ಮಂಗಳೂರು:ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಟ್ಯಾಂಡ್ ಅಪ್ ಪೆಡ್ಲಿಂಗ್ ಸ್ಪರ್ಧೆ ನಗರದ ಸಸಿಹಿತ್ಲು ಬೀಚ್ನಲ್ಲಿ ಇಂದು ಆರಂಭವಾಯಿತು. ಇಂದಿನಿಂದ ಮಾ.10 ರವರೆಗೆ ಮೂರು ದಿನಗಳ ಕಾಲ ಈ ಸ್ಪರ್ಧೆ ನಡೆಯಲಿದೆ.
ಪುರುಷರು ಮತ್ತು ಮಹಿಳೆಯರ ಮತ್ತು ಜೂನಿಯರ್ ಚಾಂಪಿಯನ್ ಜೊತೆಗೆ ಅಗ್ರ ಶ್ರೇಯಾಂಕದ ಅಂತಾರಾಷ್ಟ್ರೀಯ ಸ್ಟ್ಯಾಂಡ್ - ಅಪ್ ಪೆಡ್ಲರ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಪುರುಷರ ಓಪನ್, ಮಹಿಳೆಯರ ಓಪನ್, ಜೂನಿಯರ್ ಹುಡುಗ ಮತ್ತು ಹುಡುಗಿಯರು ಸೇರಿದಂತೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದೆ. ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸಿರುವ ಮೂರು ದಿನಗಳ ಸ್ಟ್ಯಾಂಡ್ - ಅಪ್ ಪೆಡ್ಲಿಂಗ್ ಉತ್ಸವ ಅಸೋಸಿಯೇಷನ್ ಆಫ್ ಪ್ಯಾಡಲ್‌ಸರ್ಫ್ ಪ್ರೊಫೆಷನಲ್ಸ್ ವರ್ಲ್ಡ್ ಟೂರ್‌ನೊಂದಿಗೆ (APP)ನೊಂದಿಗೆ ಆಯೋಜನೆಗೊಂಡಿದೆ.
ಈ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಟ್ಯಾಂಡ್ ಅಪ್ ಪೆಡ್ಲರ್‌ಗಳು ಭಾಗವಹಿಸುತ್ತಿದ್ದಾರೆ. ಭಾರತದ ಬಿಹಾರ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಸ್ಪರ್ಧಿಗಳು ಸೇರಿದಂತೆ ಸ್ಪೇನ್, ಥಾಯ್ಲೆಂಡ್, ಇಂಡೋನೇಷ್ಯಾ ದೇಶದ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 3 ಗಂಟೆಯ ಬಳಿಕ ಅಂತಾರಾಷ್ಟ್ರೀಯ ಮಟ್ಟದ ಸ್ಟ್ಯಾಂಡ್ ಅಪ್ ಪೆಡ್ಲಿಂಗ್ ರೇಸ್ ನಡೆಯಲಿದೆ. ಅಲ್ಲದೇ ಪ್ರತೀ ದಿನ ಸಂಜೆ ಚಲನಚಿತ್ರೋತ್ಸವದ ಭಾಗವಾಗಿ ಅಡ್ವೆಂಚರ್ ಮಾದರಿಯ ಸಿನಿಮಾಗಳ ಪ್ರದರ್ಶನ ಏರ್ಪಡಿಸಲಾಗುತ್ತಿದೆ.