
ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಉಪಚುನಾವಣೆ ಮುಗಿದ ಮೇಲೆ ಗೃಹಲಕ್ಷ್ಮಿ ಹಣ ಜಮೆ ಮಾಡುವುದನ್ನು ನಿಲ್ಲಿಸುತ್ತಾರೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಹೇಳಿದರು. | Read More
ಚನ್ನಪಟ್ಟಣ ಉಪಚುನಾವಣೆ ; ನಿಖಿಲ್ ಪರ ಸಂಸದ ತೇಜಸ್ವಿ ಸೂರ್ಯ ಪ್ರಚಾರ
ಚನ್ನಪಟ್ಟಣ ನಗರ ವ್ಯಾಪ್ತಿಯಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಮತಯಾಚನೆ ಮಾಡಿದರು. | Read More
ಪ್ರತಿ ತಿಂಗಳ 3ನೇ ಶನಿವಾರ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಕುಂದುಕೊರತೆ ಸಭೆ
ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಪ್ರತಿ ತಿಂಗಳ 3ನೇ ಶನಿವಾರದಂದು ಕುಂದುಕೊರತೆ ಸಭೆ ನಡೆಯಲಿದೆ. | Read More
700 ಕೋಟಿ ರೂ. ಹಗರಣ ಆರೋಪ; ಮೋದಿಗೆ ನೇರ ಸವಾಲು ಹಾಕಿದ ಸಿದ್ದರಾಮಯ್ಯ
ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. 700 ಕೋಟಿ ರೂ. ಹಣವನ್ನು ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗೆ ಕಾಂಗ್ರೆಸ್ ಬಳಸುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪಿಎಂಗೆ ಸಿಎಂ ಸವಾಲು ಹಾಕಿದ್ದಾರೆ. | Read More
ಚಿತ್ರಕಲಾ ಪರಿಷತ್ತಿನಲ್ಲಿ ರಷ್ಯಾದ ಪ್ರಸಿದ್ಧ ಕಲಾವಿದ ನಿಕೋಲಸ್ ರೋರಿಚ್ ಅಪರೂಪದ ಕಲಾಕೃತಿಗಳ ಪ್ರದರ್ಶನ
ರಷ್ಯಾದ ಪ್ರಸಿದ್ಧ ಕಲಾವಿದ ನಿಕೋಲಸ್ ರೋರಿಚ್ ಅವರ ಅಪರೂಪದ ಕಲಾಕೃತಿಗಳನ್ನ ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ಪ್ರದರ್ಶಿಸಲಾಗಿದೆ. | Read More
ಉಕ್ಕು ಕಾರ್ಖಾನೆಗಳಿಂದ ಮೋದಿ ಹೆಸರಲ್ಲಿ ಕುಮಾರಸ್ವಾಮಿ ₹1 ಸಾವಿರ ಕೋಟಿ ಸಂಗ್ರಹ: ಚಲುವರಾಯಸ್ವಾಮಿ ಆರೋಪ
ಚುನಾವಣೆಗಳಿಗೆ ಪ್ರಧಾನಿ ಮೋದಿ ಹೆಸರಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ₹1 ಸಾವಿರ ಕೋಟಿ ಸಂಗ್ರಹ ಮಾಡಿದ್ದಾರೆಂದು ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. | Read More
ಭಾರತವು ಹೆಚ್ಚು ಪದಕಗಳನ್ನು ಗೆಲ್ಲುವ ದೇಶವನ್ನಾಗಿ ಮಾಡಲು ತರಬೇತಿ ನೀಡಬೇಕು : ತೃಪ್ತಿ ಮುರುಗುಂಡೆ
