ಕರ್ನಾಟಕ

karnataka

ETV Bharat / state

ಬಂಡೀಪುರಕ್ಕೆ ಮತ್ತೊಂದು ಗರಿ: ಅರಣ್ಯ ಇಲಾಖೆಯ 'ಯುವಮಿತ್ರ'ಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ - Bandipur Yuva Mitra - BANDIPUR YUVA MITRA

ಪರಿಸರ ರಕ್ಷಣೆಯ ಪ್ರಾಮುಖ್ಯತೆ ತಿಳಿಸಿಕೊಡಲು ಅರಣ್ಯ ಇಲಾಖೆ ಆರಂಭಿಸಿದ್ದ 'ಯುವಮಿತ್ರ' ಕಾರ್ಯಕ್ರಮಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ ಸಲ್ಲಿಸಿದೆ.

Yuva Mitra Program
ಬಂಡೀಪುರ 'ಯುವಮಿತ್ರ' ಕಾರ್ಯಕ್ರಮಕ್ಕೆ ಗೌರವ (ಈಟಿವಿ ಭಾರತ)

By ETV Bharat Karnataka Team

Published : May 3, 2024, 1:08 PM IST

ಚಾಮರಾಜನಗರ: ಭಾರತದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಬಂಡೀಪುರಕ್ಕೆ ಮತ್ತೊಂದು ಗೌರವ ಸಂದಿದೆ. ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ ಸಲ್ಲಿಸಿದೆ. ಹೌದು, ವಿದ್ಯಾರ್ಥಿಗಳಿಗೆ ಕಾಡಿನ ಬಗ್ಗೆ ಅರಿವು, ಅರಣ್ಯದ ಬಗ್ಗೆ ಜಾಗೃತಿ, ಪರಿಸರ ರಕ್ಷಣೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಡಲು ಆರಂಭಿಸಿದ್ದ 'ಯುವಮಿತ್ರ' ಕಾರ್ಯಕ್ರಮಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ ಸಲ್ಲಿಸಿದೆ. ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅತಿಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್​​ನಲ್ಲಿ ದಾಖಲಾಗಿದ್ದು, ಪ್ರಶಸ್ತಿ ವಿತರಿಸಲಾಗಿದೆ.

ಬಂಡೀಪುರ 'ಯುವಮಿತ್ರ' ಕಾರ್ಯಕ್ರಮ (ಈಟಿವಿ ಭಾರತ)

ಜಾಗೃತಿಯಲ್ಲಿ 8,000 ಮಂದಿ ಭಾಗಿ: ಬಂಡೀಪುರ ಯುವ ಮಿತ್ರ ಜಾಗೃತಿ ಕಾರ್ಯಕ್ರಮದಲ್ಲಿ ಒಟ್ಟು 8,410 ಮಂದಿ ಭಾಗಿಯಾಗಿದ್ದಾರೆ. ಸಫಾರಿ ವೀಕ್ಷಿಸಿ, ಕಾನನದ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಜೊತೆಗೆ ಅರಣ್ಯ ಸಂರಕ್ಷಣೆಯ ಮಹತ್ವ ಅರಿತಿದ್ದಾರೆ. 8,410 ಮಂದಿಯಲ್ಲಿ 7,019 ವಿದ್ಯಾರ್ಥಿಗಳು, 655 ಶಿಕ್ಷಕರು, 197 ಗ್ರಾಮ ಪಂಚಾಯಿತಿ ಸಿಬ್ಬಂದಿ, ಸದಸ್ಯರು, 395 ಸ್ಥಳೀಯ ರೈತರು ಮತ್ತು 143 ಮಂದಿ ಗಿರಿಜನರಿದ್ದರು. 2023ರ ಮಾ.3ರಿಂದ 2024ರ ಮಾ.8 ರವರೆಗೆ ಒಟ್ಟು 162 ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

'ಯುವಮಿತ್ರ'ಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ (ಈಟಿವಿ ಭಾರತ)

