ಶಿವಮೊಗ್ಗ: ಬಿಜೆಪಿ 70 ರಷ್ಟು ಕಾರ್ಯಕರ್ತರು ನನ್ನ ಜೊತೆಯಲ್ಲಿದ್ದಾರೆ. ನನ್ನದೇ ಒರಿಜಿನಲ್ ಬಿಜೆಪಿ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ತಮ್ಮ ಚುನಾವಣಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಚಿವ ಮಧು ಬಂಗಾರಪ್ಪ ನನ್ನನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದಿದ್ದಾರೆ. ಆದರೆ ನನ್ನದು ಎ ಟೀಮ್ ಬಿ.ವೈ. ರಾಘವೇಂದ್ರ ಅವರದ್ದು ಬಿ ಟೀಮ್ ಎಂದು ಹೇಳಿದ್ದಾರೆ. ಮಧು ಬಂಗಾರಪ್ಪ ನಮ್ಮ ಬಗ್ಗೆ ಮಾತನಾಡುತ್ತಾರೆ. ಮೊದಲು ಅವರು ಯಡಿಯೂರಪ್ಪ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡುತ್ತಿಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಶಿಕಾರಿಪುರದಲ್ಲಿ ನಾಗರಾಜ್ ಗೌಡ, ಅದೇ ರೀತಿ ಒಬಿಸಿಯ ಗೋಣಿ ಮಾಲತೇಶ್ಗೆ ಮೋಸ ಮಾಡಿದ್ರಿ. ಇದು ಚುನಾವಣಾ ಹೊಂದಾಣಿಕೆ ಅಲ್ಲವೆ ಎಂದು ಈಶ್ವರಪ್ಪ ಪ್ರಶ್ನಿಸಿದರು. ಗೀತಾ ಶಿವರಾಜ್ ಕುಮಾರ್ ನನ್ನ ಸಹೋದರಿ ಇದ್ದಂತೆ. ನೀವು ಯಡಿಯೂರಪ್ಪನವರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದಲೇ ನನಗೆ ಕಾಂಗ್ರೆಸ್ ನವರು ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.
ನನ್ನ ಜೊತೆ ಇರುವ ಹಿಂದುಗಳು ಯಾವುದಕ್ಕೂ ಜಗ್ಗಲ್ಲ, ಬಗ್ಗಲ್ಲ. ನಾನೀಗ ಚುನಾವಣೆ ಚಿಹ್ನೆಗಾಗಿ ಕಾಯುತ್ತಿದ್ದೇನೆ. ಏಪ್ರಿಲ್ 22 ರಂದು ಚಿಹ್ನೆ ನೀಡಲಾಗುತ್ತದೆ. ಅಂದಿನಿಂದ ನನ್ನ ಕಾರ್ಯಕರ್ತರು ಚುನಾವಣಾ ಪ್ರಚಾರ ನಡೆಸುತ್ತಾರೆ. ನನ್ನ ಚಿಹ್ನೆ ಯಾವುದು ಎಂದು ಮತದಾರರಿಗೆ ತೋರಿಸಿತ್ತಾರೆ. ಬಿಜೆಪಿಯ ಹಿಂದುತ್ವ ಈಶ್ಬರಪ್ಪ ಹಿಂದುತ್ವ ಒಂದೇ. ನಮ್ಮದು ಮೋದಿ ಹಿಂದುತ್ವ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಗರ್ವಾಲ್ ಅವರು ನಾನು ಯಾರೆಂದು ಗೂತ್ತಿಲ್ಲ ಎಂದು ಹೇಳಿದ್ದಾರೆ. ನಾನು ಗೆದ್ದ ಮೇಲೆ ಅಗರವಾಲ್ ರನ್ನೆ ಕರೆದುಕೊಂಡು ಮೋದಿ ಭೇಟಿ ಮಾಡಲು ಹೋಗುತ್ತೇನೆ ಎಂದರು. ನಾನು ಏನೆಂದು ಜನರಿಗೆ ತಿಳಿದಿದೆ.
ಶಾ ಸೇರಿದಂತೆ ಯಾರೇ ಬಂದು ಹೇಳಿದರೂ ಸಹ ನಾನು ಚುನಾವಣೆಯಿಂದ ಹಿಂದೆ ಸರಿಯಲ್ಲ. ನಾನು ಗೆದ್ದು ಮೋದಿಗಾಗಿ ಕೈ ಎತ್ತುತ್ತೇನೆ. ನಾನು ನಾಮಪತ್ರ ಸಲ್ಲಿಸೋಲ್ಲ ಎನ್ನುವವರಿಗೆ ನಿನ್ನೆ ನಾಮಪತ್ರ ಸಲ್ಲಿಸಿ ಉತ್ತರ ಸಿಕ್ಕಿದೆ. ವಿಜಯೇಂದ್ರ ಅವರು 19ರ ತನಕ ಕಾಲವಕಾಶವಿದೆ ಎನ್ನುತ್ತಿದ್ದಾರೆ. ಹಾಗೂ ನನ್ನನ್ನು ಎಂಎಲ್ಸಿ ಮಾಡಿ ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಈಗಾಗಲೇ ನನ್ನ ಅಭಿಮಾನಿಗಳು ಪ್ರಚಾರ ನಡೆಸುತ್ತಿದ್ದಾರೆ, ನಾನು ಎಲ್ಲರ ಬೆಂಬಲದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ, ಗೆಲ್ಲುತ್ತೇನೆ ಎಂದು ಈಶ್ವರಪ್ಪ ಹೇಳಿದ್ರು.
ಇದನ್ನೂ ಓದಿ:ಈಶ್ವರಪ್ಪ ಸುಳ್ಳು ಹೇಳಿ ನಾಮಪತ್ರ ಸಲ್ಲಿಕೆಗೆ ಕಾರ್ಯಕರ್ತರನ್ನು ಕರೆದೊಯ್ದಿದ್ದರು: ಬಿ. ವೈ ರಾಘವೇಂದ್ರ - B Y Raghavendra