ಶಿವಮೊಗ್ಗ: ಜಿಲ್ಲೆಯಲ್ಲಿ ಆರಿದ್ರಾ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ನಾಲ್ಕೈದು ದಿನಗಳಿಂದ ವರುಣ ಆರ್ಭಟಿಸುತ್ತಿರುವದರಿಂದ ಕೆರೆ-ಕಟ್ಟೆಗಳು ತುಂಬಿವೆ. ಬಿಡುವು ಮಾಡಿ ಕೊಟ್ಟು ಮಳೆ ಬರುತ್ತಿರುವುದರಿಂದ ಬೇಸಾಯಕ್ಕೆ ಅನುಕೂಲಕರವಾಗುತ್ತಿದೆ. ಇದರಿಂದ ಭತ್ತದ ಬಿತ್ತನೆ, ನಾಟಿ ಕಾರ್ಯ ಜೋರಾಗಿದೆ.
ಅಣೆಕಟ್ಟೆಗಳಿಗೆ ಹೆಚ್ಚಿನ ಒಳ ಹರಿವು:ಮಳೆಯಿಂದ ಜಿಲ್ಲೆಯ ಎಲ್ಲಾ ಅಣೆಕಟ್ಟೆಗಳಲ್ಲಿನ ಒಳ ಹರಿವು ಹೆಚ್ವಾಗಿದೆ. ತುಂಗಾ ಅಣೆಕಟ್ಟೆಗೆ 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅದೇ ರೀತಿ 15 ಕ್ರಸ್ಟ್ ಗೇಟ್ ಮೂಲಕ ನದಿಗೆ 40 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಭದ್ರಾ ಅಣೆಕಟ್ಟೆಗೆ 4.098 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 348 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ 60.238 ಕ್ಯೂಸಕ್ ನೀರು ಹರಿದು ಬಂದಿದೆ. ನದಿ ಸೇರಿದಂತೆ ವಿದ್ಯುತ್ಗೆ 586 .24 ಕ್ಯೂಸೆಕ್ ನೀರು ಅಣೆಕಟ್ಟೆಯಿಂದ ಹೊರಕ್ಕೆ ಹೋಗುತ್ತಿದೆ. ವರಾಹಿ ಮಾಣಿ ಅಣೆಕಟ್ಟೆಗೆ 8.324 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೆರೆ-ಕಟ್ಟೆಗಳು ನಳನಳಿಸುತ್ತಿವೆ.
ಗುರುವಾರದ ನೀರಿನ ಮಟ್ಟದ ವಿವರ:
ತುಂಗಾ ಅಣೆಕಟ್ಟೆ:
- ಇಂದಿನ ನೀರಿನ ಮಟ್ಟ - 586.24 ಮೀಟರ್
- ಒಳ ಹರಿವು - 40 ಸಾವಿರ ಕ್ಯೂಸೆಕ್
- ಹೊರ ಹರಿವು -40 ಸಾವಿರ ಕ್ಯೂಸೆಕ್
- ಕಳೆದ ವರ್ಷ - 586.24 ಮೀಟರ್