ಏನಿದು ಯುವಮಿತ್ರ ಕಾರ್ಯಕ್ರಮ? 2023ರಲ್ಲಿ ಅಂದಿನ ಬಂಡೀಪುರ ಸಿಎಫ್ಒ ಆಗಿದ್ದ ಡಾ.ಪಿ.ರಮೇಶ್ ಕುಮಾರ್ ಅವರಿಂದ ಬಂಡೀಪುರ ಯುವ ಮಿತ್ರ ಎಂಬ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುವರ್ಣ ಮಹೋತ್ಸವದ ನಿಮಿತ್ತ ಈ ಕಾರ್ಯಕ್ರಮ ರೂಪಿಸಿ ವಿದ್ಯಾರ್ಥಿಗಳಿಗೆ ಉಚಿತ ಸಫಾರಿ ಮಾಡಿಸಿ ಪ್ರಕೃತಿ ಶಿಕ್ಷಣ ನೀಡುವ ಕಾರ್ಯಕ್ರಮ‌ ಇದಾಗಿದೆ.

ಬಂಡೀಪುರ 'ಯುವಮಿತ್ರ' ಕಾರ್ಯಕ್ರಮ (ಈಟಿವಿ ಭಾರತ)

ಇದನ್ನೂ ಓದಿ:7 ವರ್ಷಗಳ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ ಹೈಸ್ಪೀಡ್ ಪ್ರವಾಸಿ ಪರೇಲಿ ಹಡಗು - High speed ship

ಕಾರ್ಯಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ "ಪರಿಸರ ಸ್ವಯಂ ಸೇವಕರು" ಎಂಬ ಗುರುತಿನ ಚೀಟಿ ಕೊಟ್ಟು ಅರಣ್ಯ ರಕ್ಷಣೆ ಜಾಗೃತಿಗೆ ಪ್ರೇರಣೆ ನೀಡುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಕಾಡು ಮತ್ತು ವನ್ಯಜೀವಿ ರಕ್ಷಣೆಯಲ್ಲಿ ಸ್ಥಳೀಯರ ಪಾತ್ರ ಮಹತ್ವದ್ದಾದ ಹಿನ್ನೆಲೆ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ರೂಪಿಸಲಾಗಿತ್ತು. ಬಳಿಕ, ಇದನ್ನು ಸ್ಥಳೀಯ ಗ್ರಾ.ಪಂ‌ ಸಿಬ್ಬಂದಿ, ರೈತರು, ಗಿರಿಜನರಿಗೆ ವಿಸ್ತರಿಸಲಾಗಿತ್ತು.

ಬಂಡೀಪುರ 'ಯುವಮಿತ್ರ' ಕಾರ್ಯಕ್ರಮ (ಈಟಿವಿ ಭಾರತ)

ಇದನ್ನೂ ಓದಿ:ಝೀರೋ ಬ್ಯಾಕ್ಟೀರಿಯ ಸಂಸ್ಕರಿಸಿದ ನೀರು: ಜಲಮಂಡಳಿಯಿಂದ ವಿಪ್ರೋ ಕಂಪನಿಗೆ ಸರಬರಾಜು - Zero bacteria water

ವಿದ್ಯಾರ್ಥಿಗಳಿದ್ದಾಗಲೇ ಅರಣ್ಯ ರಕ್ಷಣೆ ಬಗ್ಗೆ ಅರಿವು ಮೂಡಿಸಿದರೆ ಮುಂದೆ ಅನೂಕೂಲವಾಗಲಿದೆ ಎಂಬ ಆಶಯದಿಂದ ಈ ಕಾರ್ಯಕ್ರಮ ರೂಪಿಸಲಾಗಿತ್ತು. ಉಚಿತವಾಗಿ ಸಫಾರಿ ನಡೆಸಲು ಜಿಲ್ಲಾಡಳಿತದಿಂದ ಎರಡು ವಾಹನ ಖರೀದಿ ಮಾಡಲಾಗಿತ್ತು. ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿರುವುದು ಸಂತಸ ತಂದಿದೆ ಎಂದು ಹಿಂದಿನ ಬಂಡೀಪುರ ಸಿಎಫ್ಒ ಹಾಗೂ ಪ್ರಸ್ತುತ ಹುಲಿ ಸಂರಕ್ಷಿತ ಪ್ರದೇಶಗಳ ಕ್ಷೇತ್ರ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details