ಬೆಂಗಳೂರು : ಉದ್ಯಮಿಯೊಬ್ಬರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತೆರಿಗೆ ವಂಚನೆ ಆರೋಪದಡಿ ಆಂಧ್ರಪ್ರದೇಶ ಮೂಲದ ಉದ್ಯಮಿ ವಂಶಿ ಎಂಬುವರಿಗೆ ಸಂಬಂಧಿಸಿದ ಬೆಂಗಳೂರಿನ ಜಯನಗರ 8ನೇ ಹಂತದಲ್ಲಿರುವ ಮನೆ, ಜೆ.ಸಿ. ರಸ್ತೆಯ ಜೈನ್ ಹೈಟ್ಸ್ ಕಟ್ಟಡದಲ್ಲಿರುವ ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಐಟಿ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದೆ.
ಬೆಂಗಳೂರು: ಆಂಧ್ರಪ್ರದೇಶ ಮೂಲದ ಉದ್ಯಮಿ ಮೇಲೆ ಐಟಿ ದಾಳಿ - ಐಟಿ ಅಧಿಕಾರಿಗಳು
ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ಆಂಧ್ರಪ್ರದೇಶ ಮೂಲದ ಉದ್ಯಮಿಯೊಬ್ಬರಿಗೆ ಸಂಬಂಧಿಸಿದ ಬೆಂಗಳೂರಿನಲ್ಲಿರುವ ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ.
ಐಟಿ ದಾಳಿ
Published : Feb 7, 2024, 1:46 PM IST
|Updated : Feb 7, 2024, 2:37 PM IST
ವಂಶಿ ರಸ್ತೆ ಗುತ್ತಿಗೆದಾರರಾಗಿದ್ದಾರೆ. ಇಂದು ಬೆಳಗ್ಗೆಯೇ ದಾಳಿ ಮಾಡಿರುವ ಐಟಿ ಅಧಿಕಾರಿಗಳ ತಂಡ, ಅವರ ಆದಾಯ ಮತ್ತು ವ್ಯವಹಾರದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ನಾಯಕ ಹರಕ್ ಸಿಂಗ್ ರಾವತ್ ಸೇರಿ ಮಾಜಿ ಸಚಿವರ ನಿವಾಸಗಳ ಮೇಲೆ ಇಡಿ ದಾಳಿ
Last Updated : Feb 7, 2024, 2:37 PM IST