ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಮಳೆಗೆ ಹಳಿ ಮೇಲೆ ಬಿದ್ದ ಮರ, ಇಂಟರ್ ಸಿಟಿ ರೈಲು ಸಂಚಾರದಲ್ಲಿ ವ್ಯತ್ಯಯ - Inter City Train

ಹೊಸನಗರ ತಾಲೂಕು ಅರಸಾಳು ರೈಲು ನಿಲ್ದಾಣದ ಬಳಿ ಹಳಿ ಮೇಲೆ ಮರ ಬಿದ್ದ ಪರಿಣಾಮ ಶುಕ್ರವಾರ ಕೆಲಕಾಲ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ.

ಮಳೆಗೆ ಹಳಿ ಮೇಲೆ ಬಿದ್ದ ಮರ, ಇಂಟರ್ ಸಿಟಿ ರೈಲು ಸಂಚಾರದಲ್ಲಿ ವ್ಯತ್ಯಯ
ಮಳೆಗೆ ಹಳಿ ಮೇಲೆ ಬಿದ್ದ ಮರ, ಇಂಟರ್ ಸಿಟಿ ರೈಲು ಸಂಚಾರದಲ್ಲಿ ವ್ಯತ್ಯಯ (ETV Bharat)

By ETV Bharat Karnataka Team

Published : Jul 27, 2024, 8:23 AM IST

ಮಳೆಗೆ ಹಳಿ ಮೇಲೆ ಬಿದ್ದ ಮರ (ETV Bharat)

ಶಿವಮೊಗ್ಗ: ಧಾರಾಕಾರ ಮಳೆಯಿಂದ ರಸ್ತೆ ಮತ್ತು ರೈಲು ಸಂಚಾರಕ್ಕೆ ಆಗಾಗ ಅಡಚಣೆ ಉಂಟಾಗುತ್ತಿದೆ. ಹೊಸನಗರ ತಾಲೂಕು ಅರಸಾಳು ರೈಲು ನಿಲ್ದಾಣದ ಬಳಿ ಹಳಿ ಮೇಲೆ ಮರ ಹಾಗೂ ವಿದ್ಯುತ್ ತಂತಿಗಳು ಬಿದ್ದ ಪರಿಣಾಮ ಶುಕ್ರವಾರ ಕೆಲಕಾಲ ಈ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮರ ತೆರವು ಮಾಡಿದ ಬಳಿಕ ಮತ್ತೆ ರೈಲು ಸಂಚಾರ ಆರಂಭವಾಗಿದೆ.

ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ ರೈಲು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟು ರಾತ್ರಿ 8 ಗಂಟೆಗೆ ತಾಳಗುಪ್ಪ ತಲುಪಬೇಕಿತ್ತು. ಆದರೆ ರಾತ್ರಿ 10 ಗಂಟೆಯಾದರು ರೈಲು ಅರಸಾಳು ರೈಲು ನಿಲ್ದಾಣದಲ್ಲಿಯೇ ನಿಂತಿತ್ತು. ಮಳೆಯಿಂದಾಗಿ ಮರ ರೈಲು ಹಳಿಗಳ ಮೇಲೆ ಬಿದ್ದಿದೆ. ಜೊತೆಗೆ ವಿದ್ಯುತ್ ತಂತಿಗಳು ಸಹ ಬಿದ್ದಿವೆ. ಸ್ಥಳಕ್ಕೆ ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂದು ಮರ ತೆರವು ಮಾಡುವ ಕಾರ್ಯಕ್ಕೆ ಮುಂದಾಗಿದ್ದರು. ಮಳೆಯಿಂದ ಮರ ತೆರವು ಕಾರ್ಯಕ್ಕೆ ಅಡಚಣೆ ಉಂಟಾಗಿತ್ತು. ರಾತ್ರಿ 11ರ ಬಳಿಕ ತೆರವು ಕಾರ್ಯಾಚರಣೆ ಮುಗಿದಿದ್ದು, ಆ ನಂತರ ರೈಲು ಸಂಚಾರ ಆರಂಭವಾಗಿದೆ.

ಕಳೆದ ವಾರದ ಸಹ ಬೆಳಗ್ಗೆ ಕುಂಸಿ ಬಳಿ ಮರ ಬಿದ್ದು ಇದೇ ಇಂಟರ್​ ಸಿಟಿ ರೈಲು ಸಂಚಾರಕ್ಕೆ ತಡೆ ಉಂಟಾಗಿತ್ತು. ತೆರವು ಕಾರ್ಯಾಚರಣೆ ಬಳಿಕ ಮತ್ತೆ ಸಂಚಾರ ಆರಂಭವಾಗಿತ್ತು. ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಅಲ್ಲಲ್ಲಿ ಅವಾಂತರಗಳು ಉಂಟಾಗುತ್ತಿವೆ.

ಇದನ್ನೂ ಓದಿ: ಕೆಆರ್​​ಎಸ್ ಬೃಂದಾವನಕ್ಕೆ ಹೊಸ ರೂಪ: ಕಾವೇರಿ ಪ್ರತಿಮೆ, ವಾಟರ್ ಪಾರ್ಕ್ ಸೇರಿ ಡಿಸ್ನಿ ಲ್ಯಾಂಡ್ ಮಾದರಿ ಅಭಿವೃದ್ಧಿಗೆ ಮುಂದಾದ ಸರ್ಕಾರ - KRS Brindavan Garden

ABOUT THE AUTHOR

...view details