ಮೇಜರ್ ಧ್ಯಾನಚಂದ್ ಪ್ರಶಸ್ತಿ ಪುರಸ್ಕೃತೆ ತೃಪ್ತಿ ಮುರುಗುಂಡೆ ಅವರು ಒಲಿಂಪಿಕ್ಸ್ನಲ್ಲಿ ಭಾರತ ಹೆಚ್ಚು ಪದಕಗಳನ್ನ ಗೆಲ್ಲುವ ದೇಶವನ್ನಾಗಿ ಮಾಡಲು ತರಬೇತಿ ನೀಡಬೇಕು ಎಂದಿದ್ದಾರೆ. | Read More
ತಂದೆ ಮಾಡಿರುವ ಅಭಿವೃದ್ಧಿ ಕಾರ್ಯ ನೋಡಿ ಜನ ನನಗೆ ಮತ ನೀಡುತ್ತಾರೆ: ಭರತ್ ಬೊಮ್ಮಾಯಿ
ಕಾಂಗ್ರೆಸ್ ನಾಯಕರು ಶಿಗ್ಗಾಂವಿ ಕ್ಷೇತ್ರಕ್ಕೆ ಬರುವುದು ಬಸವರಾಜ ಬೊಮ್ಮಾಯಿ ಮಾಡಿರುವ ಅಭಿವೃದ್ಧಿ ಕೆಲಸ ನೋಡಿಕೊಂಡು ಹೋಗಲು ಎಂದು ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. | Read More
ಪುತ್ತೂರು : 'ಗೃಹಲಕ್ಷ್ಮಿ' ಹಣದಿಂದ ಪತಿಗೆ ಸ್ಕೂಟರ್ ಕೊಡಿಸಿದ ಪತ್ನಿ
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಗೃಹಿಣಿಯೊಬ್ಬರು ಕೂಡಿಟ್ಟು ತನ್ನ ಪತಿಗೆ ಸ್ಕೂಟರ್ ಕೊಡಿಸಿದ್ದಾರೆ. | Read More
ಕೋವಿಡ್ ಹಗರಣ : ನ್ಯಾ. ಮೈಕಲ್ ಡಿ ಕುನ್ಹಾ ಕಮಿಟಿ ವರದಿ ಆಧಾರದ ಮೇಲೆ ತನಿಖೆ ಮಾಡುತ್ತೇವೆ - ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಅವರು ಕೋವಿಡ್ ಹಗರಣದ ಕುರಿತು ಮಾತನಾಡಿದ್ದಾರೆ. ಸಬ್ ಕಮಿಟಿ ರಿಪೋರ್ಟ್ ಬಂದ ನಂತರ ಕ್ಯಾಬಿನೆಟ್ನಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. | Read More
ಚಿಕ್ಕಮಗಳೂರಲ್ಲಿ ಶ್ರೀರಾಮ ಸೇನೆಯ ಅದ್ಧೂರಿ ಶೋಭಾಯಾತ್ರೆ: ಮಾಲಾಧಾರಿಗಳಿಂದ ದತ್ತ ಪಾದುಕೆ ದರ್ಶನ
ಶ್ರೀ ರಾಮಸೇನೆ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ದತ್ತ ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ, ಇನಾಂ ದತ್ತಾತ್ರೇಯ ಪೀಠದ ಗುಹೆಯಲ್ಲಿ ದತ್ತಪಾದುಕೆ ದರ್ಶನ ಪಡೆದರು. | Read More
ಜಿಪಿಎಸ್ ಟ್ರ್ಯಾಕರ್ ಹೊಂದಿದ್ದ ರಣಹದ್ದು ಪತ್ತೆ: ಜನರ ಆತಂಕ ದೂರ ಮಾಡಿದ ಕಾರವಾರ ಅರಣ್ಯಾಧಿಕಾರಿ
ಕಾರವಾರದ ಕೋಡಿಬಾಗ ನದಿವಾಡಾದಲ್ಲಿ ಕಾಣಿಸಿಕೊಂಡ ರಣಹದ್ದು ಸಂಶೋಧನೆಗೆ ಒಳಪಟ್ಟಿದೆ ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಜನರ ಆತಂಕವನ್ನು ದೂರ ಮಾಡಿದ್ದಾರೆ. | Read More
ಈ ಉಪಚುನಾವಣೆ ಯಾವುದೇ ಪಕ್ಷದ ಮೇಲೆ ಪರಿಣಾಮ ಬೀರಲ್ಲ: ಸಚಿವ ಚಲುವರಾಯಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆ ಪ್ರಚಾರದಲ್ಲಿರುವ ಸಚಿವ ಚಲುವರಾಯಸ್ವಾಮಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ. | Read More
