ಬೆಂಗಳೂರು:ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ರಾಜ್ಯದ ಪ್ರಮುಖ ಜಲಾಶಯಗಳೆಲ್ಲ ಭರ್ತಿಯಾಗಿವೆ. ಹೆಚ್ಚುವರಿ ನೀರನ್ನು ಹೊರಕ್ಕೆ ಬಿಡುತ್ತಿರುವುದರಿಂದ ಹಲವಡೆ ಪ್ರವಾಹ ಪರಿಸ್ಥಿತಿ ಕೂಡ ಉಂಟಾಗಿದೆ. ರಾಜ್ಯದ ಯಾವ ಯಾವ ಜಲಾಶಯದಲ್ಲಿ ಎಷ್ಟು ಪ್ರಮಾಣದ ನೀರಿದೆ, ಯಾವ ಯಾವ ಜಲಾಶಯದಿಂದ ಎಷ್ಟು ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ ಎಂಬ ಮಾಹಿತಿ ಇಲ್ಲಿದೆ.
ಶಿವಮೊಗ್ಗ ಜಿಲ್ಲೆಯ ಅಣೆಕಟ್ಟೆಗಳ ಇಂದಿನ ನೀರಿನ ಮಟ್ಟದ ವಿವರ:
ತುಂಗಾ ಜಲಾಶಯ:
ಒಟ್ಟು ಎತ್ತರ : 588.24 ಮೀಟರ್
ಇಂದಿನ ನೀರಿನ ಮಟ್ಟ : 3.24 ಕ್ಯೂಸೆಕ್
ಒಳ ಹರಿವು : 72599 ಕ್ಯೂಸೆಕ್
ಹೊರ ಹರಿವು : 77866 ಸಾವಿರ ಕ್ಯೂಸೆಕ್
ಭದ್ರಾ ಜಲಾಶಯ:
ಒಟ್ಟು ಎತ್ತರ : 186 ಅಡಿ
ಇಂದಿನ ನೀರಿನ ಮಟ್ಟ : 183.10 ಅಡಿ
ಒಳ ಹರಿವು : 56152 ಕ್ಯೂಸೆಕ್
ಹೊರ ಹರಿವು : 65724 ಕ್ಯೂಸೆಕ್
ಲಿಂಗನಮಕ್ಕಿ ಜಲಾಶಯ:
ಒಟ್ಟು ಎತ್ತರ : 1819
ಇಂದಿನ ನೀರಿನ ಮಟ್ಟ-1814 ಅಡಿ
ಒಳ ಹರಿವು-53061 ಕ್ಯೂಸೆಕ್
ಹೊರ ಹರಿವು- 5236 ಕ್ಯೂಸೆಕ್
ಕಬಿನಿ ಜಲಾಶಯ:
ಗರಿಷ್ಠ ಮಟ್ಟ : 2284 ಅಡಿ (ft)
ಇಂದಿನ ಮಟ್ಟ : 2281.59 ಅಡಿ (ft)
ಒಳಹರಿವು : 49,206 ಕ್ಯೂಸೆಕ್
ಹೊರ ಹರಿವು : 50,000 ಕ್ಯೂಸೆಕ್
ಕೆಆರ್ಎಸ್ ಜಲಾಶಯ:
ಗರಿಷ್ಠ ಮಟ್ಟ : 124 ಅಡಿ (ft)
ಇಂದಿನ ಮಟ್ಟ : 122.32 ಅಡಿ (ft)
ಒಳಹರಿವು : 135,723 ಕ್ಯೂಸೆಕ್
ಹೊರ ಹರಿವು : 150,015 ಕ್ಯೂಸೆಕ್
ಬೆಳಗಾವಿ ಜಲಾಶಯಗಳ ಮಟ್ಟದ ವಿವರ:
ಮಲಪ್ರಭಾ ನದಿ, ರೇಣುಕಾ ಸಾಗರ(ನವೀಲು ತೀರ್ಥ) ಜಲಾಶಯ
ಗರಿಷ್ಠ ಮಟ್ಟ : 2079.50 ಅಡಿ
ಒಟ್ಟು ಸಾಮರ್ಥ್ಯ: 37.731 ಟಿಎಂಸಿ
ಇಂದಿನ ನೀರಿನ ಮಟ್ಟ: 32.666 ಟಿಎಂಸಿ (2075.75 ಅಡಿ)
ಒಳಹರಿವು: 14,968 ಕ್ಯೂಸೆಕ್
ಹೊರ ಹರಿವು: 13,394 ಸಾವಿರ ಕ್ಯೂಸೆಕ್
ಘಟಪ್ರಭಾ ನದಿ, ಹಿಡಕಲ್ ಜಲಾಶಯ:
ಗರಿಷ್ಠ ಮಟ್ಟ: 2175 ಅಡಿ
ಒಟ್ಟು ಸಾಮರ್ಥ್ಯ: 51 ಟಿಎಂಸಿ
ಇಂದಿನ ನೀರಿನ ಮಟ್ಟ: 47.782 ಟಿಎಂಸಿ (2170.867 ಅಡಿ)
ಒಳಹರಿವು: 33,515 ಕ್ಯೂಸೆಕ್
ಹೊರ ಹರಿವು: 38,644 ಕ್ಯೂಸೆಕ್
ಇನ್ನು ರಾಜ್ಯದಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅವಾಂತರ ಕೂಡ ಮಾಡಿದೆ. ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ (ಆ.1) ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲಾದ್ಯಂತ ಕೂಡ ವ್ಯಾಪಕ ಮಳೆಯಾಗುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಕರಾವಳಿಯ ಎಲ್ಲ ಹಾಗೂ ಜೋಯಿಡಾ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ಉಕ್ಕಿ ಹರಿಯುತ್ತಿರುವ ತುಂಗಭದ್ರೆಯಿಂದ ಸೇತುವೆಗಳು ಜಲಾವೃತ: ಗ್ರಾಮಗಳ ಸಂಪರ್ಕ ಕಡಿತ - bridge is flooded