ವೆಂಕಟಪ್ಪ ಆರ್ಟ್ ಗ್ಯಾಲರಿ ನವೀಕರಣ: ಮುಂದಿನ ತಿಂಗಳು ಹೊಸ ರೂಪದಲ್ಲಿ ಕಾರ್ಯಾರಂಭ
ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು 6 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದ್ದು, ಮುಂದಿನ ತಿಂಗಳಿನಿಂದ ಕಾರ್ಯಾರಂಭ ಮಾಡಲಿದೆ. | Read More
ಮೋದಿಯವರು ಎಲ್ಲಾ ಊರಲ್ಲಿ ಒಂದೊಂದು ಹೇಳ್ತಾರೆ : ಸಚಿವ ಸತೀಶ್ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರಧಾನಿ ಮೋದಿ ಕುರಿತು ಮಾತನಾಡಿದ್ದಾರೆ. ಮೋದಿ ತಮ್ಮ ಸ್ಥಾನಕ್ಕೆ ತಕ್ಕಂತೆ ಮಾತನಾಡಬೇಕು ಎಂದಿದ್ದಾರೆ. | Read More
ಭರತ್ ಬೊಮ್ಮಾಯಿಯನ್ನು ಸೋಲಿಸುವ ಶಕ್ತಿ ಕಾಂಗ್ರೆಸ್ನಲ್ಲಿ ಯಾರಿಗೂ ಇಲ್ಲ: ಯತ್ನಾಳ್
ಶಿಗ್ಗಾಂವಿಗೆ ಮುಖ್ಯಮಂತ್ರಿಗಳು 10 ಸಲ ಬರಲಿ, ಉಪಮುಖ್ಯಮಂತ್ರಿ ಇಲ್ಲೇ ಮೊಕ್ಕಾಂ ಹೂಡಲಿ. ಭರತ್ ಬೊಮ್ಮಾಯಿ 50 ಸಾವಿರ ಮತಗಳ ಅಂತರದಿಂದ ಗೆದ್ದು ಬರುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. | Read More
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಚಿವ ಜಮೀರ್ ಹೇಳಿಕೆ: ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಂದ ಎಜಿಗೆ ಸೂಚನೆ
ಮುಡಾ ಪ್ರಕರಣದ ಬಗ್ಗೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆ ನೀಡಿದ್ದ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಅಡ್ವೊಕೇಟ್ ಜನರಲ್ಗೆ ಸೂಚಿಸಿದ್ದಾರೆ. | Read More
ಬಿಟ್ ಕಾಯಿನ್ ಪ್ರಕರಣದ ಸಂಪೂರ್ಣ ತನಿಖೆ ಆಗಿಲ್ಲ: ಸಚಿವ ಜಿ ಪರಮೇಶ್ವರ್
ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಬಿಟ್ ಕಾಯಿನ್ ಪ್ರಕರಣದ ತನಿಖೆ ಬಗ್ಗೆ ಮಾತನಾಡಿದ್ದಾರೆ. | Read More
ಚನ್ನಪಟ್ಟಣ ಉಪಚುನಾವಣೆ: ನಾಳೆ ಬಹಿರಂಗ ಪ್ರಚಾರ ಅಂತ್ಯ, ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಕ್ಕೆ ನಿರ್ಬಂಧ
ನಾಳೆ ಸಂಜೆ 5.30ರಿಂದ ನ.20 ಸಂಜೆ 6.30ರ ವರೆಗೆ ಯಾವುದೇ ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸುದ್ದಿಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಡಿಸಿ ಯಶವಂತ್ ವಿ. ಗುರುಕರ್ ತಿಳಿಸಿದ್ದಾರೆ. | Read More
ಶಿಗ್ಗಾಂವಿಯಲ್ಲಿ ಸಮುದಾಯವಾರು ಹಣ ಹಂಚಲು ಕಾಂಗ್ರೆಸ್ ಶಾಸಕರ ನಡುವೆ ಪೈಪೋಟಿ ಶುರುವಾಗಿದೆ: ಬೊಮ್ಮಾಯಿ
ಸಂಸದ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಉಪಚುನಾವಣೆಯಲ್ಲಿ ಹಣ ಹಂಚುತ್ತಿರುವ ಕುರಿತು ಮಾತನಾಡಿದ್ದಾರೆ. ಸಮುದಾಯವಾರು ಶಾಸಕರು ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. | Read More
ಚಿಕ್ಕಮಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಬೀಟಮ್ಮ ಗ್ಯಾಂಗ್ನ ಆನೆ ಸಾವು
ವಿದ್ಯುತ್ ತಂತಿ ಸ್ಪರ್ಶಿಸಿ ಬೀಟಮ್ಮ ಗ್ಯಾಂಗ್ನ ಆನೆಯೊಂದು ಮೃತಪಟ್ಟಿರುವ ಘಟನೆ ಆಲ್ದೂರಿನ ತುಡುಕೂರು ಗ್ರಾಮದಲ್ಲಿ ನಡೆದಿದೆ. | Read More
ಮಹಿಳೆಗೆ ಕಿರುಕುಳ ಪ್ರಕರಣ: ಆರೋಪಿ ಲಾಕಪ್ ಡೆತ್, ಉಡುಪಿ ಎಸ್ಪಿ ಹೇಳಿದ್ದೇನು?
ಕೇರಳ ಮೂಲದ ವ್ಯಕ್ತಿಯ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಆತನ ಕುಟುಂಬಸ್ಥರು ಮುಂದೆ ನೀಡುವ ದೂರನ್ನು ಆಧರಿಸಿ ಕ್ರಮ ಜರುಗಿಸಲಾಗುವುದು ಎಂದು ಉಡುಪಿ ಎಸ್ಪಿ ಡಾ. ಕೆ.ಅರುಣ್ ಕುಮಾರ್ ತಿಳಿಸಿದ್ದಾರೆ. | Read More
ರಾಜ್ಯದಲ್ಲಿ ಅಸಮರ್ಥ ಸಿಎಂ ಇದ್ದಾರೆ : ಬಿ ವೈ ವಿಜಯೇಂದ್ರ
ಬಿಜೆಪಿಯ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ ಕುರಿತು ಮಾತನಾಡಿದ್ದಾರೆ. ರಾಜ್ಯದಲ್ಲಿ ಅಸಮರ್ಥ ಸಿಎಂ ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. | Read More
ಸಿಎಂ ರಾಜೀನಾಮೆಗೆ ಒತ್ತಾಯಿಸಿದ ವಿಜಯೇಂದ್ರ; ಕೋವಿಡ್ ಹಗರಣದ ವರದಿ ಬಿಚ್ಚಿಟ್ಟ ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ರಾಜೀನಾಮೆಗೆ ಒತ್ತಾಯಿಸಿರುವ ಬಿ. ವೈ ವಿಜಯೇಂದ್ರ ಕುರಿತು ಮಾತನಾಡಿದ್ದಾರೆ. 15 ದಿನಗಳಲ್ಲಿ ಏನೇನು ತಿರುವು ಪಡೆಯುತ್ತೆ ಎಂದು ಗೊತ್ತಾಗುತ್ತೆ ಎಂದಿದ್ದಾರೆ. | Read More
ಪ್ರಧಾನಿ ಇಡಿ, ಐಟಿ ಛೂಬಿಟ್ಟು ಕಂಪನಿಗಳಿಂದ ಹಣ ಸುಲಿಗೆ ಮಾಡಿಸಿದ್ದಾರೆ: ಯತೀಂದ್ರ
ಪ್ರಧಾನಿಯವರು ಇ.ಡಿ, ಐಟಿ ಛೂಬಿಟ್ಟು ಕಂಪನಿಗಳಿಂದ ಸುಲಿಗೆ ಮಾಡಿಸಿದ್ದಾರೆ. ಅಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ದೇಶಕ್ಕೆ ಅದಕ್ಕಿಂತ ದೊಡ್ಡ ದುರಂತ ಬೇರಿಲ್ಲ ಎಂದು ಎಂಎಲ್ಸಿ ಯತೀಂದ್ರ ಟೀಕಿಸಿದ್ದಾರೆ. | Read More
ಪ್ರಧಾನಿ ಮೋದಿ ಆಧಾರರಹಿತ ಆರೋಪ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್
ಪ್ರಧಾನಮಂತ್ರಿಗಳು ರಾಜಕೀಯ ಆರೋಪ ಮಾಡುತ್ತಿದ್ದಾರೆ. ಅವರು ಈ ಆರೋಪಗಳನ್ನು ಸಾಬೀತುಪಡಿಸಲಿ. ನಾವು ಯಾವುದೇ ಶಿಕ್ಷೆಗೆ ಬೇಕಾದರೂ ಗುರಿಯಾಗುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. | Read More
ಟ್ಯಾಂಕರ್ ಹರಿದು ಮಹಿಳೆ ಸಾವು: ತಪ್ಪಾಗಿ ತಿಳಿದು ಕೇಂದ್ರ ಸಚಿವರ ಕಾರಿಗೆ ಡಿವೈಎಫ್ಐ ಮುತ್ತಿಗೆ
ರಸ್ತೆಗುಂಡಿಗೆ ಬಿದ್ದ ಸ್ಕೂಟರ್‌ನಿಂದ ರಸ್ತೆಗೆಸೆಯಲ್ಪಟ್ಟ ಮಹಿಳೆ ಮೇಲೆಯೇ ಟ್ಯಾಂಕರ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಸ್ಥಳೀಯರು ಚೆಂಬುಗುಡ್ಡೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. | Read More
ಚುನಾವಣೆಯ ಫಲಿತಾಂಶ ಬಂದ ನಂತರ ಎಲ್ಲ ಆರೋಪಗಳಿಗೆ ಉತ್ತರ ಸಿಗಲಿದೆ: ಬಿಎಸ್ವೈ
ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. | Read More
SIDBI ಶಿವಮೊಗ್ಗ ಶಾಖಾ ಕಚೇರಿಗೆ ನಿರ್ಮಲಾ ಸೀತಾರಾಮನ್ ವರ್ಚುವಲ್ ಚಾಲನೆ
ಶಿವಮೊಗ್ಗದಲ್ಲಿ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯನ್ನು ತೆರೆಯಲಾಗಿದೆ. | Read More
ಬೆಳಗಾವಿ ಆರ್ಮಿ ರ‍್ಯಾಲಿಯಲ್ಲಿ ನೂಕುನುಗ್ಗಲು: ಯುವಕರ ಮೇಲೆ ಲಾಠಿ ಚಾರ್ಜ್
ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗದಿಂದ ಅರ್ಜಿ ಹಾಕಿದ್ದ ಅಭ್ಯರ್ಥಿಗಳ ಆಯ್ಕೆಗೆ ಇಂದು ಆಹ್ವಾನಿಸಲಾಗಿದ್ದು, ಓಪನ್ ರ‍್ಯಾಲಿಯಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಯುವಕರು ಭಾಗಿಯಾಗಿದ್ದರು. | Read More
ಇ-ಕಾಮರ್ಸ್ ಸರ್ವಿಸ್ ಪ್ರತಿನಿಧಿಗಳಿಂದ ಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನ ₹13.78 ಲಕ್ಷ ದಂಡ ಸಂಗ್ರಹ
ಶನಿವಾರ ಒಂದೇ ದಿನದಲ್ಲಿ 2,670 ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಪೊಲೀಸರು ಒಟ್ಟು 13.78 ಲಕ್ಷ ದಂಡ ಸಂಗ್ರಹಿಸಿದ್ದಾರೆ. | Read More
ದಾವಣಗೆರೆಯಲ್ಲಿ ಯುರೋಪ್ ಶೈಲಿಯ ವೃತ್ತಗಳ ಪ್ರಯೋಗ: ಏನಿದರ ಪ್ರಯೋಜನ?
ದಾವಣಗೆರೆಯ ವಿದ್ಯಾರ್ಥಿ ಭವನ ವೃತ್ತದಲ್ಲಿ ಯುರೋಪ್ ಶೈಲಿಯ ವಿಶೇಷ ವೃತ್ತಗಳ ಪ್ರಾಯೋಗಿಕ ನಿರ್ಮಾಣ ಕಾರ್ಯಾರಂಭಗೊಂಡಿದೆ. | Read More
ಚನ್ನಪಟ್ಟಣ ಉಪಚುನಾವಣೆ: ಕಡಿಮೆ ಮತದಾರರಿರುವ ಸಣ್ಣ ಸಮುದಾಯಗಳ ಮೇಲೆ ಜೆಡಿಎಸ್ ಕಣ್ಣು
ಉಪಚುನಾವಣೆ: ಚನ್ನಪಟ್ಟಣ ಕ್ಷೇತ್ರದಲ್ಲಿ ಕಡಿಮೆ ಮತದಾರರಿರುವ 15 ಸಣ್ಣ ಸಮುದಾಯಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ಆ ಸಮುದಾಯಗಳ ಮತ ಕ್ರೋಢೀಕರಣಕ್ಕೆ ಮುಂದಾಗಿದೆ. | Read More
ಸಿಎಂ ಸಿದ್ದರಾಮಯ್ಯನವರ ದ್ವೇಷ ರಾಜಕಾರಣಕ್ಕೆ ನಾವು ಬಗ್ಗಲ್ಲ: ಸಚಿವ ಪ್ರಹ್ಲಾದ್ ಜೋಶಿ
ಕೋವಿಡ್ ಹಗರಣದ ಕುರಿತು ಸರ್ಕಾರ ಪ್ರಾಸಿಕ್ಯೂಷನ್ಗೆ ಶಿಫಾರಸು ಮಾಡಿರುವುದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯನವರ ದ್ವೇಷದ ರಾಜಕಾರಣಕ್ಕೆ ನಾವು ಬಗ್ಗಲ್ಲ, ತನಿಖೆ ಎದುರಿಸುತ್ತೇವೆ ಎಂದರು. | Read More
ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸೋಲಿನ ದುಸ್ವಪ್ನದಿಂದ ಮೋದಿ ಹೊರಬಂದಿಲ್ಲ: ಸಿದ್ದರಾಮಯ್ಯ
ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ, ಅಪಮಾನವನ್ನು ಕನ್ನಡಿಗರು ಬಹಳ ದಿನ ಸಹಿಸಲಾರರು. ಕೇವಲ ಪಕ್ಷದ ಪ್ರಚಾರಕನಾಗಿ ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ ಎಂದು ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. | Read More
ಇಂದು ದತ್ತಮಾಲಾ ಅಭಿಯಾನ: 1,700ಕ್ಕೂ ಹೆಚ್ಚು ಪೊಲೀಸರ ನಿಯೋಜನೆ; ಬಾಟಲಿಯಲ್ಲಿ ಪೆಟ್ರೋಲ್ ನೀಡದಂತೆ ಸೂಚನೆ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂದು ದತ್ತಮಾಲಾ ಅಭಿಯಾನ ನಡೆಯಲಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. | Read More
ಸಿಎಂ ಆದೇಶವಿದ್ದಾಗ್ಯೂ ವಕ್ಫ್ ಆಸ್ತಿ ಖಾತೆ ಬದಲಾವಣೆಯ ನೆನಪಿನೋಲೆ ಹೊರಡಿಸಿದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ
ವಕ್ಫ್ ಆಸ್ತಿ ಖಾತೆ ಬದಲಾವಣೆಯ ಬಗ್ಗೆ ಕೈಗೊಂಡಿರುವ ಅನುಪಾಲನಾ ವರದಿ ಸಲ್ಲಿಸುವಂತೆ ಕೋರಿ ನೆನಪೋಲೆ ಹೊರಡಿಸಿದ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಕಂದಾಯ ಇಲಾಖೆ ಮುಂದಾಗಿದೆ. | Read More